Rain Update: ವೀಕೆಂಡ್‌ನಿಂದ ರಾಜ್ಯಾದ್ಯಂತ ಮಳೆರಾಯ ಮಂಕು: ಜುಲೈ 11ರಿಂದ ಒಣಹವೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ!
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಭಾಗವನ್ನು ಬೆಚ್ಚಿಬೀಳಿಸಿದ್ದ ಭಾರಿ ಮಳೆಗೆ ಸದ್ಯದಲ್ಲೇ (Rain Update) ಬಿಡುವು ಸಿಗುವ ಸಾಧ್ಯತೆ ಇದೆ. ರಾಜ್ಯಾದ್ಯಂತ ಮುಂದುವರಿದಿರುವ ವರುಣನ ಆರ್ಭಟ ಇನ್ನು ಕೇವಲ ಎರಡು ದಿನಗಳು ಮಾತ್ರ ಇರಲಿದ್ದು, ಆ ಬಳಿಕ ಮಳೆಯ ತೀವ್ರತೆ ತಗ್ಗಲಿದೆ ಎಂದು ಹವಾಮಾನ ಇಲಾಖೆಯ ವಿಜ್ಞಾನಿ ಡಾ. ಲತಾ ಮುನ್ಸೂಚನೆ ನೀಡಿದ್ದಾರೆ. ಏಳು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್: ಮುಂದಿನ 24 ಗಂಟೆಗಳ ಅವಧಿಯಲ್ಲಿ ಕರಾವಳಿ ಮತ್ತು ಮಲೆನಾಡು ಪ್ರಾಂತ್ಯದ ಒಟ್ಟು…
