T20 World Cup: ಪಾಕಿಸ್ತಾನಕ್ಕೆ ಕಾನೂನು ಸಂಕಷ್ಟ, ಖಡಕ್‌ ಎಚ್ಚರಿಕೆ ಕೊಟ್ಟ ಐಸಿಸಿ

ICC Gives Legal Warning To Pak Over T20 World Cup Mess

ಪಾಕಿಸ್ತಾನ: ಫೆಬ್ರವರಿ 15 ರಂದು ಭಾರತದ ವಿರುದ್ಧದ ನಡೆಯುವ ಪಂದ್ಯವನ್ನು ಬಹಿಷ್ಕರಿಸಿದ ಕಾರಣದಿಂದ ಟಿ20 ವಿಶ್ವಕಪ್‌ನ (T20 World Cup) ಅಧಿಕೃತ ಪ್ರಸಾರಕರಾದ ಜಿಯೋಸ್ಟಾರ್ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಐಸಿಸಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಎಚ್ಚರಿಕೆ ನೀಡಿದೆ.

ಐಸಿಸಿಗೆ ಅಧಿಕೃತ ಕಾರಣ ನೀಡದ ಪಾಕಿಸ್ತಾನ

ಪಾಕಿಸ್ತಾನ ಸರ್ಕಾರದ ಸೂಚನೆಯ ಮೇರೆಗೆ ಫೆಬ್ರವರಿ 15 ರಂದು ಕೊಲಂಬೊದಲ್ಲಿ ನಡೆಯಲಿರುವ ಪಂದ್ಯವನ್ನು ಬಹಿಷ್ಕರಿಸಲು ನಿರ್ಧರಿಸಿದೆ ಆದರೆ ಐಸಿಸಿಗೆ ಇನ್ನೂ ಅಧಿಕೃತವಾಗಿ ಕಾರಣಗಳನ್ನು ಸ್ಪಷ್ಟಪಡಿಸಿಲ್ಲ. ಈ ಕಾರಣದಿಂದ ಐಸಿಸಿ ಪಾಕಿಸ್ತಾನದ ಸಂಪೂರ್ಣ ವಾರ್ಷಿಕ ಆದಾಯದ ಪಾಲನ್ನು ತಡೆಹಿಡಿಯುವ ಸಾಧ್ಯತೆಯಿದೆ, ಅದು ಸುಮಾರು 35 ಮಿಲಿಯನ್ ಯುಎಸ್ ಡಾಲರ್ ಆಗಿದೆ ಮತ್ತು ಆ ಹಣದಿಂದ ಪ್ರಸಾರಕರಿಗೆ ಪಾವತಿ ಮಾಡಲಾಗುತ್ತದೆ. ಕಳೆದ ವಾರ ಈ ವಿಷಯದ ಬಗ್ಗೆ ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಮಾಹಿತಿ ನೀಡುವ ಮೊದಲು ಅಧ್ಯಕ್ಷ ಮೊಹ್ಸಿನ್ ನಖ್ವಿ ಮಂಡಳಿಯ ಕಾನೂನು ತಜ್ಞರಿಂದ ಸಲಹೆ ಪಡೆದಿದ್ದರೂ, ಮಂಡಳಿಯು ಕೆಲವು ಗಂಭೀರ ಪರಿಣಾಮಗಳಿಗೆ ಸಿದ್ಧವಾಗಿದೆ ಎಂದು ಪಿಸಿಬಿ ಮೂಲಗಳು ತಿಳಿಸಿವೆ.

ಆರ್ಥಿಕವಾಗಿ ಪಾಕ್‌ಗೆ ನಷ್ಟ

ಪಾಕಿಸ್ತಾನ ಭಾರತ ವಿರುದ್ಧ ಆಡದಿದ್ದರೆ, ಅವರು ಆರ್ಥಿಕ ದಂಡವನ್ನು ಎದುರಿಸಬೇಕಾಗುತ್ತದೆ, ಪ್ರಸಾರಕರು ಮೊಕದ್ದಮೆ ಹೂಡಬಹುದು, ಜೊತೆಗೆ ಐಸಿಸಿ ವಿವಾದ ಪರಿಹಾರ ಸಮಿತಿ (ಡಿಆರ್‌ಸಿ) ಗೆ ಹೋಗುವ ಯಾವುದೇ ಪ್ರಯತ್ನಗಳು ವಿಫಲಗೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ. . ಐಸಿಸಿಯ ಡಿಆರ್‌ಸಿ ಆಂತರಿಕ ಸಮಿತಿಯಾಗಿದ್ದು, ಅದು ತನ್ನದೇ ಆದ ಮಂಡಳಿಯು ತೆಗೆದುಕೊಳ್ಳುವ ನಿರ್ಧಾರಗಳ ವಿರುದ್ಧ ಮೇಲ್ಮನವಿಗಳನ್ನು ಅದು ಪರಿಗಣಿಸುವುದಿಲ್ಲ.

ಇದನ್ನೂ ಓದಿ: ಪಾಕ್‌ನಿಂದ ಮತ್ತೊಂದು ನಾಟಕ, ಐಸಿಸಿಗೆ ಇಮೇಲ್‌ ಮಾಡದೇ ಆಟ

Leave a Reply

Your email address will not be published. Required fields are marked *