ದಕ್ಷಿಣ ಭಾರತದಲ್ಲಿ ದೋಸೆ ಹಾಗೂ ಇಡ್ಲಿಗೆ ಇರುವ ಮಹತ್ವ ಬೇರೆ ಯಾವುದಕ್ಕೂ ಇಲ್ಲ ಎನ್ನಬಹುದು. ಪ್ರತಿದಿನವೂ ಇಡ್ಲಿ ಕೊಟ್ಟರೆ ತಿನ್ನುವ ಜನ ಇದ್ದಾರೆ. ಹಾಗೆಯೇ, ವೆರೈಟಿ ವೆರೈಟಿ ಇಡ್ಲಿ ಮಾಡಬಹುದು. ಬೀಟ್ರೂಟ್ ಇಡ್ಲಿ ಬಗ್ಗೆ ಕೇಳಿದ್ದೀರಾ? ಬಹಳ ಡಿಫರೆಂಟ್ ಮಾತ್ರ ಅಲ್ಲ ತುಂಬಾ ಟೇಸ್ಟಿ ಕೂಡ. ಹಾಗಾದ್ರೆ ಮನೆಯಲ್ಲಿ ಸುಲಭವಾಗಿ ಬೀಟ್ರೂಟ್ ಇಡ್ಲಿ (Beetroot Idli) ಮಾಡುವುದು ಹೇಗೆ? ಅದಕ್ಕೆ ಏನೆಲ್ಲಾ ಬೇಕು? ಇಲ್ಲಿದೆ ರೆಸಿಪಿ.
ಬೀಟ್ರೂಟ್ ಇಡ್ಲಿ ಫ್ರೈ ಮಾಡಲು ಬೇಕಾಗುವ ಸಾಮಗ್ರಿಗಳು
2 ಕಪ್ ಅಕ್ಕಿ
1 ಕಪ್ ಉದ್ದಿನ ಬೇಳೆ
1 ಮಧ್ಯಮ ಗಾತ್ರದ ಬೀಟ್ರೂಟ್, ಕತ್ತರಿಸಿಕೊಂಡಿರಿ
ಎಣ್ಣೆ
1 ಮಧ್ಯಮ ಗಾತ್ರದ ಈರುಳ್ಳಿ, ಸಣ್ಣಗೆ ಕತ್ತರಿಸಿಕೊಳ್ಳಿ
2 ಹಸಿ ಮೆಣಸಿನಕಾಯಿ
1 ಟೀಸ್ಪೂನ್ ಜೀರಿಗೆ
1/2 ಟೀಸ್ಪೂನ್ ಸಾಸಿವೆ
1/2 ಟೀಸ್ಪೂನ್ ಅರಿಶಿನ ಪುಡಿ
ಗರಂ ಮಸಾಲ (ನಿಮಗೆ ಬೇಕಾದರೆ ಹಾಕಬಹುದು)
ಕೆಂಪು ಮೆಣಸಿನ ಪುಡಿ (ರುಚಿಗೆ ತಕ್ಕಂತೆ)
ಇಂಗು
2-3 ಚಮಚ ತುಪ್ಪ/ಎಣ್ಣೆ
5-6 ಕರಿಬೇವಿನ ಎಲೆಗಳು
ಬೀಟ್ರೂಟ್ ಇಡ್ಲಿ (Beetroot Idli) ಮಾಡುವ ಸುಲಭ ವಿಧಾನ ಹೀಗಿದೆ
ಮೊದಲು ಎರಡು ಪ್ರತ್ಯೇಕ ಬಟ್ಟಲುಗಳಲ್ಲಿ, ಅಕ್ಕಿ ಮತ್ತು ಬೇಳೆಯನ್ನು ತೊಳೆದು ನೆನೆಸಿಡಿ. 6-7 ಗಂಟೆಗಳ ಕಾಲ ಪಕ್ಕಕ್ಕೆ ಇರಿಸಿ. ನೆನೆಸಿದ ನಂತರ, ಅವುಗಳನ್ನು ಬ್ಲೆಂಡರ್ನಲ್ಲಿ ಪೇಸ್ಟ್ನಂತೆ ನಯವಾದ ತನಕ ಪೇಸ್ಟ್ ಮಾಡಿ. ಬೇಳೆ ಮತ್ತು ಅಕ್ಕಿ ಮಿಶ್ರಣವು ಗಂಟು ಇರದಂತೆ ನೋಡಿಕೊಳ್ಳಿ. ಬೇಕಾದರೆ ನೀವು ಸ್ವಲ್ಪ ನೀರನ್ನ ಹಾಕಬಹುದು. ರಾತ್ರಿಯಿಡೀ ಅವುಗಳನ್ನು ಹುದುಗಲು ಬಿಡಿ.
ಬೆಳಗ್ಗೆ ಕತ್ತರಿಸಿದ ಬೀಟ್ರೂಟ್ ಅನ್ನು ಬ್ಲೆಂಡರ್ ನಲ್ಲಿ ಹಾಕಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ. ಪೇಸ್ಟ್ ಮೃದುವಾಗಿರಲು ನೀವು 1-2 ಟೀ ಚಮಚ ನೀರನ್ನು ಸೇರಿಸಬಹುದು. ಈಗ ಇಡ್ಲಿ ಹಿಟ್ಟು ರಾತ್ರಿಯಿಡೀ ಹುದುಗಿಸಿದ ನಂತರ, ಬೀಟ್ರೂಟ್ ಪೇಸ್ಟ್ ಅನ್ನು ಸ್ವಲ್ಪ ಉಪ್ಪನ್ನ ಹಾಕಿ ಮಿಶ್ರಣ ಮಾಡಿ. ಇದರಿಂದ ಹಿಟ್ಟು ಗುಲಾಬಿ ಬಣ್ಣಕ್ಕೆ ತಿರುಗುತ್ತದೆ. ಹಿಟ್ಟು ತುಂಬಾ ದಪ್ಪವಾಗಿದ್ದರೆ, ¼ ಕಪ್ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಇಡ್ಲಿ ತಟ್ಟೆಗಳಿಗೆ ತುಪ್ಪ ಅಥವಾ ಎಣ್ಣೆ ಸವರಿ, ಬೀಟ್ರೂಟ್ ಹಿಟ್ಟನ್ನು ಅದರಲ್ಲಿ ಸುರಿಯಿರಿ. ಅದನ್ನ ಸ್ಟೀಮರ್ನಲ್ಲಿ ಇರಿಸಿ ಮತ್ತು ಇಡ್ಲಿಗಳನ್ನು 15-20 ನಿಮಿಷಗಳ ಕಾಲ ಹಬೆಯಲ್ಲಿ ಬೇಯಿಸಿ. ಇಡ್ಲಿಗಳನ್ನು ತೆಗೆಯುವ ಮೊದಲು ಸ್ವಲ್ಪ ತಣ್ಣಗಾಗಲು ಬಿಡಿ.
ಈಗ ಒಂದು ಪ್ಯಾನ್ ನಲ್ಲಿ ಸ್ವಲ್ಪ ಎಣ್ಣೆ ಅಥವಾ ತುಪ್ಪ ಬಿಸಿ ಮಾಡಿ, ಸಾಸಿವೆ ಮತ್ತು ಜೀರಿಗೆ ಹಾಕಿ ಚೆನ್ನಾಗಿ ಬಾಡಿಸಿ. ನಂತರ ಕತ್ತರಿಸಿದ ಈರುಳ್ಳಿ ಮತ್ತು ಕರಿಬೇವು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಉಳಿದ ಮಸಾಲೆಗಳು, ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ, ಉಪ್ಪು ಮತ್ತು ಕತ್ತರಿಸಿದ ಹಸಿ ಮೆಣಸಿನಕಾಯಿಗಳನ್ನು ಸೇರಿಸಿ. ಇದಕ್ಕೆ ನೀವು ಸ್ವಲ್ಪ ಗರಂ ಮಸಾಲವನ್ನು ಸೇರಿಸುವ ಮೂಲಕ ಮಸಾಲೆ ರುಚಿ ಹೆಚ್ಚಿಸಬಹುದು.

ಈ ಮಧ್ಯೆ, ಬೀಟ್ರೂಟ್ ಇಡ್ಲಿಗಳನ್ನು ತೆಗೆದು ನಾಲ್ಕು ತುಂಡುಗಳಾಗಿ ಕತ್ತರಿಸಿ. ಬೀಟ್ರೂಟ್ ಇಡ್ಲಿ ತುಂಡುಗಳನ್ನು ಪ್ಯಾನ್ಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
ಇಡ್ಲಿಗಳು ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗುವವರೆಗೈ ಸ್ವಲ್ಪ ಗರಿಗರಿಯಾಗುವವರೆಗೆ ಫ್ರೈ ಮಾಡಿ.. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಬೀಟ್ರೂಟ್ ಇಡ್ಲಿ ಸವಿಯಲು ಸಿದ್ದ.
ಇದನ್ನೂ ಓದಿ: ಬೀಟ್ರೂಟ್-ಬದನೆಕಾಯಿ ಚಿಪ್ಸ್ ತಿಂದಿದ್ದೀರಾ? ಇಲ್ಲಿದೆ ರೆಸಿಪಿ
