ಕಾರವಾರ: ಮಹಿಳೆಯ ಜೊತೆ ಅನೈತಿಕ (Crime) ಸಂಬಂಧದ ವಿಚಾರವಾಗಿ ಖ್ಯಾತಿ ಜ್ಯೋತಿಷಿ ಕಮಲಾಕರ್ ಭಟ್ (Kamalakar Bhatt) ಅವರನ್ನ ಪೊಲೀಸರು ಬಂಧನ ಮಾಡಿದ್ದಾರೆ.
ಗಂಡನ ಕೊಲೆಗೆ ಸ್ಕೆಚ್ ಹಾಕಿದ್ದ ಮಹಿಳೆ
ಮಾಹಿತಿಗಳ ಪ್ರಕಾರ, ಮಹಿಳೆಯ ಜೊತೆ ಕಮಲಾಕರ್ ಭಟ್ ಅವರಿಗೆ ಅನೈತಿಕ ಸಂಬಂಧ ಇತ್ತು ಎನ್ನಲಾಗಿದೆ. ಈ ಸಂಬಂಧಕ್ಕೆ ಮಹಿಳೆಯ ಪತಿ ಅಡ್ಡಿ ಆಗಿದ್ದ, ಹಾಗಾಗಿ ಗಂಡನನ್ನ ಕೊಲೆ ಮಾಡಲು ಆ ಮಹಿಳೆ ಪ್ಕ್ಯಾನ್ ಮಾಡಿದ್ದಳು. ಆದರೆ ಈ ಪ್ಲ್ಯಾನ್ ಉಲ್ಟಾ ಹೊಡೆದಿದ್ದು, ಗಂಡನ ಬದಲು ಆತನನ್ನ ಪಾರು ಮಾಡಲು ಹೋದ ಅಣ್ಣ ಕೊಲೆ ಆಗಿದ್ದಾನೆ. ಈ ಪ್ರಕರಣದಲ್ಲಿ ಕಮಲಾಕರ್ ಭಟ್ ಹೆಸರು ಕೇಳಿ ಬಂದಿದ್ದು, ಸದ್ಯ ಪೊಲೀಸರು ಅವರನ್ನ ಬಂಧಿಸಿದ್ದಾರೆ.
ಏನಿದು ಪ್ರಕರಣ?
ಜ್ಯೋತಿಷಿ ಕಮಲಾಕರ್ ಭಟ್ ಅವರಿಗೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಮಹೇಶ್ ನಾಯ್ಕ್ ಎನ್ನುವ ವ್ಯಕ್ತಿಯ ಪತ್ನಿ ಸುಚಿತ್ರಾ ಎಂಬಾಕೆಯ ಜೊತೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ. ಈ ವಿಚಾರ ತಿಳಿದ ಪತಿ ಮಹೇಶ್, ಪತ್ನಿಯನ್ನ ಪ್ರಶ್ನೆ ಮಾಡಿದ್ದ. ತಮ್ಮ ಸಂಬಂಧಕ್ಕೆ ಗಂಡ ಅಡ್ಡಿ ಆಗುತ್ತಿದ್ದಾನೆ ಎಂದು ಪತ್ನಿ ಸುಚಿತ್ರಾ ಹಾಗೂ ಜ್ಯೋತಿಷಿ ಕಮಲಾಕರ್ ಭಟ್ ಸೇರಿದಂತೆ ಕೆಲವರು ಮಹೇಶ್‌ನನ್ನ ಕೊಲೆ ಮಾಡಲು ಪ್ಲ್ಯಾನ್ ಮಾಡಿದ್ದಾರೆ. ಆದರೆ ಈ ಪ್ಕ್ಯಾನ್ ಸರಿಯಾಗಿ ಕೆಲಸ ಮಾಡದೇ ಮಿಸ್ ಆಗಿದೆ. ಮಹೇಶ್ ನಾಯ್ಕ್ ಮಿಸ್ ಆಗಿದ್ದು, ಆದರೆ ಆತನ ಸಹೋದರ ವಸಂತ್ ನಾಯ್ಕ್ ಈ ಸಂಚಿಗೆ ಬಲಿಯಾಗಿ ಪ್ರಾಣ ಕಳೆದುಕೊಂಡಿದ್ದಾನೆ.
ಹೌದು, ಪತ್ನಿ ಸುಚಿತ್ರಾ ಕಳುಹಿಸಿದ್ದ ಕೊಲೆಗಾರರ ಗ್ಯಾಂಗ್ ಸಡನ್ ಆಗಿ ಮಹೇಶ್ ನಾಯ್ಕ್ ಅವರ ಮೇಲೆ ಹಲ್ಲೆ ಮಾಡಿತ್ತು. ಈ ವಿಚಾರ ತಿಳಿದ ತಕ್ಷಣ ಸಹೋದರ ವಸಂತ್ ನಾಯ್ಕ್ ತಮ್ಮನನ್ನ ಕಾಪಾಡಲು ಬಂದಿದ್ದಾರೆ. ಈ ಸಮಯದಲ್ಲಿ ಗಲಾಟೆ ಆಗಿದೆ. ಆದರೆ ಅದೃಷ್ಟವಶಾತ್ ಮಹೇಶ್ ಬಚಾವ್ ಆಗಿದ್ದು, ಅಣ್ಣ ವಸಂತ್ ಕೊಲೆ ಆಗಿದ್ದಾರೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹೇಶ್ ಪತ್ನಿ ಆರೋಪಿ ಮಹಿಳೆ ಸುಚಿತ್ರಾ, ಸುಚಿತ್ರಾಳ ತಂದೆ ಲೋಕನಾಥ್, ಕಮಲಾಕರ ಸ್ವಾಮಿ ಭಟ್ ಅವರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ಕಾರಿನಿಂದ ಮಹಿಳೆಗೆ ಫ್ಲೈಯಿಂಗ್ ಕಿಸ್ ಕೊಟ್ಟ ಭೂಪ ಅರೆಸ್ಟ್
