Elon Musk: ವಾಟ್ಸಾಪ್ ನಂಬಲು ಅರ್ಹವಲ್ಲ ಎಂದ ಎಲಾನ್ ಮಸ್ಕ್
ನವದೆಹಲಿ: ಖಾಸಗಿ ಸಂದೇಶಗಳ ರಕ್ಷಣೆ ವಿಚಾರದಲ್ಲಿ ವಾಟ್ಸಾಪ್ ತನ್ನ ಬಳಕೆದಾರರಿಗೆ ತಪ್ಪು ಮಾಹಿತಿ ನೀಡುತ್ತಿದೆ ಎಂಬ ಆರೋಪದ ಮೇಲೆ ಮೆಟಾ ಕಂಪನಿಯು ಅಮೆರಿಕದಲ್ಲಿ ಕಾನೂನು ಸಂಘರ್ಷ ಎದುರಿಸುತ್ತಿದೆ. ಈ ವಿವಾದ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿದ್ದು, ಎಕ್ಸ್ ಮಾಲೀಕ ಎಲಾನ್ ಮಸ್ಕ್ (Elon Musk) ಅವರು ವಾಟ್ಸಾಪ್ ಅನ್ನು ನಂಬಬೇಡಿ ಎಂದು ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ. ವಾಟ್ಸಾಪ್ ಸುರಕ್ಷಿತವಲ್ಲ ಎಂದು ಹೇಳಿರುವ ಮಸ್ಕ್, ಸುರಕ್ಷಿತ ಕರೆಗಳಿಗಾಗಿ ತಮ್ಮದೇ ಆದ ‘ಎಕ್ಸ್’ ವೇದಿಕೆಯನ್ನು ಬಳಸುವಂತೆ…
