ಭಾರತ ಕ್ರಿಕೆಟ್ ತಂಡ ಸದ್ಯ ಅನೇಕ ಸಮಸ್ಯೆಗಳನ್ನ ಅನುಭವಿಸುತ್ತಿದೆ. ಆಟಗಾರರ ವಿಚಾರದಲ್ಲಿ ತೆಗೆದುಕೊಂಡ ಅನೇಕ ನಿರ್ಧಾರಗಳ ಕಾರಣದಿಂದ ಸಮಸ್ಯೆಗಳಾಗುತ್ತಿದೆ ಎನ್ನಲಾಗುತ್ತಿದೆ. ಈ ವಿಚಾರವಾಗಿ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (R Ashwin) ಮಾತನಾಡಿದ್ದು, ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಅವರಿಗೆ ಬೆಂಬಲ ನೀಡಿದ್ದಾರೆ.
ಅನೇಕ ಬದಲಾವಣೆ ಮಾಡುತ್ತಿರುವ ಗಂಭೀರ್
ಹೆಡ್ಕೋಚ್ ಗೌತಮ್ ಗಂಭೀರ್ ನಿರಂತರವಾಗಿ ತಂಡದಲ್ಲಿ ಅನೇಕ ಬದಲಾವಣೆಗಳನ್ನ ಮಾಡುತ್ತಿದ್ದಾರೆ. ಅದಲ್ಲದೇ, ಅನೇಕ ಪ್ರಯೋಗಗಳನ್ನ ಸಹ ಮಾಡುತ್ತಿದ್ದಾರೆ. ಆದರೆ ಈ ಬದಲಾವಣೆಯ ಫಲಿತಾಂಶ ಮಾತ್ರ ಅವರು ಅಂದುಕೊಂಡಂತೆ ಬರುತ್ತಿಲ್ಲ. ಇದರಿಂದಾಗಿ ಕ್ರಿಕೆಟ್ ಅಭಿಮಾನಿಗಳು ಅವರನ್ನ ಟೀಕೆ ಮಾಡುತ್ತಿದ್ದಾರೆ. ಇತ್ತೀಚೆಗೆ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯನ್ನು ಭಾರತ ಸೋಲನ್ನ ಅನುಭವಿಸಿದೆ. ಈ ಕಾರಣದಿಂದ ಅಭಿಮಾನಿಗಳು ಭಾರತ ತಂಡದ ಮೇಲೆ ಅನೇಕ ಅನುಮಾನಗಳನ್ನ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಪ್ರಶ್ನೆ ಹುಟ್ಟಿಕೊಂಡಿದ್ದವು. ಅದಕ್ಕೆ ಮುಖ್ಯವಾದ ಕಾರಣ ಎಂದರೆ ನಾಲ್ಕನೇ ಕ್ರಮಾಂಕದಲ್ಲಿ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಬ್ಯಾಟಿಂಗ್ ಮಾಡಲು ಕಳುಹಿಸಿದ್ದು. ಆದರೆ ಅದಕ್ಕೂ ಮೊದಲು ಅವರು ಐದನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದ್ದರು. ಅಲ್ಲದೇ, ಕೇವಲ ಏಳು ಓವರ್ಗಳಲ್ಲಿ ಬೌಲಿಂಗ್ ಮಾಡಿದ್ದರು. ಇದು ಅಶ್ವಿನ್ ಅವರ ಕೋಪಕ್ಕೆ ಕಾರಣವಾಗಿದ್ದು, ತಂಡದಲ್ಲಿ ಸುಂದರ್ ಅವರ ಪಾತ್ರ ಸ್ಪಷ್ಟವಾಗಿರಬೇಕು ಎಂದು ಹೇಳಿದ್ದಾರೆ.
ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ವಾಷಿಂಗ್ಟನ್ ಸುಂದರ್ ಪಾತ್ರದ ಬಗ್ಗೆ ಮಾತನಾಡಿದ್ದು, ಟೀಂ ಇಂಡಿಯಾ ಆಡಳಿತ ಮಂಡಳಿ ಮೊದಲು ಅವರ ಪಾತ್ರದ ಬಗ್ಗೆ ತಿಳಿಸಬೇಕು. ಇಲ್ಲದಿದ್ದರೆ ಅವರು ಗೊಂದಲಕ್ಕೆ ಒಳಗಾಗುತ್ತಾರೆ. ಅವರನ್ನು ಬೌಲಿಂಗ್ ಆಲ್ರೌಂಡರ್ ಎಂದು ಪರಿಗಣಿಸಬೇಕು. ಪೂರ್ಣ ಓವರ್ಗಳನ್ನು ನೀಡಿದರೆ ಬ್ಯಾಟಿಂಗ್ನಲ್ಲಿ ಅವರ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಡ್ತಾರಾ ಹಿಟ್ ಮ್ಯಾನ್?
