Kerala: ಕೇರಳದ ನಾರಿಮಣಿಯರಿಗೆ ಸಿಹಿ ಸುದ್ದಿ: ಜೂನ್ 15 ರಿಂದ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ
ತಿರುವನಂತಪುರಂ: ದಕ್ಷಿಣ ಭಾರತದ ಇತರ ರಾಜ್ಯಗಳಾದ ಕರ್ನಾಟಕ ಹಾಗೂ ತೆಲಂಗಾಣದ ಮಾದರಿಯಲ್ಲೇ ಈಗ ಕೇರಳದಲ್ಲೂ (Kerala) ಮಹಿಳೆಯರಿಗೆ ಸಾರಿಗೆ ಬಸ್‌ಗಳಲ್ಲಿ ‘ಉಚಿತ ಪ್ರಯಾಣ’ ಭಾಗ್ಯ ಲಭಿಸಿದೆ. ಯುಡಿಎಫ್ (UDF) ನೇತೃತ್ವದ ಸರ್ಕಾರವು ತನ್ನ ಪ್ರಮುಖ ಚುನಾವಣಾ ಗ್ಯಾರಂಟಿಯನ್ನು ಈಡೇರಿಸಿದ್ದು, ಜೂನ್ 15 ರಿಂದ ಅನ್ವಯವಾಗುವಂತೆ ರಾಜ್ಯದ ಮಹಿಳೆಯರಿಗೆ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಆರ್ಡಿನರಿ ಬಸ್‌ಗಳಲ್ಲಿ ಉಚಿತ ಸೌಲಭ್ಯ ನೀಡುವುದಾಗಿ ಮುಖ್ಯಮಂತ್ರಿ ವಿ.ಡಿ. ಸತೀಶನ್ ಘೋಷಿಸಿದ್ದಾರೆ. 800 ಕೋಟಿ ಆರ್ಥಿಕ ಹೊರೆ ಈ ಮಹತ್ವಾಕಾಂಕ್ಷಿ…
