ಶ್ರೀಲಂಕಾ: ನೆದರ್ಲ್ಯಾಂಡ್ಸ್ ವಿರುದ್ಧ 17 ರನ್‌ಗಳ ಜಯ ಸಾಧಿಸುವ ಮೂಲಕ ಟೀ 20 ವಿಶ್ವಕಪ್ (T20 World Cup) ಪಂದ್ಯದಲ್ಲಿ ಭಾರತ ಸೂಪರ್ 8ನೇ ಹಂತಕ್ಕೆ ಸುಲಭವಾಗಿ ತಲುಪಿದೆ.
ಕಳಪೆ ಇನ್ನಿಂಗ್ಸ್ ಆರಂಭ ಮಾಡಿದ್ದ ಭಾರತ
ಮೊದಲ ಓವರ್‌ನಲ್ಲಿ ಅಭಿಷೇಕ್ ಶರ್ಮಾ ಸತತ ಮೂರನೇ ಬಾರಿಗೆ ಡಕ್ ಔಟ್ ಆಗುವುದರೊಂದಿಗೆ ಇನ್ನಿಂಗ್ಸ್ ಕಳಪೆಯಾಗಿ ಆರಂಭವಾಗಿದೆ. ನಂತರ ಫಾರ್ಮ್‌ನಲ್ಲಿದ್ದ ಇಶಾನ್ ಕಿಶನ್ ಅವರು 18 ರನ್‌ಗಳಿಗೆ ಔಟ್ ಆಗಿದ್ದಾರೆ. ಇನ್ನು 28 ಬಾಲ್‌ಗಳಿಗೆ ತಿಲಕ್ ವರ್ಮಾ 31 ರನ್ ಹಾಗೂ ನಾಯಕ ಸೂರ್ಯಕುಮಾರ್ ಯಾದವ್ 34 ರನ್ ಗಳಿಗೆ ಮಾಡಿದ್ದು, ತಂಡಕ್ಕೆ ಸಹಾಯ ಮಾಡಿತು.
ಆಟದ ಪಥ ಬದಲಿಸಿದ ದುಬೆ
ಇನ್ನು ಶಿವಂ ದುಬೆ ಫೀಲ್ಡ್‌ಗೆ ಎಂಟ್ರಿ ಕೊಟ್ಟ ನಂತರ ಆಟದ ದಿಕ್ಕೇ ಬದಲಾಗಿದ್ದು, ಭಾರತದ ಒಟ್ಟು 193-6 ರನ್‌ಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಕೇವಲ 31 ಎಸೆತಗಳಲ್ಲಿ 66 ರನ್‌ಗಳನ್ನು ಗಳಿಸಿದ್ದು, ಆರು ಸಿಕ್ಸರ್‌ಗಳು ಮತ್ತು ನಾಲ್ಕು ಬೌಂಡರಿಗಳು ಸೇರಿದಂತೆ 25 ಎಸೆತಗಳಲ್ಲಿ ಅರ್ಧಶತಕವನ್ನು ಗಳಿಸಿದರು.

ಇನ್ನು ಬೌಲಿಂಗ್‌ನಲ್ಲಿ ಸಹ ದುಬೆ ತನ್ನ ಮೂರು ಓವರ್‌ಗಳಲ್ಲಿ 2-35 ರನ್‌ಗಳನ್ನು ನೀಡುವ ಮೂಲಕ ಅತ್ಯುತ್ತಮ ಆಲ್‌ರೌಂಡ್ ಪ್ರದರ್ಶನ ನೀಡಿದ್ದಾರೆ, ನೆದರ್ಲ್ಯಾಂಡ್ಸ್ ತಂಡವನ್ನು 176-7 ರನ್‌ಗಳಿಗೆ ತಡೆ ಹಿಡಿಯುವ ಮೂಲಕ ಭಾರತ ಗೆಲ್ಲಲು ಕಾರಣವಾಗಿದ್ದಾರೆ.
ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲಿ ಉಳಿಯಲು ಜಾಗ ಇಲ್ಲದೇ ಪರದಾಡಿದ ಪಾಕಿಸ್ತಾನ ಹಾಕಿ ತಂಡ
