T20 World Cup: ಹ್ಯಾಂಡ್‌ಶೇಕ್‌ ಬಗ್ಗೆ ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಆಘಾ ಹೇಳಿದ್ದೇನು?

T20 World Cup Pak Captain Salman Agha About Shaking Hands

ಶ್ರೀಲಂಕಾ: ಭಾರತ ಮತ್ತು ಪಾಕಿಸ್ತಾನ ನಡುವಿನ 2026 ರ ಟಿ 20 ವಿಶ್ವಕಪ್ (T20 World Cup) ಪಂದ್ಯದ ಮುನ್ನಾದಿನ ವಾತಾವರಣ ಬಹಳ ವಿಭಿನ್ನವಾಗಿದ್ದು, ಒಂದು ರೀತಿಯಲ್ಲಿ ಮೈದಾನಕ್ಕಿಂತ ಮೈದಾನದ ಹೊರಗೆ ಉದ್ವಿಗ್ನತೆ ಹೆಚ್ಚಾಗಿದೆ ಎನ್ನಬಹುದು.

ಪಾಕ್‌ ನಾಯಕನಿಗೆ ಪ್ರಶ್ನೆಗಳ ಸುರಿಮಳೆ

ಪಂದ್ಯಕ್ಕೂ ಮೊದಲು ಮಾಧ್ಯಮಗಳು ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಆಘಾ ಅವರ ಸಂದರ್ಶನ ಮಾಡಿದ್ದು, ಈ ಸಮಯದಲ್ಲಿ ಕ್ಯಾಪ್ಟನ್‌ ಆಟದ ತಂತ್ರಗಳ ಬಗ್ಗೆ ಮಾತ್ರವಲ್ಲದೇ, ಅನೇಕ ವಿಚಾರಗಳ ಬಗ್ಗೆ ಸಹ ಮಾತನಾಡಿದ್ದಾರೆ. ಅಲ್ಲದೇ, ಆಟದಲ್ಲಿ ಎಲ್ಲಾ ರಾಜಕೀಯ ಹೋಗಿ ಉತ್ತಮ ಸ್ವರೂಪಕ್ಕೆ ಮರಳಿ ಬರಬೇಕು ಎನ್ನುವ ಬಯಕೆಯನ್ನ ವ್ಯಕ್ತಪಡಿಸಿದ್ದಾರೆ.

ಹ್ಯಾಂಡ್‌ಶೇಕ್‌ ಬಗ್ಗೆ ಕ್ಯಾಪ್ಟನ್‌ ಹೇಳಿದ್ದೇನು?

ಇನ್ನು ಭಾರತ ಹಾಗೂ ಪಾಕ್‌ ನಡುವಿನ ಪಂದ್ಯ ಹೈವೋಲ್ಟೇಜ್‌ ಆಗಿದ್ದು, ಅದರಲ್ಲೂ ಹ್ಯಾಂಡ್‌ಶೇಕ್‌ ವಿವಾದ ನಂತರ ಈ ಪಂದ್ಯ ಹೆಚ್ಚು ಮಹತ್ವವನ್ನ ಪಡೆದುಕೊಂಡಿದೆ. ಇನ್ನು ಪಾಕ್‌ ಕ್ಯಾಪ್ಟನ್‌ ಬಳಿ ಭಾರತೀಯ ಆಟಗಾರರು ನಿಮ್ಮ ಬಳಿಗೆ ಬಂದರೆ, ನೀವು ಅವರೊಂದಿಗೆ ಹಸ್ತಲಾಘವ ಮಾಡಲು ಸಿದ್ಧರಿದ್ದೀರಾ ಎಂದು ಮಾಧ್ಯಮಗಳು ಪ್ರಶ್ನೆ ಮಾಡಿದಾಗ ನಾಳೆ ನೋಡೋಣ ಎಂದು ಹೇಳಿದ್ದಾರೆ.

ಇನ್ನು ಈ ಸಂದರ್ಶನದ ಸಮಯದಲ್ಲಿ ಬಹಳ ಶಾಂತಚಿತ್ತರಾಗಿ ಅವರ ಉತ್ತರಗಳನ್ನ ನೀಡಿದ್ದು, ಆರಂಭದಿಂದಲೂ ಆಟ ಆಡುತ್ತಿರುವ ಉತ್ಸಾಹದಲ್ಲಿಯೇ ಆಡಬೇಕು ಎಂದು ಹೇಳಿದ್ದಾರೆ. ಅಲ್ಲದೇ, ಎರಡೂ ಕಡೆಯವರು ಆಟದ ಪರಂಪರೆಯನ್ನು ಗೌರವಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.  

ಇದನ್ನೂ ಓದಿ: ಭಾರತ್-ಪಾಕ್‌ ಮ್ಯಾಚ್‌ಗೆ ಮಳೆ ಅಡ್ಡಿ?

Leave a Reply

Your email address will not be published. Required fields are marked *