Rishabh Pant: ಟೀಂ ಇಂಡಿಯಾಗೆ ಶಾಕಿಂಗ್‌ ನ್ಯೂಸ್‌, ನ್ಯೂಜಿಲೆಂಡ್‌ ವಿರುದ್ದ ಆಡಲ್ಲ ರಿಷಬ್

Rishabh Pant out from ind vs nz match

ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ ಹೈವೋಲ್ಟೇಜ್ ಏಕದಿನ ಸರಣಿಗೆ ತಯಾರಿ ನಡೆಸುತ್ತಿರುವ ಟೀಂ ಇಂಡಿಯಾಗೆ ಶಾಕಿಂಗ್‌ ಸುದ್ದಿ ಸಿಕ್ಕಿದ್ದು, ವಿಕೆಟ್‌ ಕೀಪರ್‌ ರಿಷಬ್‌ ಪಂತ್‌ (Rishabh Pant) ತಂಡದಿಂದ ಹೊರಗೆ ಬಿದ್ದಿದ್ದಾರೆ.

ಗಾಯದ ಸಮಸ್ಯೆಯಿಂದ ಹೊರಬಂದ ರಿಷಬ್‌

ಮಾಹಿತಿಗಳ ಪ್ರಕಾರ, ಗಾಯದ ಸಮಸ್ಯೆ ಹಿನ್ನೆಲೆಯಲ್ಲಿ ರಿಷಬ್‌ ಅವರು ತಂಡದಿಂದ ಹೊರಗೆ ಬಂದಿದ್ದಾರೆ ಎನ್ನಲಾಗುತ್ತಿದೆ. ಶನಿವಾರ ನೆಟ್‌ ಪ್ರಾಕ್ಟೀಸ್‌ ಮಾಡುವಾಗ ಅವರಿಗೆ ಸಡನ್‌ ಆಗಿ ನೋವು ಕಾಣಿಸಿಕೊಂಡಿದೆ. ಹಾಗಾಗಿ ತಕ್ಷಣವೇ ಬಿಸಿಸಿಐ ಪಂತ್‌ ಅವರ ಬದಲಿಗೆ ಧ್ರುವ್ ಜುರೆಲ್ ಅವರನ್ನು ಬದಲಿ ಆಟಗಾರನಾಗಿ ಆಯ್ಕೆಮಾಡಿದೆ.

ಮೂಲಗಳ ಪ್ರಕಾರ, ರಿಷಬ್‌ ಅವರು ಶನಿವಾರ ಮಧ್ಯಾಹ್ನ ವಡೋದರಾದ ಬಿಸಿಎ ಸ್ಟೇಡಿಯಂನಲ್ಲಿ ಅಭ್ಯಾಸ ಮಾಡುತ್ತಿದ್ದರು. ಈ ಸಮಯದಲ್ಲಿ ಅವರಿಗೆ ಹೊಟ್ಟೆಯ ಬಲ ಭಾಗದಲ್ಲಿ ವಿಪರೀತ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ MRI ಸ್ಕ್ಯಾನ್‌ ಮಾಡಲಾಗಿದೆ. ಸ್ಕ್ಯಾನ್‌ನಲ್ಲಿ ‘ಓಬ್ಲಿಕ್ ಮಸಲ್ ಟಿಯರ್’ (Oblique Muscle Tear) ಆಗಿರೋದು ಪತ್ತೆ ಆಗಿದ್ದು, ವೈದ್ಯರು ರೆಸ್ಟ್‌ ಮಾಡುವಂತೆ ಹೇಳಿದ್ದಾರೆ. ಇನ್ನು ರಿಷಬ್‌ ಪಂತ್ ಅವರು ಆಟದಿಂದ ಹೊರಗೆ ಬಂದ ಕಾರಣದಿಂದ ವಿಕೆಟ್ ಕೀಪಿಂಗ್ ಜವಾಬ್ದಾರಿ ಕೆ.ಎಲ್ ರಾಹುಲ್ ಅವರ ಮಡಿಲಿಗೆ ಬೀಳಲಿದೆ ಎನ್ನಲಾಗುತ್ತಿದೆ.

ಹೊಸ ಟೀಂ ಇಂಡಿಯಾ ಹೀಗಿದೆ

ಶುಭಮನ್ ಗಿಲ್ ಕ್ಯಾಪ್ಟನ್ ಆಗಿದ್ರೆ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸಾಥ್ ನೀಡಲಿದ್ದಾರೆ. ಉಳಿದಂತೆ ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಸಿರಾಜ್, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ, ಕುಲದೀಪ್ ಯಾದವ್, ನಿತೀಶ್ ಕುಮಾರ್ ರೆಡ್ಡಿ ಮತ್ತು ಅರ್ಷದೀಪ್ ಸಿಂಗ್ ತಂಡದಲ್ಲಿದ್ದಾರೆ.

ಇದನ್ನೂ ಓದಿ: ವಿಶ್ವಕಪ್‌ ತಂಡದಿಂದ ಗಿಲ್‌ ಔಟ್‌, ಕೊನೆಗೂ ಮೌನ ಮುರಿದ ಶುಭಮನ್

Leave a Reply

Your email address will not be published. Required fields are marked *