ಮನೆ ಎಲ್ಲರಿಗೂ ಬಹಳ ಮುಖ್ಯ. ಸ್ವಂತ ಮನೆ ಇರಲಿ ಅಥವಾ ಬಾಡಿಗೆ ಮನೆ ಇರಲಿ ವಾಸ್ತು ಪಾಲನೆ ಮಾಡುವುದು ಇನ್ನೂ ಪ್ರಮುಖ ಅನಿಸಿಕೊಳ್ಳುತ್ತದೆ. ಅದರಲ್ಲೂ ನೀವು ಸ್ವಂತ ಮನೆ ನಿರ್ಮಾಣ ಮಾಡುತ್ತಿದ್ದರೆ ಮನೆ ಕಟ್ಟುವಾಗ ತಪ್ಪದೇ ಪಾಲಿಸಬೇಕಾದ ಕೆಲ ವಾಸ್ತು (Vastu Tips) ನಿಯಮಗಳಿದೆ. ಆ ವಾಸ್ತು ನಿಯಮಗಳೇನು ಎಂಬುದು ಇಲ್ಲಿದೆ.
ಈ ವಾಸ್ತು ನಿಯಮ (Vastu Tips) ತಪ್ಪದೇ ಪಾಲಿಸಿ
ಮುಖ್ಯ ದ್ವಾರ ಒಂದು ಮಾತ್ರ ಇರಲಿ: ವಾಸ್ತು ನಿಯಮದ ಪ್ರಕಾರ ಮನೆಗೆ ಮುಖ್ಯ ಬಾಗಿಲು ಒಂದು ಮಾತ್ರ ಇರಬೇಕು. ಯಾವುದೇ ಕಾರಣಕ್ಕೂ ಮೂರು ಬಾಗಿಲುಗಳು ಇರಬಾರದು. ಈ ಬಾಗಿಲು ಉತ್ತರ ಮತ್ತು ಪೂರ್ವ ದಿಕ್ಕುಗಳಲ್ಲಿ ಇದ್ದರೆ ಬಹಳ ಉತ್ತಮ ಎನ್ನಲಾಗುತ್ತದೆ. ಆದರೆ ಯಾವುದೇ ಕಾರಣಕ್ಕೂ ದಕ್ಷಿಣ ದಿಕ್ಕಿನಲ್ಲಿ ಬಾಗಿಲು ಇರಬಾರದು.
ಈ ದಿಕ್ಕಿನಲ್ಲಿ ದೇವರ ಮನೆ ಇರಲಿ: ಇನ್ನು ವಾಸ್ತು ನಿಯಮದ ಪ್ರಕಾರ, ಈಶಾನ್ಯ ದಿಕ್ಕನ್ನ ಗುರುವಿನ ಸ್ಥಾನ ಎನ್ನಲಾಗುತ್ತದೆ. ಹಾಗಾಗಿ ಈ ದಿಕ್ಕಿನಲ್ಲಿ ದೇವರ ಮನೆ ಕಟ್ಟಬೇಕು ಹಾಗೂ ದೇವರ ಫೋಟೋ ಅಥವಾ ಮೂರ್ತಿಯನ್ನ ಪೂರ್ವ ದಿಕ್ಕಿಗೆ ಮಾಡಿ ಇಡಬೇಕು.
ಇನ್ನು ಮನೆಯ ಉತ್ತರ ದಿಕ್ಕಿನಲ್ಲಿ ಮನಿಪ್ಲ್ಯಾಂಟ್ ಗಿಡವನ್ನ ತಪ್ಪದೇ ಇಡಬೇಕು. ಇದರಿಂದ ನಿಮಗೆ ಅನೇಕ ಅದ್ಭುತ ಲಾಭಗಳು ಸಿಗುತ್ತದೆ, ಅಲ್ಲದೇ, ಮನೆಯಲ್ಲಿನ ನಕಾರಾತ್ಮಕ ಶಕ್ತಿ ಸಹ ಹೋಗುತ್ತದೆ ಎನ್ನುವ ನಂಬಿಕೆ ಇದೆ.

ಅಡುಗೆ ಮನೆ ಈ ದಿಕ್ಕಿನಲ್ಲಿರಲಿ: ಇನ್ನು ವಾಸ್ತು ಪ್ರಕಾರ, ನಿಮ್ಮ ಅಡುಗೆ ಮನೆ ನೈಋತ್ಯ ದಿಕ್ಕಿನಲ್ಲಿ ಇರಬೇಕು. ಇದರಿಂದ ಯಾವುದೇ ಆರೋಗ್ಯ ಸಮಸ್ಯೆಗಳು ಸಹ ಕಾಡುವುದಿಲ್ಲ. ಅಡುಗೆಮನೆಯ ಗೋಡೆಗಳಲ್ಲಿ ಕೆಂಪು, ಕಿತ್ತಳೆ ಮತ್ತು ಗುಲಾಬಿ ಬಣ್ಣ ಹಚ್ಚಬೇಕು.
ಇನ್ನು ಮನೆ ಯಾವಾಗಲೂ ಸ್ವಚ್ಛವಾಗಿ ಇರಬೇಕು. ಇದರಿಂದ ಮನೆಯಲ್ಲಿ ಆರ್ಥಿಕ ಸಮಸ್ಯೆಗಳು ಬರುವುದಿಲ್ಲ. ಲಕ್ಷ್ಮಿ ದೇವಿಗೆ ಸ್ವಚ್ಛತೆ ಎಂದರೆ ಬಹಳ ಇಷ್ಟ. ಹಾಗಾಗಿ ನೀವು ಮುಖ್ಯವಾಗಿ ಮನೆಯ ಮುಖ್ಯದ್ವಾರವನ್ನ ಸ್ವಚ್ಛವಾಗಿ ಇಡಿ.
