Thecha Noodles: ಪಟ್‌ ಅಂತ ಮಾಡಿ ಟೇಚಾ ನೂಡಲ್ಸ್‌, ಇಲ್ಲಿದೆ ರೆಸಿಪಿ

how to prepare Thecha Noodles

ಮಹಾರಾಷ್ಟ್ರದಲ್ಲಿ ಟೇಟಾ ಎನ್ನುವುದು ಬಹಳ ಫೇಮಸ್‌. ವೆರೈಟಿ ವೆರೈಟಿ ಟೇಚಾ ಮಾಡುತ್ತಾರೆ. ಅದೇ ರೀತಿ ಟೇಚಾ ನೂಡಲ್ಸ್‌ ಸಹ ಮಾಡಬಹುದು. ಹೌದು, ನೂಡಲ್ಸ್‌ ಅಂದ್ರೆ ಎಲ್ಲರಿಗೂ ಬಹಳ ಇಷ್ಟ. ಈ ನೂಡಲ್ಸ್‌ ಅಲ್ಲೂ ವೆರೈಟಿ ಮಾಡಿದ್ರೆ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ. ಇವತ್ತು ನಾವು ನಿಮಗೆ ಟೇಚಾ ನೂಡಲ್ಸ್‌ (Thecha Noodles) ಮಾಡೋದು ಹೇಗೆ ಅಂತ ಹೇಳಿಕೊಡ್ತೀವಿ. ಮನೆಯಲ್ಲಿ ಮಿಸ್‌ ಮಾಡದೇ ಟ್ರೈ ಮಾಡಿ.

ಥೀಚಾ ನೂಡಲ್ಸ್‌ ಮಾಡಲು ಬೇಕಾಗುವ

1 ಪ್ಯಾಕೆಟ್ ನೂಡಲ್ಸ್

1 ಈರುಳ್ಳಿ, ಸಣ್ಣಗೆ ಕತ್ತರಿಸಿಕೊಳ್ಳಿ

1/2 ಕ್ಯಾಪ್ಸಿಕಂ, ಕತ್ತರಿಸಿಕೊಳ್ಳಿ

2 ಚಮಚ ಎಣ್ಣೆ

ಉಪ್ಪು ರುಚಿ ನೋಡಲು

ಸೋಯಾ ಸಾಸ್‌ 1 ಚಮಚ

ನಿಂಬೆ ರಸ 1 ಚಮಚ

3 ಚಮಚ ಟೇಚಾ ಚಟ್ನಿ

ಕರಿಮೆಣಸನ್ನು ರುಚಿಗೆ ತಕ್ಕಷ್ಟು

ಉಪ್ಪು ರುಚಿಗೆ ತಕ್ಕಷ್ಟು

ಟೇಚಾ ನೂಡಲ್ಸ್‌ ಮಾಡುವ ವಿಧಾನ

ಮೊದಲು ಕುದಿಯಲು ಬಿಸಿ ನೀರು ಇಡಿ.  ಅದಕ್ಕೆ ಸ್ವಲ್ಪ ಉಪ್ಪನ್ನ ಹಾಕಿ, ಪ್ಯಾಕೆಟ್‌ ನೂಡಲ್ಸ್‌ ಹಾಕಿ ಕುದಿಯಲು ಬಿಡಿ. ಇನ್ನೊಂದು ಕಡೆ ಒಂದು ಪ್ಯಾನ್‌ನಲ್ಲಿ, ಸಣ್ಣಗೆ ಕತ್ತರಿಸಿದ ಈರುಳ್ಳಿಯನ್ನು ಹಾಕಿ ಕೆಲವು ಸೆಕೆಂಡುಗಳ ಕಾಲ ಫ್ರೈ ಮಾಡಿ. ನಂತರ, ಉದ್ದವಾಗಿ ಕತ್ತರಿಸಿದ ಕ್ಯಾಪ್ಸಿಕಂ ಅನ್ನು ಹಾಕಿ ಬೇಗನೆ ಮಿಶ್ರಣ ಮಾಡಿ. ಸ್ವಲ್ಪ ಹೊತ್ತು ಕಾಯಿಸಿದ ನಂತರ, ಸೋಯಾ ಸಾಸ್ ಮತ್ತು ನಿಂಬೆ ರಸವನ್ನು ಮಿಶ್ರಣಕ್ಕೆ ಸೇರಿಸಿ, ಚೆನ್ನಾಗಿ ಕಲಸಿ. ನಂತರ ಎರಡು ನಿಮಿಷ ಬೇಯಲು ಬಿಡಿ, ನಂತರ 3 ಚಮಚ ಟೀಚಾ ಚಟ್ನಿ ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.

ಈಗ, ಬೇಯಿಸಿದ ನೂಡಲ್ಸ್ ಅನ್ನು ಇದಕ್ಕೆ  ಮಿಶ್ರಣ ಮಾಡಿ ಮತ್ತು ಸಂಪೂರ್ಣವಾಗಿ ಕಲಸಿ. ನಿಮ್ಮ ನೂಡಲ್ಸ್ ಹೆಚ್ಚು ಖಾರವಾಗಿದ್ದರೆ, ಅದಕ್ಕೆ ಅನುಗುಣವಾಗಿ ಟೀಚಾ ಚಟ್ನಿ ಪ್ರಮಾಣವನ್ನು ಹೊಂದಿಸಿಕೊಳ್ಳಬೇಕು.. ನೀವು ಸ್ವಲ್ಪ ಕರಿಮೆಣಸನ್ನು ಕೂಡ ಸೇರಿಸಬಹುದು.

ಇದನ್ನೂ ಓದಿ: ಮನೆಗೆ ಗೆಸ್ಟ್‌ ಬರ್ತಿದ್ದಾರಾ? ವಾಸಾಬಿ ಮಟರ್‌ ಚಾಟ್‌ ಮಾಡಿ ಕೊಡಿ

Leave a Reply

Your email address will not be published. Required fields are marked *