ದಾವಣಗೆರೆ: ಪಶ್ಚಿಮ ಏಷ್ಯಾ ಸಂಘರ್ಷ ಜಾಗತಿಕ ಕಚ್ಚಾತೈಲದ ಮೇಲೆ ಪರಿಣಾಮ ಬೀರಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ತೆಗೆದುಕೊಂಡ ಸಕಾಲಿಕ ಕ್ರಮಗಳು ದೇಶದ ಜನರ ಮೇಲೆ ಹೊರೆಯಾಗದಂತೆ ಕಾಪಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ದಾವಣಗೆರೆಯಲ್ಲಿಂದು ಹೇಳಿದ್ದಾರೆ.
ಅಪಪ್ರಚಾರ ನಂಬಬೇಡಿ
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್ ಗೆ 10 ರೂಪಾಯಿ ಇಳಿಕೆ ಮಾಡಿದ್ದಾರೆ. ಜೊತೆಗೆ ಕಚ್ಚಾತೈಲದ ಸಮಸ್ಯೆ ಎದುರಾಗದಂತೆ ಎಚ್ಚರಿಕೆ ವಹಿಸಿದ್ದಾರೆ ಎಂದು ತಿಳಿಸಿದ್ದಾರೆ. ದೇಶದಲ್ಲಿ ಪೆಟ್ರೋಲ್, ಡೀಸೆಲ್, ಕಚ್ಚಾತೈಲದ ಕೊರತೆ ಇದೆ ಎನ್ನುವ ವದಂತಿಗಳು ಹಾಗೂ ಅಪಪ್ರಚಾರಗಳು ಹರಡುತ್ತಿದ್ದು, ಇದರಿಂದ ಜನರು ಆತಂಕಕ್ಕೆ ಒಳಗಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಯಾರೂ ಕೂಡ ಇಂತಹ ವದಂತಿಗಳು ಮತ್ತು ಅಪಪ್ರಚಾರಗಳನ್ನು ನಂಬದಿರಿ ಎಂದು ಮನವಿ ಮಾಡಿದರು.
ಜನರು ಆತಂಕ್ಕೆ ಒಳಗಾಗಬಾರದು
ಇರಾನ್ ನ ಹಾರ್ಮೂಜ್ ಜಲಸಂಧಿಯ ಮೂಲಕ ಭಾರತೀಯ ಕಚ್ಚಾತೈಲದ ಹಡಗು ಸಾಕಾಣೆಗೆ ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಕಚ್ಚಾತೈಲ, L P G ಹೊತ್ತ ಹಲವು ಹಡಗುಗಳು ಈಗಾಗಾಲೇ ಮಂಗಳೂರು, ಕಾರವಾರ, ವಿಶಾಖಪಟ್ಟಣ, ಗುಜರಾತ್ ಸೇರಿದಂತೆ ವಿವಿಧೆಡೆ ಆಗಮಿಸಿವೆ. ಈ ಹಿನ್ನೆಲೆಯಲ್ಲಿ ಜನರು ಆತಂಕಕ್ಕೆ ಒಳಗಾಗಬೇಡಿ ಎಂದು ಅವರು ಹೇಳಿದರು.
ಇದನ್ನೂ ಓದಿ: ನಾಳೆಯಿಂದ ವಾಣಿಜ್ಯ ಅಡುಗೆ ಸಿಲಿಂಡರ್ ಸರಬರಾಜು: ಮುನಿಯಪ್ಪ
