Bigg Boss: ಬಿಗ್‌ಬಾಸ್‌ ಮನೆಗೆ ಬಂದ್ರು ಸ್ಟಾರ್‌ ಹೀರೋ, ಕಾವ್ಯ-ಸ್ಪಂದನಾ ಜೊತೆ ಡ್ಯಾನ್ಸ್

Bigg Boss kannada ravichandran visited house

ಬೆಂಗಳೂರು: ಸದ್ಯ ಕನ್ನಡದ ಬಿಗ್‌ಬಾಸ್‌ (Bigg Boss) ಸೀಸನ್‌ 12 ಜನರಿಂದ ಒಳ್ಳೆಯ ರೆಸ್ಪಾನ್ಸ್‌ ಪಡೆದುಕೊಂಡಿದೆ. ಅದರಲ್ಲೂ ಹಳೆಯ ಸೀಸನ್‌ ಸ್ಪರ್ಧಿಗಳಾದ ರಜತ್‌ ಹಾಗೂ ಚೈತ್ರಾ ಎಂಟ್ರಿಯಾದ ನಂತರ ಆಟದ ದಿಕ್ಕು ಬದಲಾಗಿದೆ. ಪ್ರತಿಯೊಂದು ಟಾಸ್ಕ್‌ಗಳು ರೋಚಕ ಅನಿಸಿಕೊಳ್ಳುತ್ತಿದೆ. ಇದೀಗ ಈ ಬಿಗ್‌ಬಾಸ್‌ ಮನೆಗೆ ಕ್ರೇಜಿ ಸ್ಟಾರ್‌ ರವಿಚಂದ್ರನ್‌ ಬಂದಿದ್ದು, ಸ್ಪರ್ಧಿಗಳ ಜೊತೆ ಡ್ಯಾನ್ಸ್‌ ಮಾಡಿದ್ದಾರೆ.

ಸಿನಿಮಾ ಪ್ರಚಾರಕ್ಕೆ ಬಂದ ಕ್ರೇಜಿ ಸ್ಟಾರ್

ಹೌದು, ರವಿಚಂದ್ರನ್‌ ಅವರು ಬಿಗ್‌ಬಾಸ್‌ ಮನೆಗೆ ಬಂದಿರುವ ಪ್ರೋಮೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಮಾಹಿತಿಗಳ ಪ್ರಕಾರ, ಅವರ ಪ್ಯಾರಾ ಎನ್ನುವ ಸಿನಿಮಾದ ಪ್ರಮೋಷನ್‌ಗಾಗಿ ಬಂದಿದ್ದಾರೆ. ಅವರು ಈ ಸಮಯದಲ್ಲಿ ಕಾವ್ಯಾ ಹಾಗೂ ಸ್ಪಂದನಾ ಜೊತೆ ಡ್ಯಾನ್ಸ್‌ ಮಾಡಿದ್ದಾರೆ. ಹಾಗೆಯೇ, ತಮ್ಮ ಹಳೆಯ ದಿನಗಳನ್ನ ನೆನಪು ಹಾಕಿದ್ದಾರೆ. ಸಿನಿಮಾದ ಅನುಭವಗಳನ್ನ ಹಂಚಿಕೊಂಡಿದ್ದಾರೆ.

ಸೀಕ್ರೆಟ್‌ ರೂಮ್‌ನಲ್ಲಿ ರಕ್ಷಿತಾ, ಧ್ರುವಂತ್‌

ಇನ್ನು ಕಳೆದ ವಾರ ಬಿಗ್ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಮಾಡಲಾಗಿದೆ. ಆದರೆ ಅದು ಎಲಿಮಿನೇಷನಲ್‌ ಅಲ್ಲ. ಇಬ್ಬರನ್ನ ಸೀಕ್ರೆಟ್‌ ರೂಮ್‌ನಲ್ಲಿ ಇಡಲಾಗಿದೆ. ರಕ್ಷಿತಾ ಹಾಗೂ ಧ್ರುವಂತ್‌ ಈ ಸೀಕ್ರೆಟ್‌ ರೂಮ್‌ನಲ್ಲಿ ಇದ್ದು, ಇಬ್ಬರ ನಡುವೆ ಭರ್ಜರಿ ಜಗಳ ಆಗುತ್ತಿದೆ. ಇದನ್ನ ನೋಡಿ ಪ್ರೇಕ್ಷಕರು ಸಹ ಎಂಜಾಯ್‌ ಮಾಡುತ್ತಿದ್ದಾರೆ. ಅಲ್ಲದೇ, ಬಿಗ್‌ಬಾಸ್‌ ಕೂಡ ಇಬ್ಬರಿಗೆ ಟಾಸ್ಕ್‌ ನೀಡುತ್ತಿದ್ದು, ಇಬ್ಬರ ನಡುವೆ ಕೋಳಿ ಜಗಳ ಒಂದೆಲ್ಲಾ ಒಂದು ವಿಚಾರಕ್ಕೆ ಆಗುತ್ತಿದೆ.

ಇದನ್ನೂ ಓದಿ: ಬಾಕ್ಸ್‌ ಆಫೀಸ್‌ನಲ್ಲಿ ಬಾಲಯ್ಯ ಆರ್ಭಟ, ಅಖಂಡ 2 ಓಟಿಟಿ ರಿಲೀಸ್‌ ಯಾವಾಗ?

Leave a Reply

Your email address will not be published. Required fields are marked *