Pakistan: ಅಫ್ಘಾನಿಸ್ತಾನದ ಮೇಲೆ ಪಾಕ್ ದಾಳಿ, ಭಾರತದ ವಿರೋಧ
ನವದೆಹಲಿ: ಅಫ್ಘಾನಿಸ್ತಾನದ ಭೂಪ್ರದೇಶದಲ್ಲಿ ಪಾಕಿಸ್ತಾನ (Pakistan) ನಡೆಸಿರುವ ವಾಯು ದಾಳಿಗಳನ್ನು ಭಾರತ ಖಂಡಿಸಿದೆ. ಈ ದಾಳಿಗಳು ಹಲವು ನಾಗರಿಕರ ಸಾವು ಹಾಗೂ ನಾಗರಿಕ ಮೂಲ ಸೌಕರ್ಯ ನಾಶಕ್ಕೆ ಕಾರಣವಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಸಾಮಾಜಿಕ ಮಾದ್ಯಮ ಪೋಸ್ಟ್ ನಲ್ಲಿ ತಿಳಿಸಿದ್ದಾರೆ. ಪಾಕಿಸ್ತಾನದ ವಿರುದ್ಧ ಭಾರತ ಗರಂ ಇದು ಅಫ್ಘಾನಿಸ್ತಾನದ ಸಾರ್ವಭೌಮತೆಗೆ ಪ್ರತಿಕೂಲವಾಗಿದ್ದು, ಪಾಕಿಸ್ತಾನದ ಆಕ್ರಮಣಕಾರಿ ಕೃತ್ಯವಾಗಿದೆ. ಅಫ್ಘಾನಿಸ್ತಾನದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಪಾಕಿಸ್ತಾನ ಸಂಪೂರ್ಣವಾಗಿ ಗೌರವಿಸಬೇಕು ಎಂದು ಭಾರತ ಪುನರುಚ್ಛರಿಸುತ್ತದೆ ಎಂದು…
