ಶ್ರೀಲಂಕಾ: ಭಾನುವಾರ ನಡೆದ ಟಿ20 ವಿಶ್ವಕಪ್ 2026 ರ ಪಂದ್ಯದಲ್ಲಿ ಭಾರತ ವಿರುದ್ಧ 61 ರನ್‌ಗಳ ಹೀನಾಯ ಸೋಲು ಅನುಭವಿಸಿದ ನಂತರ ಪಾಕಿಸ್ತಾನ (Pakistan) ಕ್ರಿಕೆಟ್ ತಂಡದ ಬಲ ಸಂಪೂರ್ಣ ಕುಸಿತ ಕಂಡಿದೆ.
ಟಾಪ್ 8ಗೆ ಪಾಕ್ ಬರೋದು ಡೌಟ್
ಭಾರತ ವಿರುದ್ಧದ ಸೋಲಿನ ನಂತರ ಪಾಕಿಸ್ತಾನದ ಸೂಪರ್ 8 ಅರ್ಹತೆ ಪಡೆದುಕೊಳ್ಳುವುದು ತುಂಬಾ ಕಷ್ಟಕರ ಅನಿಸಿಕೊಂಡಿದೆ. ಇದಲ್ಲದೇ, ನಮೀಬಿಯಾ ವಿರುದ್ಧದ ಮುಂದಿನ ಪಂದ್ಯವು ಕಳಪೆ ರನ್ ರೇಟ್ ಕಾರಣದಿಂದಾಗಿ ನಾಕೌಟ್ ಮ್ಯಾಚ್ ಅನಿಸಿಕೊಂಡಿದೆ. ಫೆಬ್ರವರಿ 15 ರಂದು ಕೊಲಂಬೊದಲ್ಲಿ ನಡೆದ ಪಂದ್ಯವು ಇಡೀ ಕ್ರಿಕೆಟ್ ಜಗತ್ತಿಗೆ ಕ್ರಿಕೆಟ್ ಪಿಚ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ನಿಜವಾದ ಅಂತರವನ್ನು ತೋರಿಸಿದೆ. ಇದೀಗ ಪಾಕಿಸ್ತಾನದ ಮಾಜಿ ಆಟಗಾರರು ಹಾಗೂ ಜನತೆ ಸಹ ಪಾಕ್ ಕ್ರಿಕೆಟ್ ಮಂಡಳಿ ವಿರುದ್ಧ ಕೆಂಡ ಕಾರುತ್ತಿದ್ದು, ಮಂಡಳಿಯಿಂದ ರಾಜಕೀಯ ಪ್ರಭಾವವನ್ನು ತೆಗೆದುಹಾಕದಿದ್ದರೆ ಚೇತರಿಕೆ ನಿರೀಕ್ಷಿಸಲಾಗುವುದಿಲ್ಲ ಎಂದು ಪಾಕಿಸ್ತಾನದ ಕ್ರಿಕೆಟ್ ದಂತಕಥೆ ಮೊಹಮ್ಮದ್ ಯೂಸುಫ್ ಅಭಿಪ್ರಾಯಪಟ್ಟಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಆಟಗಾರ
ಈ ವಿಚಾರವಾಗಿ ಮೊಹಮ್ಮದ್ ಯೂಸುಫ್ ಸೋಷಿಯಲ್ ಮೀಡಿಯಾದಲ್ಲೊ ಪೋಸ್ಟ್ ಮಾಡಿದ್ದು, ಪಾಕಿಸ್ತಾನದ ಬ್ಯಾಟಿಂಗ್ ದಿಗ್ಗಜ, ಕ್ರೀಡೆಯು ಅಭಿವೃದ್ಧಿ ಹೊಂದಬೇಕಾದರೆ ದೇಶದಲ್ಲಿನ ಕ್ರಿಕೆಟ್ ಪರಿಸರ ವ್ಯವಸ್ಥೆಯು ರಾಜಕೀಯ ಪ್ರಭಾವ ಮತ್ತು ವೈಯಕ್ತಿಕ ಕಾರ್ಯಸೂಚಿಗಳಿಂದ ದೂರ ಸರಿಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
Unless we remove political influence and personal agendas from Pakistan cricket, we cannot return to the team we once were. This is the darkest period in our cricketing history, and my heart bleeds for it. Incompetent individuals must be removed from office and from the team.
— Mohammad Yousaf (@yousaf1788) February 16, 2026
ಪಾಕಿಸ್ತಾನ ಕ್ರಿಕೆಟ್‌ನಿಂದ ರಾಜಕೀಯ ಪ್ರಭಾವ ಮತ್ತು ವೈಯಕ್ತಿಕ ಕಾರ್ಯಸೂಚಿಗಳನ್ನು ತೆಗೆದುಹಾಕದ ಹೊರತು, ನಾವು ಮೊದಲು ಇದ್ದ ತಂಡಕ್ಕೆ ಮರಳಲು ಸಾಧ್ಯವಿಲ್ಲ. ಇದು ನಮ್ಮ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಕರಾಳ ಅವಧಿ, ಇದು ನನಗೆ ತುಂಬಾ ನೋವನ್ನ ಮಾಡಿದೆ. ಅಸಮರ್ಥ ವ್ಯಕ್ತಿಗಳನ್ನು ಕಚೇರಿಯಿಂದ ಮತ್ತು ತಂಡದಿಂದ ತೆಗೆದುಹಾಕಬೇಕು ಎಂದು ಪಿಸಿಬಿ ಮುಖ್ಯಸ್ಥ ಮತ್ತು ದೇಶದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಅವರನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.
ಇದನ್ನೂ ಓದಿ: ವಿಶ್ವಕಪ್‌ನಿಂದ ಔಟ್ ಆದ ನೇಪಾಳ, ಮೂರು ಸೋಲಿನಿಂದ ಮನೆಗೆ
