IPL 2026: ಇದು ಧೋನಿಯ ಐಪಿಎಲ್‌ ಕೊನೆಯ ಸೀಸನ್‌?

ipl 2026 does this is dhoni last season

ಮುಂಬೈ: ಕಳೆದ ಕೆಲ ವರ್ಷದಿಂದ ಐಪಿಎಲ್‌ನಿಂದ (IPL 2026) ಧೋನಿ ನಿವೃತ್ತಿ ಆಗುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ದವು. ಪ್ರತಿ ಬಾರಿಯೂ ಇದು ಅವರ ಕೊನೆಯ ಸೀಸನ್‌ ಎಂದು ಹೇಳಲಾಗುತ್ತಿತ್ತು. ಆದರೆ 2026ರ ಐಪಿಎಲ್‌ ಮಾತ್ರ ನಿಜಕ್ಕೂ ಕೊನೆಯ ಸೀಸನ್‌ ಎನ್ನಲಾಗುತ್ತಿದೆ.

ಸೀಸನ್‌ ಮಧ್ಯದಲ್ಲಿ ನಿವೃತ್ತಿ ಘೋಷಿಸುತ್ತಾರಾ ಧೋನಿ?

2026ರ ಐಪಿಎಲ್‌ ಸೀಸನ್‌ಗೆ ಸಿಎಸ್‌ಕೆ ಧೋನಿಯನ್ನ ಉಳಿಸಿಕೊಂಡಿದೆ. ಆದರೆ ಅವರು ಸೀಸನ್‌ ಮಧ್ಯದಲ್ಲಿ ನಿವೃತ್ತಿ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆಕಸ್ಮಾತ್‌ ಅವರು ಇಡೀ ಸೀಸನ್‌ ಆಡಿದರೂ ಸಹ ಕೇವಲ ಬ್ಯಾಟಿಂಗ್‌ ಮಾತ್ರ ಮಾಡುತ್ತಾರೆ ಎಂದು ಸಿಎಸ್‌ಕೆ ಮೂಲಗಳು ತಿಳಿಸಿವೆ. ಅಲ್ಲದೇ, ಧೋನಿ ತಂಡದಲ್ಲಿ ಇರುವ ಕಾರಣದಿಂದ ಸಿಎಸ್‌ಕೆ ಮೇಲೆ ಕ್ರೇಜ್‌ ಜಾಸ್ತಿ ಇದೆ. ಅದನ್ನ ಉಳಿಸಿಕೊಳ್ಳಲು ಪ್ರಯತ್ನ ಮಾಡಲಾಗುತ್ತಿದೆ. ಅದರ ಜೊತೆಗೆ ಧೋನಿ ಸ್ಥಾನಕ್ಕೆ ಬೇರೆ ಆಟಗಾರರನ್ನ ಸಹ ಹುಡುಕಲಾಗಿದ್ದು, ಈಗಾಗಲೇ 32.2 ಕೋಟಿ ಖರ್ಚನ್ನು ಮಾಡಿದೆ ಎನ್ನುವ ಸುದ್ದಿ ಇದೆ.

ಸಂಜು ಸ್ಯಾಮ್ಸನ್ ಖರೀದಿ ಮಾಡಿದ ಸಿಎಸ್‌ಕೆ

ಸಿಎಸ್‌ಕೆ ತಂಡದಲ್ಲಿ ಧೋನಿ ಸ್ಥಾನವನ್ನ ತುಂಬಲ ಸರಿಯಾದ ಆಟಗಾರನ ಅವಶ್ಯಕತೆ ತುಂಬಾ ಇದೆ. ಹಾಗಾಗಿ ಬಹಳ ಆಲೋಚನೆ ಮಾಡಿ ಸಿಎಸ್‌ಕೆ ಹರಾಜಿಗೂ ಮೊದಲೇ ಸಂಜು ಸ್ಯಾಮ್ಸನ್ ಅವರನ್ನು ಟ್ರೇಡಿಂಗ್‌ ಮಾಡಿದೆ. ಈ ಟ್ರೇಡಿಂಗ್‌ ಬದಲಾಗಿ ಅದು ರವೀಂದ್ರ ಜಡೇಜಾ ಹಾಗೂ ಸ್ಯಾಮ್‌ ಕರನ್‌ ಅವರನ್ನ ತಂಡದಿಂದ ಬಿಟ್ಟುಕೊಟ್ಟಿದ್ದೆ. ಅಲ್ಲದೇ ಸಂಜು ಸ್ಯಾಮ್ಸ್‌ನ್‌ಗಾಗಿ ಸಿಎಸ್‌ಕೆ ಸ18 ಕೋಟಿ ರೂ.ಗಳ ವೆಚ್ಚ ಮಾಡಿದೆ ಎನ್ನುವ ಮಾಹಿತಿ ಇದೆ.

ವಿಕೆಟ್‌ ಕೀಪರ್‌ ಆಗಿ ಕಾರ್ತಿಕ್ ಶರ್ಮಾ ಖರೀದಿ

ಇದರ ಜೊತೆಗೆ ಸಿಎಸ್​ಕೆ ಮತ್ತೊಬ್ಬ ವಿಕೆಟ್ ಕೀಪರ್ ಬ್ಯಾಟರ್ ಆಗಿ 19 ವರ್ಷದ ಯುವ ವಿಕೆಟ್ ಕೀಪರ್​​ ಕಾರ್ತಿಕ್ ಶರ್ಮಾರನ್ನ ಖರೀದಿ ಮಾಡಿದೆ. ರಾಜಸ್ಥಾನ ಸೀನಿಯರ್ ವಿಭಾಗದಲ್ಲಿ ಆಡುತ್ತಿರುವ ಕಾರ್ತಿಕ್ ಕಳೆದ ವರ್ಷ ಟ್ರಯಲ್ಸ್ ವೇಳೆ ಕೇವಲ 25 ಎಸೆತಗಳಲ್ಲಿ 80 ರನ್​ ಸಿಡಿಸಿದ್ದರು ಎನ್ನಲಾಗಿದೆ. ಇದೀಗ ಅವರನ್ನ 14.2 ಕೋಟಿ ನೀಡಿ ಈ ಬಾರಿ ಖರೀದಿ ಮಾಡಿದೆ.

ಇದನ್ನೂ ಓದಿ: ದಕ್ಷಿಣ ಆಫ್ರಿಕಾ ಪಂದ್ಯದಿಂದ ಗಿಲ್‌ ಔಟ್?‌ ಕಳಪೆ ಫಾರ್ಮ್‌ ಕಾರಣನಾ?

Leave a Reply

Your email address will not be published. Required fields are marked *