ನಂಜನಗೂಡು: ರಾಜ್ಯದಲ್ಲಿ ಕಾಳಸಂತೆ (Crime) ದಂಧೆ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿದ್ದು, ಇದೀಗ ಈ ಶನಿವಾರ ನಂಜನಗೂಡು ಗ್ರಾಮಾಂತರ ಪೊಲೀಸರು ಪಡಿತರ ಅಕ್ಕಿ ಮಾರಾಟ ಮಾಡುವವರನ್ನ ಸೆರೆ ಹಿಡಿದಿದ್ದಾರೆ.
90 ಮೂಟೆ ಪಡಿತರ ಅಕ್ಕಿ ಸೆರೆ
ಇದೇ ಶನಿವಾರ ಫೆಬ್ರವರಿ 7ರಂದು ಪಡಿತರ ಅಕ್ಕಿಯನ್ನ ಕಾಳಸಂತೆಗೆ ಮಾರಾಟ ಮಾಡುತ್ತಿರುವ ಬಗ್ಗೆ ನಿಖರ ಮಾಹಿತಿ ಸಿಕ್ಕ ಮೇರೆಗೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಆನಂದ್ 90 ಮೂಟೆ ಅಕ್ಕಿ ಸಾಗಿಸುತ್ತಿದ್ದ ಗಾಡಿ ಹಿಡಿದು ದಕ್ಷತೆ ಮೆರೆದಿದ್ದಾರೆ.
ಓರ್ವ ಆರೋಪಿ ಸೆರೆ
ಇನ್ನು ಈ ಕಾರ್ಯಾಚರಣೆಯಲ್ಲಿ ಒಬ್ಬ ಆರೋಪಿಯನ್ನ ಬಂಧನ ಮಾಡಲಾಗಿದುದ, ನಂಜನಗೂಡು ಮಲ್ಲನ ಮೂಲೆ ಬಳಿ ಗಾಡಿ ಹಿಡಿದು ಅಕ್ಕಿ ಮೂಟೆ ಹಾಗೂ ಆರೋಪಿಯನ್ನ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ನೂರಾರು ಕೋಟಿ ವಂಚಿಸಿದ್ದ ಆರೋಪಿಗಳು ಅಂದರ್, ಮಂಗಳೂರು ಪೊಲೀಸರಿಂದ ಕಾರ್ಯಾಚರಣೆ
