ಬೆಳಗಾವಿ: ನಾವು ಬಂಗಾರ ಕಳ್ಳಸಾಗಣಿಕೆಯ ಬಗ್ಗೆ ಕೇಳಿರುತ್ತೇವೆ. ಇತ್ತೀಚೆಗಷ್ಟೇ ನಟಿ ರನ್ಯಾ ರಾವ್ ಪ್ರಕರಣ ಇದಕ್ಕೆ ಬಹಳ ಉತ್ತಮವಾದ ಉದಾಹರಣೆ. ಹೀಗಿರುವಾಗ ರಾಜ್ಯದಲ್ಲಿ ಡಿಸೇಲ್ ಸ್ಮಗ್ಲಿಂಗ್ ಆಗುತ್ತಿರುವ ಆಘಾತಕಾರಿ (Shocking News) ವಿಚಾರ ಬೆಳಕಿಗೆ ಬಂದಿದೆ.
ಗಲ್ಫ್ ದೇಶದಿಂದ ಡಿಸೇಲ್ ಸ್ಮಗ್ಲಿಂಗ್
ಚಿನ್ನದ ಹಾಗೆಯೇ ಗಲ್ಫ್ ಕಂಟ್ರಿಗಳಿಂದ ರಾಜ್ಯಕ್ಕೆ ಡಿಸೇಲ್ ಸ್ಮಗ್ಲಿಂಗ್ ಆಗುತ್ತಿದ್ದು, ಅಕ್ರಮವಾಗಿ ಖದೀಮರು ತೈಲ ಉತ್ಪನ್ನಗಳ ಸ್ಮಗ್ಲಿಂಗ್ ಮಾಡುತ್ತಿದ್ದಾರೆ ಎನ್ನುವ ವಿಚಾರ ಇದೀಗ ಬಯಲಾಗಿದ್ದು, ಕೇಂದ್ರ, ರಾಜ್ಯ ಸರ್ಕಾರಕ್ಕೆ ತೈಲದಿಂದ ಬರುವ ಕೋಟಿ ಕೋಟಿ ತೆರಿಗೆ ವಂಚಿಸುತ್ತಿದ್ದಾರೆ.
ಮಾಹಿತಿಗಳ ಪ್ರಕಾರ, ಬೆಳಗಾವಿಯ ಮಾಳಮಾರುತಿ ಠಾಣೆ ಪೊಲೀಸರು ಮಿಂಚಿನ ಕಾರ್ಯಾಚರಣೆ ಮಾಡಿದ್ದು, ಮುಂಬೈನಿಂದ ಬೆಳಗಾವಿ ಮಾರ್ಗವಾಗಿ ಬೆಂಗಳೂರಿಗೆ ಟ್ಯಾಂಕರ್‌ನಲ್ಲಿ ತೈಲ ಸಾಗಾಟ ಆಗುತ್ತಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕ ಮೇರೆಗೆ ಟ್ಯಾಂಕರ್ ಮೇಲೆ ದಾಳಿ ಮಾಳಮಾರುತಿ ಪೊಲೀಸರ ತಂಡ ನಡೆಸಿದ್ದು, ದಾಳಿಯ ವೇಳೆ ದಾಖಲೆಯಿಲ್ಲದೇ ಪೆಟ್ರೋಲಿಯಂ ಉತ್ಪನ್ನಗಳನ್ನು ಸಾಗಿಸುವುದು ಬೆಳಕಿಗೆ ಬಂದಿದೆ.
17ಸಾವಿರ ಲೀಟರ್ ಡಿಸೇಲ್ ಜಪ್ತಿ
ಇನ್ಸ್‌ಪೆಕ್ಟರ್ ಬಿ.ಆರ್. ಗಡ್ಡೇಕರ್ ನೇತೃತ್ವದ ತಂಡ ಡಿಸೇಲ್ ಸಾಗಿಸುವ ಟ್ಯಾಂಕರ್ ಮೇಲೆ ದಾಳಿ ಮಾಡಿದ್ದು, 17 ಲಕ್ಷ ಮೌಲ್ಯದ 17ಸಾವಿರ ಲೀಟರ್ ಡಿಸೇಲ್ ಹಾಗೂ ಟ್ಯಾಂಕರ್ ಜಪ್ತಿ ಮಾಡಲಾಗಿದೆ. ಇನ್ನು ತುಮಕೂರು ಮೂಲದ ಟ್ಯಾಂಕರ್ ಮಾಲೀಕ ಅರಿಹಂತ ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದ್ದು, ವಿಚಾರಣೆಯಲ್ಲಿ ತನಿಖೆ ವೇಳೆ ಗಲ್ಫ್ ಕಂಟ್ರಿಗಳಿಂದ ಅಕ್ರಮವಾಗಿ ತೈಲ ಉತ್ಪನ್ನಗಳನ್ನು ತರುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.
ಈ ಸ್ಮಗ್ಲಿಂಗ್ ಜಾಲ ಬೇಧಿಸಲು ಎರಡು ಆಯಾಮಗಳಲ್ಲಿ ತನಿಖೆ ನಡೆಸಲು ಪೊಲೀಸರು ನಿರ್ಧಾರ ಮಾಡಿದ್ದು, ಶಿಪ್ ಮಾಲೀಕರು ಹಾಗೂ ಪೆಟ್ರೋಲ್ ಪಂಪ್ ಮಾಲೀಕರು ಸಹ ಈ ಕಳ್ಳಾಟದಲ್ಲಿ ಬಾಗಿ ಆಗಿರುವ ಶಂಕೆ ಇದ್ದು, ವಿಶೇಷ ತಂಡಗಳನ್ನು ರಚನೆ ಮಾಡಿ ಮುಂಬೈ ಹಾಗೂ ರಾಜಸ್ಥಾನಕ್ಕೆ ರವಾನಿಸುವ ಸಾಧ್ಯತೆ ಇದೆ,
ಇದನ್ನೂ ಓದಿ: ಜಿಬಿಎ ಚುನಾವಣೆಗೆ ಬ್ಯಾಲೆಟ್ ಬಳಕೆ, ಸರ್ಕಾರದ ನಿರ್ಧಾರಕ್ಕೆ ಪ್ರಹ್ಲಾದ್ ಜೋಶಿ ವಿರೋಧ
