Tumkuru: ತುಮಕೂರಿನಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ, ಡಿಸಿಎಂಗೆ ಆಹ್ವಾನ ನೀಡಿದ ಗೃಹ ಸಚಿವ ಪರಮೇಶ್ವರ್

Tumkuru sports program organized

ತುಮಕೂರು: ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಒಲಿಂಪಿಕ್ಸ್ ಸಮಿತಿಯು ಇದೇ 16ರಿಂದ 22ರ ವರೆಗೆ ತುಮಕೂರಿನಲ್ಲಿ (Tumkuru) ರಾಜ್ಯ ಮಟ್ಟದ ಕರ್ನಾಟಕ ಕ್ರೀಡಾಕೂಟ ಆಯೋಜನೆ ಮಾಡಿದೆ.

ಡಿಸಿಎಂಗೆ ಆಹ್ವಾನ ಕೊಟ್ಟ ಪರಂ

ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಡಾ. ಜಿ. ಪರಮೇಶ್ವರ್, ಬೆಂಗಳೂರಿನಲ್ಲಿಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ, ಕ್ರೀಡಾಕೂಟಕ್ಕೆ ಆಗಮಿಸುವಂತೆ ಆಮಂತ್ರಣ ನೀಡಿದ್ದಾರೆ.

ಡಿಸಿಎಂಗೆ ಆಮಂತ್ರಣ ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಪರಮೇಶ್ವರ್, ಇದೇ 16ರಿಂದ 22ರ ವರೆಗೆ 27 ಕ್ರೀಡಾ ವಿಭಾಗಗಳಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ 8 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. 16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರೀಡಾಕೂಟ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೇ, 22ರಂದು ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ರಾಜ್ಯಪಾಲರು ವಹಿಸಲಿದ್ದಾರೆ ಎಂದು ಹೇಳಿದ್ದಾರೆ.

ದ್ವೇಷ ಭಾಷಣ ಮಸೂದೆ ದೂರದೃಷ್ಟಿಯನ್ನ ಹೊಂದಿದೆ

 ದ್ವೇಷ ಭಾಷಣ ಮಸೂದೆಗೆ ಬಿಜೆಪಿ ಆಕ್ಷೇಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆ ಮಸೂದೆ ಅತ್ಯಂತ ದೂರದೃಷ್ಟಿಯನ್ನು ಹೊಂದಿದೆ. ಸಮಾಜದಲ್ಲಿ ಅನಗತ್ಯ ಹೇಳಿಕೆಗಳಿಂದ ಉಂಟಾಗುವ ಗೊಂದಲವನ್ನು ನಿವಾರಿಸಲು ಚರ್ಚೆ ನಡೆಸಿ, ಮಸೂದೆಯನ್ನು ತರಲಾಗಿದೆ. ರಾಜ್ಯಪಾಲರು ಯಾವುದೇ ಸ್ಪಷ್ಟನೆ ಕೇಳಿದರೆ, ಅದನ್ನು ನೀಡಲು ಸರ್ಕಾರ ಸಿದ್ಧವಿದೆ ಎಂದರು.  ಅಕ್ರಮ ಬಾಂಗ್ಲಾ ವಲಸಿಗರ ಕುರಿತು ಉತ್ತರಿಸಿದ ಅವರು, ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ವಾಸಿಗಳ ಬಗ್ಗೆ ಸಮಗ್ರ ಅಂಕಿ-ಅಂಶಗಳನ್ನು ಸಿದ್ಧಪಡಿಸುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ. ವಲಸಿಗರ ಆಧಾರ್ ಸೇರಿದಂತೆ ಎಲ್ಲಾ ಗುರುತಿನ ಚೀಟಿಗಳನ್ನು ಪತ್ತೆ ಹಚ್ಚಿ, ಅಕ್ರಮವಾಗಿ ನೆಲೆಸಿರುವವರನ್ನು ಡಿಪೋರ್ಟ್ ಮಾಡುವುದೂ ಸೇರಿದಂತೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ಇದನ್ನೂ ಓದಿ: ಕೇಂದ್ರದ ವಿರುದ್ಧ ಖರ್ಗೆ ಗರಂ, ಮಗ್ರೇಗಾ ರದ್ದತಿಗೆ ವಿರೋಧ

Leave a Reply

Your email address will not be published. Required fields are marked *