ಹೈದರಾಬಾದ್: ಸಮಂತಾ ರುತ್ ಪ್ರಭು (Samantha Ruth Prabhu) ಹಾಗೂ ರಾಜ್ ನಿಧಿಮೋರು ಡಿಸೆಂಬರ್ 1 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಅವರ ಮದುವೆ ನಂತರ ಸೋಷಿಯಲ್ ಮೀಡಿಯಾದಲ್ಲಿ ಅನೇಕ ವಿಚಾರಗಳು ಚರ್ಚೆ ಆಗುತ್ತಿದೆ. ಅದಕ್ಕಿಂತ ಮುಖ್ಯವಾಗಿ ತೆಲುಗು ನಟಿಯೊಬ್ಬರ ಪೋಸ್ಟ್ ಅನೇಕ ಚರ್ಚೆಗಳನ್ನ ಹುಟ್ಟುಹಾಕಿದೆ.
ಅನಿರೀಕ್ಷಿತ ತಿರುವು ಕೊಟ್ಟ ನಟಿ ಪೋಸ್ಟ್
ಹೌದು, ತೆಲುಗು ನಟಿ ಪೂನಂ ಕೌರ್ ಅವರ ಪೋಸ್ಟ್ ವ್ಯಾಪಕವಾಗಿ ವೈರಲ್ ಆಗಿದ್ದು, ಅದು ಸಮಂತಾ ಹಾಗೂ ರಾಜ್ ಮದುವೆ ವಿಚಾರಕ್ಕೆ ಅನಿರೀಕ್ಷಿತ ತಿರುವು ಕೊಟ್ಟಿದೆ. ಸಮಂತಾ ತಮ್ಮ ಮದುವೆಯ ಫೋಟೋಗಳು ಪೋಸ್ಟ್ ಮಾಡಿದ ಕೂಡಲೇ ನಟಿ ಪೋಸ್ಟ್ ಮಾಡಿದ್ದು, ಇದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.
ಪೋಸ್ಟ್‌ನಲ್ಲಿ ಏನಿದೆ?
ಸ್ವಂತ ಮನೆಯನ್ನ ಕಟ್ಟಲು ಬೇರೆ ಮನೆಯನ್ನ ಮುರಿದಿದ್ದಾರೆ. ಹಣ ಪಡೆದುಕೊಂಡ ಪಿಆರ್ ಸಂಸ್ಥೆಗಳು ತಮ್ಮ ಅಭಿಯಾನದ ಮೂಲಕ ವೈಭವೀಕರಿಸಿದ, ಸೋ ಕಾಲ್ಡ್ ಸಬಲೀಕರಣಗೊಂಡಿರುವ ನಾರ್ಸಿಸಿಸ್ಟಿಕ್ ಮಹಿಳೆ.
ಹಣವು ದುರ್ಬಲ ಮತ್ತು ಹತಾಶ ಪುರುಷರನ್ನು ಖರೀದಿಸಬಹುದು ಎಂದು ಪೂನಂ ಕೌರ್ ಪೋಸ್ಟ್ ಮಾಡಿದ್ದಾರೆ. ಆದರೆ ಈ ಪೋಸ್ಟ್‌ನಲ್ಲಿ ಯಾವುದೇ ನಟಿಯ ಹೆಸರನ್ನ ಉಲ್ಲೇಖ ಮಾಡಿಲ್ಲ. ಆದರೆ ಇದು ಸಮಂತಾ ಅವರಿಗೆ ಸಂಬಂಧಪಟ್ಟಿದ್ದು ಎಂದು ಮಾತನಾಡಿಕೊಳ್ಳಲಾಗುತ್ತಿದೆ.
ಅಲ್ಲದೇ, ನಟಿ ಸಹ ಯಾವುದೇ ಸ್ಪಷ್ಟೀಕರಣವನ್ನು ನೀಡಲಿಲ್ಲ, ಇದು ಊಹಾಪೋಹ ಹೆಚ್ಚಾಗಲು ಕಾರಣವಾಗಿದೆ. ಇದರ ಜೊತೆಗೆ ರಾಜ್ ನಿಧಿಮೋರು ಅವರ ಮೊದಲ ಪತ್ನಿ ಶ್ಯಾಮಲಿ ಡೇ ಅವರ ಇನ್ಸ್ಟಾ ಸ್ಟೋರಿ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ರಾಜ್ ನಿಧಿಮೋರು ಅವರ ಮಾಜಿ ಪತ್ನಿ ಶ್ಯಾಮಲಿ ಡೇ ಕೂಡ ಹತಾಶ ಜನರು ಹತಾಶ ಕೆಲಸಗಳನ್ನು ಮಾಡುತ್ತಾರೆ” ಎಂದು ಸ್ಟೋರಿಯಲ್ಲಿ ಹಂಚಿಕೊಂಡಿದ್ದರು.
ಇದನ್ನೂ ಓದಿ:ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟ ಸಮಂತಾ, ಸದ್ದಿಲ್ಲದೆ ಮದುವೆಯಾದ ನಟಿ
