Dharmendra Pradhan: 80 ಕೋಟಿ ಜನರಿಗೆ ಅಗತ್ಯ ವೃತ್ತಿಪರ ತರಬೇತಿ: ಧರ್ಮೇಂದ್ರ ಪ್ರಧಾನ್
ನವದೆಹಲಿ: ಶಿಕ್ಷಣ ವಲಯದಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯನ್ನು ಸಕ್ರಿಯವಾಗಿ ಬಲಪಡಿಸಲು ಸರ್ಕಾರ ಸಕಲ ಕ್ರಮ ಕೈಗೊಂಡಿದೆ ಎಂದು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಹೇಳಿದ್ದಾರೆ. ದೇಶದಲ್ಲಿ ಅದ್ಭುತ ಪ್ರತಿಭೆಗಳಿವೆ ದೆಹಲಿಯಲ್ಲಿ ಎರಡು ದಿನಗಳ ಭಾರತ್ ಬೋಧನ್ ಎಐ ಸಮಾವೇಶ ಉದ್ದೇಶಿಸಿ ಅವರು, ಎಐ ವಲಯದಲ್ಲಿ ರಾಷ್ಟ್ರ ಸಶಕ್ತ ಮತ್ತು ಸಮೃದ್ಧ ಪ್ರತಿಭೆಗಳನ್ನು ಹೊಂದಿದೆ ಎಂದರು. ಮೂರನೇ ತರಗತಿಯಿಂದ ಸ್ನಾತಕೋತ್ತರ ಸಂಶೋಧನೆ ಹಂತದವರೆಗೆ ಎಐ ಅನ್ನು ನಾವೀನ್ಯತೆಯ ಮಾದರಿ ಹಾಗೂ ಸಂಪರ್ಕ ಕಾರ್ಯತಂತ್ರವಾಗಿ ಅಳವಡಿಸಲಾಗುವುದು. ಅಲ್ಲದೇ, …
