NEET UG: ಮರುಪರೀಕ್ಷೆಗೆ ಶುಲ್ಕ ಕಟ್ಟಬೇಕಾ? ವಿದ್ಯಾರ್ಥಿಗಳ ಗೊಂದಲಕ್ಕೆ ಇಲ್ಲಿದೆ ಉತ್ತರ
ನವದೆಹಲಿ: ನೀಟ್ (NEET UG) ಪರೀಕ್ಷೆ ರದ್ದತಿಯಿಂದ ಗೊಂದಲಕ್ಕೊಳಗಾಗಿರುವ ಲಕ್ಷಾಂತರ ವೈದ್ಯಕೀಯ ಆಕಾಂಕ್ಷಿಗಳಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮಹತ್ವದ ಸ್ಪಷ್ಟನೆಗಳನ್ನು ನೀಡಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ಹಿನ್ನೆಲೆಯಲ್ಲಿ ಮೇ 3ರಂದು ನಡೆದಿದ್ದ ಪರೀಕ್ಷೆಯನ್ನು ಅಧಿಕೃತವಾಗಿ ರದ್ದುಗೊಳಿಸಲಾಗಿದ್ದು, ಮರು ಪರೀಕ್ಷೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗಿದ್ದ ಹಣಕಾಸು ಮತ್ತು ಪ್ರಕ್ರಿಯೆಯ ಕುರಿತಾದ ಅನುಮಾನಗಳನ್ನು ಎನ್‌ಟಿಎ ಬಗೆಹರಿಸಿದೆ. ರಾಜಸ್ಥಾನದ ವಿಶೇಷ ಕಾರ್ಯಾಚರಣೆ ತಂಡದ ತನಿಖೆಯಲ್ಲಿ ಸುಮಾರು 120 ಪ್ರಶ್ನೆಗಳು ಮೊದಲೇ ಸೋರಿಕೆಯಾಗಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಇಡೀ…
