ನವದೆಹಲಿ: ಪಶ್ಚಿಮ ಬಂಗಾಳದ (West Bengal) ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ವಿಜಯ ದಾಖಲಿಸಿರುವ ಬಿಜೆಪಿ, ಇಡೀ ದೇಶದ ಗಮನ ಸೆಳೆದಿದೆ. ದಶಕಗಳ ಕಾಲದ ಮಮತಾ ಬ್ಯಾನರ್ಜಿ ಅವರ ಆಡಳಿತಕ್ಕೆ ಅಂತ್ಯ ಹಾಡಿರುವ ಸಂಭ್ರಮದಲ್ಲಿರುವ ಕೇಸರಿ ಪಡೆ, ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಭಾರತದ ಹೊಸ ರಾಜಕೀಯ ನಕ್ಷೆಯನ್ನು ಹಂಚಿಕೊಳ್ಳುವ ಮೂಲಕ ವಿರೋಧ ಪಕ್ಷಗಳಿಗೆ ಬಲವಾದ ಸಂದೇಶ ರವಾನಿಸಿದೆ.
ನಕ್ಷೆಯಲ್ಲಿ ಕೇಸರಿಮಯ ಬಂಗಾಳ: ಬಿಜೆಪಿ ಬಿಡುಗಡೆ ಮಾಡಿರುವ ಈ ವಿಶೇಷ ಭೂಪಟದಲ್ಲಿ ಪಶ್ಚಿಮ ಬಂಗಾಳವನ್ನು ಸಂಪೂರ್ಣವಾಗಿ ಕೇಸರಿ ಬಣ್ಣದಲ್ಲಿ ಚಿತ್ರಿಸಲಾಗಿದೆ. “ಬಂಗಾಳದಲ್ಲಿ ಕೇಸರಿ ಅಲೆ ಹರಡಿದೆ, ಭಾರತ ಈಗ ಮೋದಿಮಯ” ಎಂಬ ಶೀರ್ಷಿಕೆಯಡಿ ಈ ಪೋಸ್ಟ್ ಹಂಚಿಕೊಳ್ಳಲಾಗಿದೆ. ಉತ್ತರ ಭಾರತ ಮತ್ತು ಮಧ್ಯ ಭಾರತದ ನಂತರ ಈಗ ಪೂರ್ವ ಭಾರತದ ಪ್ರಬಲ ರಾಜ್ಯವಾದ ಬಂಗಾಳದಲ್ಲೂ ಕಮಲ ಅರಳಿದೆ ಎಂಬುದು ಈ ನಕ್ಷೆಯ ಪ್ರಮುಖ ಆಕರ್ಷಣೆಯಾಗಿದೆ.
𝐅𝐫𝐨𝐦 𝐭𝐡𝐞 𝐡𝐞𝐚𝐫𝐭𝐥𝐚𝐧𝐝 𝐭𝐨 𝐁𝐞𝐧𝐠𝐚𝐥, 𝐭𝐡𝐞 𝐦𝐚𝐩 𝐢𝐬𝐧’𝐭 𝐣𝐮𝐬𝐭 𝐞𝐱𝐩𝐚𝐧𝐝𝐢𝐧𝐠, 𝐢𝐭’𝐬 𝐭𝐡𝐞 𝐛𝐞𝐥𝐢𝐞𝐟 𝐨𝐟 𝐚 𝐧𝐚𝐭𝐢𝐨𝐧 𝐝𝐞𝐭𝐞𝐫𝐦𝐢𝐧𝐞𝐝 𝐭𝐨 𝐩𝐫𝐨𝐠𝐫𝐞𝐬𝐬.
— BJP (@BJP4India) May 4, 2026
North to Northeast, the colour shift is no longer subtle. Bengal is simply the… pic.twitter.com/QODKYqCyU1
ವಿಕಸಿತ ಭಾರತದ ಗುರಿ: ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಮಂತ್ರ ಮತ್ತು ನಾಯಕತ್ವಕ್ಕೆ ಬಂಗಾಳದ ಜನತೆ ಮುದ್ರೆ ಒತ್ತಿದ್ದಾರೆ ಎಂದು ಬಿಜೆಪಿ ಹೇಳಿಕೊಂಡಿದೆ. ಇದು ಕೇವಲ ಒಂದು ರಾಜ್ಯದ ಚುನಾವಣಾ ಫಲಿತಾಂಶವಲ್ಲ, ಬದಲಿಗೆ 2047ರ ಹೊತ್ತಿಗೆ ಭಾರತವನ್ನು ‘ವಿಕಸಿತ ಭಾರತ’ವನ್ನಾಗಿ ಮಾಡುವ ಹಾದಿಯಲ್ಲಿ ಸಂಭವಿಸಿದ ಮಹತ್ತರ ಬದಲಾವಣೆ ಎಂದು ಪಕ್ಷವು ಈ ಸಂದರ್ಭದಲ್ಲಿ ಬಣ್ಣಿಸಿದೆ.
ವಿರೋಧ ಪಕ್ಷಗಳ ಭದ್ರಕೋಟೆ ಧೂಳೀಪಟ: ಟಿಎಂಸಿಯ ಭದ್ರಕೋಟೆಯನ್ನು ಭೇದಿಸುವುದು ಅಸಾಧ್ಯ ಎಂಬ ರಾಜಕೀಯ ಪಂಡಿತರ ಲೆಕ್ಕಾಚಾರಗಳನ್ನು ಈ ಫಲಿತಾಂಶ ಸುಳ್ಳಾಗಿಸಿದೆ. ಈ ಗೆಲುವಿನ ಮೂಲಕ ದೆಹಲಿಯಿಂದ ಬಂಗಾಳದವರೆಗೂ ತನ್ನ ಪ್ರಾಬಲ್ಯವನ್ನು ವಿಸ್ತರಿಸಿರುವ ಬಿಜೆಪಿ, ಮುಂದಿನ 2029ರ ಲೋಕಸಭಾ ಸಮರಕ್ಕೂ ಮುನ್ನ ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ ಎಚ್ಚರಿಕೆಯ ಗಂಟೆ ಬಾರಿಸಿದೆ. ದೇಶದ ರಾಜಕೀಯ ಭೂಪಟದಲ್ಲಿ ಪಶ್ಚಿಮ ಬಂಗಾಳವನ್ನು ಕೇಸರಿಮಯವಾಗಿ ತೋರಿಸುವ ಮೂಲಕ ಬಿಜೆಪಿ ತನ್ನ ವಿಜಯೋತ್ಸವವನ್ನು ಸಾರಿದೆ.
ಇದನ್ನೂ ಓದಿ: ಬಾರಾಮತಿ ಉಪಸಮರದಲ್ಲಿ ಸುನೇತ್ರಾ ಪವಾರ್‌ಗೆ ಭರ್ಜರಿ ಜಯ: ಅಜಿತ್ ದಾದಾ ಭದ್ರಕೋಟೆ ಉಳಿಸಿಕೊಂಡ ಎನ್‌ಸಿಪಿ!
