Rahu-Ketu: 18 ತಿಂಗಳ ಬಳಿಕ ರಾಹು-ಕೇತು ರಾಶಿ ಬದಲಾವಣೆ, ಬದುಕು ಬಂಗಾರವಾಗುತ್ತೆ

Rahu-Ketu transit these zodiac sign get luck

ಜ್ಯೋತಿಷ್ಯದಲ್ಲಿ ರಾಹು ಹಾಗೂ ಕೇತು ಗ್ರಹಗಳ ಬಹಳ ವಿಶೇಷವಾದ ಸ್ಥಾನವನ್ನ ಪಡೆದುಕೊಂಡಿವೆ. ಈ ಗ್ರಹಗಳು ನಮ್ಮ ಜೀವನದ ಮೇಲೆ ಬಹಳ ವಿಭಿನ್ನವಾಗಿ ಪರಿಣಾಮ ಬೀರುತ್ತದೆ. ಈ ಗ್ರಹಗಳ ಸಂಚಾರದ ಬಗ್ಗೆ ಜನರಿಗೆ ಬಹಳ ಭಯ ಇದೆ.  ಸಾಮಾನ್ಯವಾಗಿ ಈ ಎರಡು ಗ್ರಹಗಳು 18 ತಿಂಗಳಿಗೊಮ್ಮೆ ರಾಶಿ ಬದಲಾವಣೆ ಮಾಡುತ್ತದೆ. ಈ ಗ್ರಹ ಸಂಚಾರದಿಂದ ಕೆಲವರಿಗೆ ಸಂಕಷ್ಟ ಎದುರಾದರೆ, ಇನ್ನೂ ಕೆಲವರಿಗೆ ಅದ್ಭುತ ಪ್ರಯೋಜನಗಳು ಲಭಿಸುತ್ತದೆ. ಈ ಬಾರಿ ರಾಹು ಹಾಗೂ ಕೇತು (Rahu-Ketu) ಸಂಚಾರದಿಂದ ಯಾವ ರಾಶಿಯವರ ಬಾಳು ಬೆಳಗಲಿದೆ ಎಂಬುದು ಇಲ್ಲಿದೆ.

ಮೇಷ ರಾಶಿ: ಈ ಗ್ರಹಗಳ ಸಂಚಾರ ನಿಮ್ಮ ಮಾತು ಹೆಚ್ಚು ಪ್ರಭಾವ ಬೀರುತ್ತದೆ. ಜನರು ನಿಮ್ಮಿಂದ ಪ್ರಭಾವಿತರಾಗುತ್ತಾರೆ. ಉದ್ಯೋಗಸ್ಥರಿಗೆ ಹುದ್ದೆ ಮತ್ತು ಪ್ರತಿಷ್ಠೆ ಹೆಚ್ಚಾಗುವ ಸಾಧ್ಯತೆ ಇದೆ. ಸಹೋದ್ಯೋಗಿಗಳ ಬೆಂಬಲ ಸಿಗಲಿದೆ. ಈ ಸಮಯದಲ್ಲಿ, ನೀವು ಅನೇಕ ಕಾರ್ಯಗಳನ್ನು ಕೌಶಲ್ಯದಿಂದ ಮತ್ತು ಬುದ್ಧಿವಂತಿಕೆಯಿಂದ ನಿರ್ವಹಿಸುತ್ತೀರಿ, ಅದು ಮೆಚ್ಚುಗೆ ಪಡೆಯುತ್ತದೆ.

ಮಿಥುನ ರಾಶಿ: ನಿಮ್ಮ ಆದಾಯವನ್ನು ಹೆಚ್ಚಿಸುತ್ತದೆ. ಆದಾಯ ಹೆಚ್ಚಳದಿಂದ ಆರ್ಥಿಕ ಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ಯಶಸ್ಸನ್ನು ಪಡೆಯುತ್ತಾರೆ. ವ್ಯವಹಾರದಲ್ಲಿ ಇಟ್ಟ ಹೆಜ್ಜೆ ಯಶಸ್ಸನ್ನು ತರುತ್ತದೆ. ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ನಿಮ್ಮ ಅನೇಕ ಕನಸುಗಳು ನನಸಾಗುತ್ತದೆ.

ವೃಶ್ಚಿಕ ರಾಶಿ: ರಾಹು ಹಾಗೂ ಕೇತು ಸಂಚಾರವು ನಿಮ್ಮ ರಾಶಿಯ ಜನರಿಗೆ ಸಂಪೂರ್ಣ ಲಾಭ ನೀಡುತ್ತದೆ. ಉದ್ಯೋಗಿಗಳಿಗೆ ಒಳ್ಳೆಯ ದಿನಗಳು ಬರಲಿವೆ. ಜೀವನದಲ್ಲಿ ಪ್ರಗತಿ ಇರುತ್ತದೆ ಮತ್ತು ಆರ್ಥಿಕ ಸ್ಥಿತಿ ಸಹ ಬಲವಾಗುತ್ತದೆ. ಈ ಸಮಯದಲ್ಲಿ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ. ವ್ಯಾಪಾರದಲ್ಲಿ ಹೂಡಿಕೆ ಲಾಭದಾಯಕವಾಗಲಿದೆ. ಹೂಡಿಕೆಯಿಂದ ಬರುವ ಲಾಭವನ್ನ ಮತ್ತೆ ಹೂಡಿಕೆ ಮಾಡಿ, ಇನ್ನಷ್ಟು ಲಾಭ ಗಳಿಸಲು ಅವಕಾಶ ಸಿಗುತ್ತದೆ.

ಮೀನ ರಾಶಿ: ಈ ಸಮಯದಲ್ಲಿ ವ್ಯವಹಾರದಲ್ಲಿ ಗಣನೀಯ ಯಶಸ್ಸು ಇರುತ್ತದೆ. ಲಾಭ ಪಡೆಯಲು ಉತ್ತಮ ಅವಕಾಶಗಳು ದೊರೆಯಲಿವೆ. ಇದು ನಿಮ್ಮ ಆರ್ಥಿಕ ಸ್ಥಿತಿ ಬದಲಾಗುತ್ತದೆ. ಉದ್ಯೋಗಸ್ಥರು ತಮ್ಮ ಕೆಲಸದಲ್ಲಿ ವಿಶ್ವಾಸವನ್ನು ಗಳಿಸುತ್ತಾರೆ. ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿಯು ಮೊದಲಿಗಿಂತ ಉತ್ತಮವಾಗಿರುತ್ತದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.

ಇದನ್ನೂ ಓದಿ: ಒಂದೇ ದಿನ ರೂಪುಗೊಳ್ಳಲಿದೆ 3 ಯೋಗ, ಈ ರಾಶಿಯವರ ಲೈಫ್‌ನಲ್ಲಿ ಮ್ಯಾಜಿಕ್‌ ಆಗುತ್ತೆ

Leave a Reply

Your email address will not be published. Required fields are marked *