Veg Fish Fry: ವೆಜ್‌ ಫಿಶ್‌ ಫ್ರೈ ಮಾಡೋದು ಹೇಗೆ ಗೊತ್ತಾ? ಇಲ್ಲಿದೆ ರೆಸಿಪಿ

Veg Fish Fry recipe must try

ಫಿಶ್‌ ಫ್ರೈ ಅನೇಕರ ಮನೆಯಲ್ಲಿ ಮಾಡುತ್ತಾರೆ, ಆದರೆ ನಾನ್‌ವೆಜ್‌ ಸೇವನೆ ಮಾಡದೇ ಇರುವವರು ಈ ಫಿಶ್‌ ಫ್ರೈ ರುಚಿಯನ್ನ ಸವಿಯಬೇಕು ಅಂದ್ರೆ ಏನಪ್ಪಾ ಮಾಡೋದು ಅಂತನಾ? ಅದಕ್ಕೆ ಇಲ್ಲೊಂದು ಸೂಪರ್‌ ಪರಿಹಾರ ಇದೆ. ಹೌದು, ನೀವು ವೆಜ್‌ ಫಿಶ್‌ ಫ್ರೈ (Veg Fish Fry) ಮಾಡಿ ಸವಿಯಬಹುದು. ಅದರ ರೆಸಿಪಿ ಇಲ್ಲಿದೆ.

ವೆಜ್ ಫಿಶ್ ಫ್ರೈ ಮಾಡಲು ಬೇಕಾಗುವ ಪದಾರ್ಥಗಳು

2 ಕಪ್ ಬೇಯಿಸಿದ ಸೋಯಾ ಚಂಕ್ಸ್

2 ಬಾಳೆಹಣ್ಣುಗಳು

1/2 ಬೇಯಿಸಿದ ಆಲೂಗಡ್ಡೆ

2 ಹಸಿ ಮೆಣಸಿನಕಾಯಿಗಳು

1 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್

1 ಕೊತ್ತಂಬರಿ ಪುಡಿ

1 ಚಮಚ ಗರಂ ಮಸಾಲ

1/2 ಟೀಸ್ಪೂನ್ ಅರಿಶಿನ ಪುಡಿ

1/2 ಟೀಸ್ಪೂನ್ ಜೀರಿಗೆ ಪುಡಿ

1 ಟೀಸ್ಪೂನ್ ಕರಿಮೆಣಸಿನ ಪುಡಿ

ಉಪ್ಪು ರುಚಿಗೆ ತಕ್ಕಷ್ಟು

3 ಚಮಚ ನಿಂಬೆ ರಸ

         4 ಚಮಚ ಎಣ್ಣೆ

1 ½ ಕಪ್ ರವೆ

2 ಕಪ್ ಅಕ್ಕಿ ಹಿಟ್ಟು

1 ಚಮಚ ಮೆಣಸಿನ ಪುಡಿ

ವೆಜ್ ಫಿಶ್ ಫ್ರೈ ಮಾಡುವ ಸುಲಭ ವಿಧಾನ ಹೀಗಿದೆ

ಮೊದಲು ಒಂದು ಮಿಕ್ಸಿ ಜಾರಿಗೆ ಬೇಯಿಸಿದ ಸೋಯಾ ಚಂಕ್ಸ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಹಸಿರು ಮೆಣಸಿನಕಾಯಿಗಳನ್ನು ಹಾಕಿಕೊಳ್ಳಿ, ನಂತರ ಈ ಎಲ್ಲಾ ಪದಾರ್ಥಗಳು ಪುಡಿಪುಡಿಯಾಗುವವರೆಗೆ ಮತ್ತು ಎಲ್ಲಾ ಪದಾರ್ಥಗಳು ಮಿಶ್ರಣವಾಗುವವರೆಗೆ ರುಬ್ಬಿಕೊಳ್ಳಿ. ಅದನ್ನು ಒಂದು ತಟ್ಟೆಯಲ್ಲಿ  ಅದನ್ನ ತೆಗೆದು ಇಡಿ.

ಈಗ  ಬಾಳೆಹಣ್ಣು ಮತ್ತು ಬೇಯಿಸಿದ ಆಲೂಗಡ್ಡೆಯನ್ನು ತೆಗೆದುಕೊಂಡು ಸೋಯಾ ಚಂಕ್ಸ್ ಮಿಶ್ರಣದ ಜೊತೆ ಹಾಕಿ ಚೆನ್ನಾಗಿ ಕಲಸಿ. ಅದಕ್ಕೆ ಎಲ್ಲಾ ಮಸಾಲೆಗಳನ್ನ ಸಹ ಹಾಕಿ ಮಿಶ್ರಣ ಮಾಡಬೇಕು. ಇದಕ್ಕೆ ಕೊತ್ತಂಬರಿ ಪುಡಿ, ಗರಂ ಮಸಾಲ, ಅರಿಶಿನ ಪುಡಿ, ಜೀರಿಗೆ ಪುಡಿ, ಕರಿಮೆಣಸಿನ ಪುಡಿ ಮತ್ತು ಉಪ್ಪು. ಎಲ್ಲವೂ ಚೆನ್ನಾಗಿ ಮಿಶ್ರಣ ಆಗಬೇಕು ಹಾಗಾಗಿ ಒಮ್ಮೆ ರುಚಿ ನೋಡಿ, ಅಗತ್ಯ ಇದ್ದರೆ ಮಸಾಲೆಗಳನ್ನ ಸೇರಿಸಿ ಕಲಸಿ.

Veg Fish Fry recipe must try

ಈಗ ಈ ಮಿಶ್ರಣವನ್ನ ತೆಗೆದುಕೊಂಡು ಮೀನಿನ ಆಕಾರದಲ್ಲಿ ಮಾಡಿ. ಮಧ್ಯ ಒಂದು ರಂಧ್ರ ಮಾಡಿ. ಇದೇ ರೀತಿ ಎಲ್ಲಾ ಮಿಶ್ರಣವನ್ನ ಮೀನಿನ ಆಕಾರದಲ್ಲಿ ಮಾಡಿ. ಈಗ ಇನ್ನೊಂದು ತಟ್ಟೆಯಲ್ಲಿ ರವೆ, ಅಕ್ಕಿ ಹಿಟ್ಟು, ಮೆಣಸಿನ ಪುಡಿ ಮತ್ತು ಉಪ್ಪು ತೆಗೆದುಕೊಳ್ಳಿ. ಈಗ ಮೀನಿನ ಆಕಾರದ ಕಟ್ಲೆಟ್ ತೆಗೆದುಕೊಂಡು ಅದರ ಮೇಲೆ ಸ್ವಲ್ಪ ಎಣ್ಣೆ ಸವರಿ. ರವೆ ಮಿಶ್ರಣದ ಮೇಲೆ ಹಾಕಿ ಲೇಪನ ಮಾಡಿ.

ಇದರ ನಂತರ, ಒಂದು ಪ್ಯಾನ್ ತೆಗೆದುಕೊಂಡು ಅದರಲ್ಲಿ ಎಣ್ಣೆ ಸುರಿಯಿರಿ. ಅದು ಬಿಸಿಯಾದ ನಂತರ, ನಿಧಾನವಾಗಿ ಆ ಮೀನಿನ ಆಕಾರದ ಕಟ್ಲೇಟ್‌ ಅನ್ನು ಅದರ ಮೇಲೆ ಹಾಕಿ. ಕನಿಷ್ಠ ಒಂದು ನಿಮಿಷ ಕಟ್ಲೆಟ್ ಅನ್ನು ಮುಟ್ಟಬೇಡಿ, ಒಂದು ನಿಮಿಷದ ನಂತರ, ಕಟ್ಲೆಟ್ ಅನ್ನು ಎರಡೂ ಬದಿಗಳನ್ನ ಸಮವಾಗಿ ಬೇಯಿಸಿದರೆ ವೆಜ್‌ ಫಿಶ್‌ ಫ್ರೈ ಸವಿಯಲು ಸಿದ್ದ.

ಇದನ್ನೂ ಓದಿ: ಸೂಪರ್‌ ಟೇಸ್ಟಿ ಸ್ನ್ಯಾಕ್ಸ್‌ ಬೇಕಾ? ಚೂರ್ಮಾ ಪಾಕೆಟ್ಸ್‌ ಟ್ರೈ ಮಾಡಿ

Leave a Reply

Your email address will not be published. Required fields are marked *