TOP NEWS
PM narendra modi only knows to talk mallikarjun kharge

Mallikarjun Kharge: ಮೋದಿ ಕೇವಲ ಮಾತಿನ ಮಲ್ಲ, ಎಲ್ಲ ರಂಗಗಳಲ್ಲೂ ಕೇಂದ್ರ ಸರ್ಕಾರ ದಿವಾಳಿ: ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಕಲಬುರಗಿ: ಕೇಂದ್ರದ ಬಿಜೆಪಿ ಸರ್ಕಾರವು ದೇಶದ ಆರ್ಥಿಕ ಹಾಗೂ ಸಾಮಾಜಿಕ ರಂಗಗಳನ್ನು ನಿರ್ವಹಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ತೀವ್ರವಾಗಿ ಆಕ್ಷೇಪಿಸಿದ್ದಾರೆ. ತಮ್ಮ ತವರು ಜಿಲ್ಲೆಯಾದ ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಡವರ ಕಷ್ಟಗಳ ಬಗ್ಗೆ ಕನಿಷ್ಠ ಕಾಳಜಿಯೂ ಇಲ್ಲ. ಅವರು ಕೇವಲ ಆಕರ್ಷಕ ಭಾಷಣ ಮಾಡುವ ‘ಮಾತಿನ ಮಲ್ಲ’ ಎಂದು ಲೇವಡಿ ಮಾಡಿದರು. ದೇಶದ ಸದ್ಯದ ದುಸ್ಥಿತಿ ಮತ್ತು ಕೇಂದ್ರ ಸರ್ಕಾರದ ಜನವಿರೋಧಿ…

Read More
Congress bk hariprasad trying to get ministry

Congress: ದೆಹಲಿಯಲ್ಲಿ ಹೆಚ್ಚಿದ ಸಚಿವ ಸ್ಥಾನದ ಆಕಾಂಕ್ಷಿಗಳ ದಂಡು: ಮಂತ್ರಿಗಿರಿ ಮತ್ತು ಕೆಪಿಸಿಸಿ ಅಧ್ಯಕ್ಷ ಗಾದಿಗಾಗಿ ಬಿ.ಕೆ. ಹರಿಪ್ರಸಾದ್ ಭಾರಿ ಕಸರತ್ತು!

ನವದೆಹಲಿ: ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಪ್ರಕ್ರಿಯೆ ಸುಖಾಂತ್ಯ ಕಾಣುತ್ತಿದ್ದಂತೆಯೇ, ಇತ್ತ ದೇಶದ ರಾಜಧಾನಿ ನವದೆಹಲಿಯಲ್ಲಿ ನೂತನ ಸಚಿವ ಸಂಪುಟ (Congress) ಸೇರ್ಪಡೆಗಾಗಿ ಭಾರಿ ಪೈಪೋಟಿ ಶುರುವಾಗಿದೆ. ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈಗಾಗಲೇ ದೆಹಲಿ ತಲುಪಿದ್ದು, ಹೊಸ ಕ್ಯಾಬಿನೆಟ್‌ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಕಾಂಗ್ರೆಸ್ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ರಾಜಧಾನಿಯಲ್ಲಿ ಬೀಡುಬಿಟ್ಟು ಬಿರುಸಿನ ಸರ್ಕಸ್ ಆರಂಭಿಸಿದ್ದಾರೆ. ಲಾಭಿ ಆರಂಭಿಸಿದ ಬಿಕೆ ಹರಿಪ್ರಸಾದ್ ಈ ಸಚಿವ ಸಂಪುಟ ರಚನೆಯ ಕಸರತ್ತಿನ ನಡುವೆ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್…

Read More
Dead For Years Active Before Attack NIA finds digital trace of Pahalgam Attack

Pahalgam: ಪಹಲ್ಗಾಮ್ ಉಗ್ರರ ದಾಳಿ ತನಿಖೆಯಲ್ಲಿ ಬಿಗ್ ಬ್ರೇಕ್‌ಥ್ರೂ: ಕರಾಚಿ ಇಸ್ಲಾಮಿಕ್ ಬ್ಯಾಂಕ್ ಲಿಂಕ್ ಬಯಲು ಮಾಡಿದ ಭದ್ರತಾ ಪಡೆಗಳು!

ನವದೆಹಲಿ: ಕಳೆದ 2025ರಲ್ಲಿ ಜಮ್ಮು ಮತ್ತು ಕಾಶ್ಮೀರದ ನಿಸರ್ಗ ರಮಣೀಯ ಪಹಲ್ಗಾಮ್‌ನಲ್ಲಿ (Pahalgam ) ನಡೆದ ಭೀಕರ ಉಗ್ರರ ದಾಳಿಯ ತನಿಖೆ ನಡೆಸುತ್ತಿರುವ ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತು ಜಮ್ಮು-ಕಾಶ್ಮೀರ ಪೊಲೀಸರಿಗೆ ಅತ್ಯಂತ ಪ್ರಮುಖವಾದ ತಾಂತ್ರಿಕ ಪುರಾವೆಗಳು ಲಭ್ಯವಾಗಿವೆ. ದಾಳಿ ನಡೆಸಿದ ಉಗ್ರರಿಂದ ವಶಪಡಿಸಿಕೊಳ್ಳಲಾದ ಎರಡು ಮೊಬೈಲ್ ಫೋನ್‌ಗಳ ಪೈಕಿ ಒಂದು ಫೋನ್, 2021ರಲ್ಲಿ ಪಾಕಿಸ್ತಾನಕ್ಕೆ ಆಮದು ಮಾಡಿಕೊಳ್ಳಲಾದ ದೊಡ್ಡ ಕನ್ಸೈನ್‌ಮೆಂಟ್‌ಗೆ ಸೇರಿದ್ದಾಗಿದೆ. ಅಚ್ಚರಿಯ ವಿಷಯವೆಂದರೆ, ಈ ಮೊಬೈಲ್ ಸಾಗಣೆಗೆ ಕರಾಚಿ ಮೂಲದ ಫೈಸಲ್ ಬ್ಯಾಂಕ್…

Read More
R Ashok accuse congress for Zameer viral audio

R Ashok: ಕಾಂಗ್ರೆಸ್‌ ಒಳಜಗಳಕ್ಕೆ ಡಿಕೆಶಿ ಬಲಿ, ಸಿದ್ದರಾಮಯ್ಯ ಕೊಟ್ಟ ಹಳೇ ಬಸ್ಸಿಗೆ ಡೀಸೆಲ್‌ ಕೂಡ ಇಲ್ಲ: ಆರ್. ಅಶೋಕ್ ಲೇವಡಿ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಉಂಟಾಗಿರುವ ದಿಢೀರ್ ಬದಲಾವಣೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ಗಮನದ ಬೆನ್ನಲ್ಲೇ, ಹೊಸದಾಗಿ ಅಧಿಕಾರ ವಹಿಸಿಕೊಳ್ಳುತ್ತಿರುವ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಭವಿಷ್ಯದ ಕುರಿತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ (R Ashok) ತೀವ್ರ ವ್ಯಂಗ್ಯವಾಡಿದ್ದಾರೆ. ಸಿದ್ದರಾಮಯ್ಯ ಅವರು ಡಿ.ಕೆ. ಶಿವಕುಮಾರ್ ಅವರಿಗೆ ನೀಡಿರುವ ಅಧಿಕಾರ ಒಂಥರಾ ‘ಭಸ್ಮಾಸುರನ ಆಶೀರ್ವಾದ’ ಇದ್ದಂತೆ ಎಂದು ಲೇವಡಿ ಮಾಡಿರುವ ಅವರು, ಭಸ್ಮಾಸುರನಿಗೆ ಸಿಕ್ಕ ವರವೇ ಅವನಿಗೆ ಮುಳುವಾದಂತೆ ಈ ಮುಖ್ಯಮಂತ್ರಿ ಕುರ್ಚಿ ಡಿಕೆಶಿಯವರ…

Read More
sumalatha ambareesh ready to enter rajya sabha after loka sabha

Sumalatha Ambareesh: ಮಂಡ್ಯ ತ್ಯಾಗಕ್ಕೆ ಸಿಗುತ್ತಾ ಬಂಪರ್ ಗಿಫ್ಟ್? ರಾಜ್ಯಸಭೆ ರೇಸ್‌ನಲ್ಲಿ ಸುಮಲತಾ ಅಂಬರೀಶ್ ಮುಂಚೂಣಿ!

ಬೆಂಗಳೂರು: ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಧರ್ಮದ ಲೆಕ್ಕಾಚಾರಕ್ಕಾಗಿ ತಮ್ಮ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟು, ಕಮಲ ಮುಡಿದಿದ್ದ ಮಾಜಿ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಅವರಿಗೆ ಈಗ ದೆಹಲಿ ರಾಜಕಾರಣದ ದೊಡ್ಡ ಬಾಗಿಲು ತೆರೆಯುವ ಲಕ್ಷಣಗಳು ಕಾಣಿಸುತ್ತಿವೆ. ಮುಂಬರುವ ರಾಜ್ಯಸಭೆ ಚುನಾವಣೆಗೆ ಸುಮಲತಾ ಅಂಬರೀಶ್ ಅವರನ್ನು ಎನ್‌ಡಿಎ ಮೈತ್ರಿಕೂಟದ ಜಂಟಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಬಿಜೆಪಿ ವರಿಷ್ಠರು ಗಂಭೀರ ಆಲೋಚನೆ ನಡೆಸಿದ್ದಾರೆ ಎನ್ನಲಾಗಿದೆ. ಜೂನ್ 18 ರಂದು ರಾಜ್ಯಸಭೆಯ ಪ್ರಮುಖ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದ್ದು, ಅಭ್ಯರ್ಥಿಗಳ…

Read More
Zameer Ahmed Khan audio about conspiracy against congress goes viral

Zameer Ahmed Khan: ದಾವಣಗೆರೆ ಆಂತರಿಕ ಒಳಸಂಚು ವಿವಾದ: ವೈರಲ್ ಆಡಿಯೋ ವಿರುದ್ಧ ಸೈಬರ್ ದೂರು ದಾಖಲಿಸಲು ಜಮೀರ್ ಸಜ್ಜು!

ಬೆಂಗಳೂರು: ದಾವಣಗೆರೆ ದಕ್ಷಿಣ ಉಪಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಆಂತರಿಕ ತಂತ್ರಗಳನ್ನು ಹಳಿತಪ್ಪಿಸಲು ಸಚಿವ ಜಮೀರ್ ಅಹಮದ್ ಖಾನ್ (Zameer Ahmed Khan) ಅವರೇ ಸಮಾಲೋಚನೆ ನಡೆಸಿದ್ದಾರೆ ಎನ್ನಲಾದ ಆಡಿಯೋವೊಂದು ಸದ್ಯ ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ. ಈ ವಿವಾದಾತ್ಮಕ ಆಡಿಯೋ ರೆಕಾರ್ಡಿಂಗ್‌ಗಳು ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ಅಂಗಳ ತಲುಪಿದ್ದು, ನವದೆಹಲಿ ಮಟ್ಟದಲ್ಲೂ ಗಂಭೀರ ಚರ್ಚೆಗಳು ಆರಂಭವಾಗಿವೆ. ಆದರೆ, ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ಬಲವಾಗಿ ತಳ್ಳಿಹಾಕಿರುವ ಜಮೀರ್ ಅಹಮದ್ ಖಾನ್, ಈ ಆಡಿಯೋ ಸಂಪೂರ್ಣ ಸುಳ್ಳು…

Read More
Rahul Gandhi slams cbse over extra fee

Rahul Gandhi: ಸಿಬಿಎಸ್‌ಇ ವಿರುದ್ಧ ರಾಹುಲ್ ಗಾಂಧಿ ಕಿಡಿ: ತಪ್ಪು ಮಂಡಳಿಯದ್ದು, ವಿದ್ಯಾರ್ಥಿಗಳಿಗೆ ಹಣದ ದಂಡ!

ನವದೆಹಲಿ: ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ತಾನೇ ಎಡವಟ್ಟು ಮಾಡಿ, ಈಗ ಅದನ್ನು ಸರಿಪಡಿಸಲು ವಿದ್ಯಾರ್ಥಿಗಳಿಂದ ಭಾರಿ ಪ್ರಮಾಣದ ಶುಲ್ಕ ವಸೂಲಿ ಮಾಡುತ್ತಿರುವ ಕೇಂದ್ರ ಪ್ರೌಢಶಿಕ್ಷಣ ಮಂಡಳಿಯ (CBSE) ಧೋರಣೆಯನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಕಟುವಾಗಿ ಟೀಕಿಸಿದ್ದಾರೆ. ಶಿಕ್ಷಣ ಸಂಸ್ಥೆಗಳ ಒಳಗೆ ‘ಜೇಬುಕಳ್ಳರು’ ಕುಳಿತಿದ್ದಾರೆ ಎಂದು ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಆಕ್ರೋಶ ಹೊರಹಾಕಿರುವ ಅವರು, ಮಂಡಳಿಯು ಜ್ಞಾನದಾನದ ಸೇವೆಯನ್ನು ಬದಿಗಿಟ್ಟು ಶಿಕ್ಷಣವನ್ನು ಕೇವಲ ಒಂದು ಲಾಭದಾಯಕ ಉದ್ಯಮವನ್ನಾಗಿ ಮಾಡಿಕೊಂಡಿದೆ ಎಂದು…

Read More