TOP NEWS
Let the DK Chants Roar in 2028 Polls CM

Big News: ಸಾರ್ವಜನಿಕರ ದೂರುಗಳಿಗೆ ಹೈಟೆಕ್ ಸ್ಪರ್ಶ: ಸಚಿವಾಲಯ ಮಟ್ಟದಲ್ಲಿ ‘ಪ್ರಜಾಸೇವಾ ಇಲಾಖೆ’ ಆರಂಭಿಸಿದ ಕರ್ನಾಟಕ ಸರ್ಕಾರ

ಬೆಂಗಳೂರು: ನಾಗರಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಮತ್ತು ಸರ್ಕಾರಿ ಕಚೇರಿಗಳಲ್ಲಿ ಕೆಲಸದ ವೇಗವನ್ನು ಹೆಚ್ಚಿಸಲು ಕರ್ನಾಟಕ ಸರ್ಕಾರವು (Big News) ಒಂದು ಮಹತ್ವದ ಹೆಜ್ಜೆ ಇಟ್ಟಿದೆ. ಸಾರ್ವಜನಿಕರ ಕುಂದುಕೊರತೆಗಳನ್ನು ಒಂದೇ ಸೂರಿನಡಿ ತಂದು ಅತ್ಯಂತ ತ್ವರಿತವಾಗಿ ಬಗೆಹರಿಸಲು ಸಚಿವಾಲಯದ ಮಟ್ಟದಲ್ಲಿ ನೂತನವಾಗಿ “ಪ್ರಜಾಸೇವಾ ಇಲಾಖೆ”ಯನ್ನು ಸೃಜಿಸಲಾಗಿದೆ. ಈ ಸಂಬಂಧ ಸರ್ಕಾರದ ಅಧೀನ ಕಾರ್ಯದರ್ಶಿಗಳಾದ ಗಾಯತ್ರಿ ಜಿ.ಎನ್ ಅವರು ಜೂನ್ 24 ರಂದು ಅಧಿಕೃತವಾಗಿ ಆದೇಶ ಹೊರಡಿಸಿದ್ದಾರೆ. ಕಳೆದ ಜೂನ್ 20 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ…

Read More
RBI new rules regarding bank fraud and digital scam

RBI: ಬ್ಯಾಂಕ್ ಖಾತೆಯಿಂದ ಸದ್ದಿಲ್ಲದೆ ಹಣ ಮಾಯವಾದರೆ ಇನ್ಮುಂದೆ ಆರ್‌ಬಿಐ ನೀಡಲಿದೆ ಪರಿಹಾರ!

ಬೆಂಗಳೂರು: ನೀವು ಕಷ್ಟಪಟ್ಟು ದುಡಿದು ಬ್ಯಾಂಕಿನಲ್ಲಿಟ್ಟ ಹಣ ನಿಮ್ಮ ಅರಿವಿಲ್ಲದೆಯೇ ರಾತ್ರೋರಾತ್ರಿ ಮಾಯವಾದರೆ ಎಂಥವರಿಗಾದರೂ ದಿಗಿಲಾಗುವುದು ಸಹಜ. ಇಂತಹ ಸೈಬರ್ ವಂಚನೆ ನಡೆದಾಗ ಹಳೇ ದಿನಗಳಲ್ಲಿ ಗ್ರಾಹಕರು ಬ್ಯಾಂಕುಗಳ ಕಚೇರಿಗಳಿಗೆ ಅಲೆದಾಡಿ ಬೇಸತ್ತು ಹೋಗುತ್ತಿದ್ದರು. ಬ್ಯಾಂಕುಗಳು ತಪ್ಪು ನಿಮ್ಮದೇ ಎಂದು ಜಾರಿಕೊಳ್ಳುತ್ತಿದ್ದವು. ಆದರೆ ಇನ್ಮುಂದೆ ಡಿಜಿಟಲ್ ಪೇಮೆಂಟ್ ವಲಯದಲ್ಲಿ ಗ್ರಾಹಕರಿಗೆ ಸಿಂಹಸ್ವಪ್ನವಾಗಿದ್ದ ಆನ್‌ಲೈನ್ ಲೂಟಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಐತಿಹಾಸಿಕ ಬ್ರೇಕ್ ಹಾಕಿದೆ. ಜೂನ್ 24 ರಂದು ಹೊರಡಿಸಲಾದ ಹೊಸ ‘ಬಾಧ್ಯತಾ ತಿದ್ದುಪಡಿ ನಿಯಮಾವಳಿ’ಗಳ…

Read More
Tragedy tea warehouse collapses in Kolkata

Tragedy: ನಿರ್ಮಾಣ ಹಂತದ ಗೋದಾಮಿನ ಮೇಲ್ಛಾವಣಿ ಕುಸಿದು ಭೀಕರ ದುರಂತ; ಮೂವರು ಕಾರ್ಮಿಕರು ಸಾವು

ಕೋಲ್ಕತಾ: ಪಶ್ಚಿಮ ಬಂಗಾಳದ (West Bengal) ರಾಜಧಾನಿ ಕೋಲ್ಕತಾದ ತಾರಾತಲಾ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ ಭೀಕರ ದುರಂತವೊಂದು (Tragedy) ಸಂಭವಿಸಿದೆ. ನಿರ್ಮಾಣ ಹಂತದಲ್ಲಿದ್ದ ಮೂರು ಅಂತಸ್ತಿನ ಬೃಹತ್ ಗೋದಾಮಿನ (Warehouse) ಮೇಲ್ಛಾವಣಿ ದಿಢೀರನೆ ಕುಸಿದು ಬಿದ್ದ ಪರಿಣಾಮ ಮೂವರು ಕಾರ್ಮಿಕರು ದುರ್ಮರಣಕ್ಕೀಡಾಗಿದ್ದಾರೆ. ಮೇಲ್ಛಾವಣಿ ಕುಸಿದ ತೀವ್ರತೆಗೆ ಕಟ್ಟಡದ ಒಳಗಡೆ ಕೆಲಸ ಮಾಡುತ್ತಿದ್ದ ಕನಿಷ್ಠ 40ಕ್ಕೂ ಹೆಚ್ಚು ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ. ಗೋದಾಮಿನ ಒಳಗಿದ್ದ ಕೂಲಿ ಕಾರ್ಮಿಕರು ಗೋದಾಮಿನಲ್ಲಿ…

Read More
How ketan Sister Suspicion Helped Unravel Murder Plot

Ketan Agarwal: ಪುಣೆ ಲೋಹಗಢ ಕೋಟೆ ಚಾರಣ ದುರಂತಕ್ಕೆ ಟ್ವಿಸ್ಟ್: ಉದ್ಯಮಿ ಕೇತನ್ ಸಾವು ಅಪಘಾತವಲ್ಲ

ಪುಣೆ: ಮಹಾರಾಷ್ಟ್ರದ ಪ್ರಸಿದ್ಧ ಪ್ರವಾಸಿ ತಾಣ ಲೋಹಗಢ ಕೋಟೆಯಲ್ಲಿ ಪುಣೆಯ ಉದ್ಯಮಿ ಕೇತನ್ ಅಗರ್ವಾಲ್ (Ketan Agarwal) ಕಣಿವೆಗೆ ಬಿದ್ದು ಸಾವನ್ನಪ್ಪಿದ್ದ ಪ್ರಕರಣಕ್ಕೆ ಈಗ ಭೀಕರ ತಿರುವು ಸಿಕ್ಕಿದೆ. ಆರಂಭದಲ್ಲಿ ಕೇವಲ ಆಕಸ್ಮಿಕ ಅಪಘಾತ ಎಂದು ಭಾವಿಸಲಾಗಿದ್ದ ಈ ಘಟನೆ, ವಾಸ್ತವವಾಗಿ ಕೇತನ್ ಭಾವಿ ಪತ್ನಿ (ಫಿಯಾನ್ಸೆ) ಸಿಯಾ ಗೋಯಲ್ ಮತ್ತು ಆಕೆಯ ರಹಸ್ಯ ಪ್ರಿಯಕರ ಸೇರಿ ನಡೆಸಿದ ಭೀಕರ ಕೊಲೆ ಎಂಬ ಆಘಾತಕಾರಿ ಸತ್ಯ ತನಿಖೆಯಿಂದ ಹೊರಬಿದ್ದಿದೆ. ಮೃತನ ಸಹೋದರಿ ವ್ಯಕ್ತಪಡಿಸಿದ ಒಂದೇ ಒಂದು ಬಲವಾದ…

Read More
Gadag kallayya ajja accused some trustee about death threat on him

Gadag: ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರಿಗೆ ಜೀವ ಬೆದರಿಕೆ!; ಕೋಟಿ ಕೋಟಿ ಮಠದ ಹಣದ ಮೇಲೆ ಕಣ್ಣಿಟ್ಟ ಟ್ರಸ್ಟಿಗಳ ವಿರುದ್ಧ ಗಂಭೀರ ಆರೋಪ!

ಗದಗ: ಉತ್ತರ ಕರ್ನಾಟಕದ ಸುಪ್ರಸಿದ್ಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕೇಂದ್ರವಾದ ಗದಗದ (Gadag) ವೀರೇಶ್ವರ ಪುಣ್ಯಾಶ್ರಮದಲ್ಲಿ ಈಗ ಭಿನ್ನಮತದ ಸ್ಫೋಟವಾಗಿದೆ. ಮಠದ ವಾರ್ಷಿಕ ರಥೋತ್ಸವದ ಸುತ್ತ ವಿವಾದಗಳು ಹಬ್ಬುತ್ತಿರುವ ಬೆನ್ನಲ್ಲೇ, ಆಶ್ರಮದ ಪೀಠಾಧಿಪತಿಗಳಾದ ಶ್ರೀ ಕಲ್ಲಯ್ಯಜ್ಜನವರು ತಮಗೆ ಸ್ವಂತ ಟ್ರಸ್ಟ್ ಕಮಿಟಿಯ ಸದಸ್ಯರಿಂದಲೇ ಪ್ರಾಣ ಭೀತಿ ಎದುರಾಗಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಬುಧವಾರ ಮಠದಲ್ಲಿ ಆಯೋಜಿಸಲಾಗಿದ್ದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಕ್ಷಣದಲ್ಲೂ ತಮ್ಮ ಮೇಲೆ ಭೌತಿಕ ಹಲ್ಲೆ ನಡೆಯುವ ಸಂಭವವಿದ್ದು, ತಮಗೆ ಸೂಕ್ತ…

Read More
crime Armed Men found at KJ Georges Chikkamagaluru Estate

Crime: ಸಚಿವ ಕೆ.ಜೆ. ಜಾರ್ಜ್ ಒಡೆತನದ ಕಾಫಿ ತೋಟಕ್ಕೆ ನುಗ್ಗಿದ ಸಶಸ್ತ್ರಧಾರಿಗಳು

ಚಿಕ್ಕಮಗಳೂರು: ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಸಚಿವರೊಬ್ಬರ ತೋಟಕ್ಕೆ ಸಶಸ್ತ್ರಧಾರಿಗಳು ನುಗ್ಗಿರುವ ಆತಂಕಕಾರಿ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ರಾಜ್ಯದ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಸೇರಿದ ಕಾಫಿ ಎಸ್ಟೇಟ್‌ನೊಳಗೆ ತಡರಾತ್ರಿ ನಾಲ್ವರು ಅನಾಮಧೇಯ ವ್ಯಕ್ತಿಗಳು ಮಾರಕಾಸ್ತ್ರಗಳೊಂದಿಗೆ (Crime) ಓಡಾಡಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯ ಹೆಸರಾಂತ ಪ್ರವಾಸಿ ತಾಣವಾದ ಮುಳ್ಳಯ್ಯನಗಿರಿ ಬೆಟ್ಟದ ತಪ್ಪಲಿನ ಆಸುಪಾಸಿನಲ್ಲಿರುವ, ಸಚಿವ ಕೆ.ಜೆ. ಜಾರ್ಜ್ ಅವರ ಮಾಲೀಕತ್ವದ ‘ಏಳುನೂರುಖಾನ್’ ಕಾಫಿ ಎಸ್ಟೇಟ್‌ನಲ್ಲಿ ಈ ಗಂಭೀರ ಕೃತ್ಯ ನಡೆದಿದೆ. ಕೈಯಲ್ಲಿ ಗನ್, ಲಾಂಗ್…

Read More
Gold and silver price dropped all over india

Gold Price: ಬಂಗಾರ ಪ್ರಿಯರಿಗೆ ಗುಡ್ ನ್ಯೂಸ್: ಭಾರಿ ಇಳಿಕೆ ಕಂಡ ಚಿನ್ನದ ದರ

ಬೆಂಗಳೂರು: ಜಾಗತಿಕ ಮಾರುಕಟ್ಟೆಯ ಏರಿಳಿತದ ಪರಿಣಾಮ ದೇಶೀಯ ಮಾರುಕಟ್ಟೆಯಲ್ಲೂ ಚಿನ್ನದ ದರಗಳು ಇಳಿಕೆಯ ಹಾದಿ ಹಿಡಿದಿವೆ. ಬುಧವಾರ (ಜೂನ್ 24, 2026) ದೇಶದ ಪ್ರಮುಖ ಜ್ಯುವೆಲ್ಲರಿ ಬ್ರ್ಯಾಂಡ್‌ಗಳು ಮಂಗಳವಾರಕ್ಕೆ ಹೋಲಿಸಿದರೆ ಚಿನ್ನದ (Gold Price) ದರವನ್ನು ಗಣನೀಯವಾಗಿ ಕಡಿತಗೊಳಿಸಿವೆ. ಒಂದು ಪ್ರಮುಖ ಬ್ರ್ಯಾಂಡ್ ಮಾತ್ರ ತನ್ನ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ತಟಸ್ಥವಾಗಿರಿಸಿದ್ದರೆ, ಉಳಿದ ಬಹುತೇಕ ದೊಡ್ಡ ಒಡವೆ ಮಳಿಗೆಗಳಲ್ಲಿ ಬಂಗಾರದ ಬೆಲೆ ಗ್ರಾಹಕರಿಗೆ ನಿರಾಳ ತಂದಿದೆ. ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಾದ…

Read More