TOP NEWS
Madikeri Crackdown Vehicle Seized with 60 Bags of Ration Rice Meant for Black Market

Ration Rice: ಮಡಿಕೇರಿಯಲ್ಲಿ ಪಡಿತರ ಅಕ್ಕಿ ಕಾಳಸಂತೆ ಶಂಕೆ: 60ಕ್ಕೂ ಹೆಚ್ಚು ಮೂಟೆ ಜಪ್ತಿ, ಸಾಗಾಟ ತಡೆದ ಸಾರ್ವಜನಿಕರು!

ಮಡಿಕೇರಿ: ಬಡಜನರಿಗೆ ವಿತರಿಸಬೇಕಿದ್ದ ಸರ್ಕಾರದ ಪಡಿತರ ಅಕ್ಕಿಯನ್ನು (Ration Rice) ಅಕ್ರಮವಾಗಿ ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರಾಟ ಮಾಡಲು ಸಾಗಿಸಲಾಗುತ್ತಿತ್ತೇ ಎಂಬ ಬಲವಾದ ಅನುಮಾನ ಇದೀಗ ಮಡಿಕೇರಿಯಲ್ಲಿ ವ್ಯಕ್ತವಾಗಿದೆ. ನಗರದ ಸಂಪಿಗೆಕಟ್ಟೆ ಸಮೀಪ ಅನುಮಾನಾಸ್ಪದ ರೀತಿಯಲ್ಲಿ ಚಲಿಸುತ್ತಿದ್ದ ವಾಹನವೊಂದನ್ನು ಕೊಡಗು ಅಭಿವೃದ್ಧಿ ಸಮಿತಿಯ ಸದಸ್ಯರು ತಡೆದು ತಪಾಸಣೆ ನಡೆಸಿದಾಗ ಬೃಹತ್ ಪ್ರಮಾಣದ ಅಕ್ಕಿ ಚೀಲಗಳು ಪತ್ತೆಯಾಗಿವೆ. 60ಕ್ಕೂ ಹೆಚ್ಚು ಮೂಟೆ ಅಕ್ಕಿ ವಶ ಸಮಿತಿಯ ಸದಸ್ಯರು ವಾಹನವನ್ನು ತಪಾಸಣೆ ನಡೆಸಿದ ಸಂದರ್ಭದಲ್ಲಿ ತಲಾ 25 ಕೆಜಿ ತೂಕದ 60ಕ್ಕೂ…

Read More
Deadlock Over Indira Kit Government to Pause Free Ration Kit Scheme After 8 Months of Delay

Indira Kit: ಆರಂಭಕ್ಕೂ ಮುನ್ನವೇ ‘ಇಂದಿರಾ ಕಿಟ್’ ಯೋಜನೆಗೆ ಗ್ರಹಣ: ಟೆಂಡರ್ ಲಾಬಿ, ಕೋರ್ಟ್ ಭೀತಿಯಿಂದ ಬಡವರ ನಿರೀಕ್ಷೆ ಹುಸಿ!

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ ಅಕ್ಕಿಯ ಬದಲಾಗಿ ಬಡವರಿಗೆ ವಿತರಿಸಲು ರಾಜ್ಯ ಸರ್ಕಾರ ರೂಪಿಸಿದ್ದ ಮಹತ್ವಾಕಾಂಕ್ಷೆಯ ‘ಇಂದಿರಾ ಕಿಟ್’ (Indira Kit) ಯೋಜನೆ ಶುರುವಾಗುವ ಮುನ್ನವೇ ಮೂಲೆಗುಂಪಾಗುವ ಲಕ್ಷಣಗಳು ಗೋಚರಿಸುತ್ತಿವೆ. ಆಡಳಿತಾತ್ಮಕ ಹಾಗೂ ಕಾನೂನು ತೊಡಕುಗಳಿಂದಾಗಿ ಈ ಯೋಜನೆಯನ್ನು ಸಂಪೂರ್ಣವಾಗಿ ಕೈಬಿಡುವ ಚಿಂತನೆಯಲ್ಲಿ ಸರ್ಕಾರ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಏನಿದು ಇಂದಿರಾ ಕಿಟ್ ಯೋಜನೆ? ರಾಜ್ಯದ ಲಕ್ಷಾಂತರ ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿದಾರರಿಗೆ ಪೌಷ್ಟಿಕ ಆಹಾರ ಒದಗಿಸುವ ದೃಷ್ಟಿಯಿಂದ ಈ ಯೋಜನೆ ರೂಪಿಸಲಾಗಿತ್ತು….

Read More
Annabhagya scheme update kh muniyappa on BPL cards

KH Muniyappa: ಅನ್ನಭಾಗ್ಯಕ್ಕೂ ಗ್ಯಾರಂಟಿ ಕತ್ತರಿ?; 14 ಲಕ್ಷ ನಕಲಿ ಬಿಪಿಎಲ್ ಕಾರ್ಡ್ ರದ್ದತಿಗೆ ಮುನಿಯಪ್ಪ ಮಾಸ್ಟರ್ ಪ್ಲಾನ್

ಬೆಂಗಳೂರು: ರಾಜ್ಯ ಸರ್ಕಾರದ ಅತ್ಯಂತ ಜನಪ್ರಿಯ ಯೋಜನೆಗಳಾದ ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿಯ ನಿಯಮಗಳನ್ನು ಕಠಿಣಗೊಳಿಸಿದ ಬೆನ್ನಲ್ಲೇ, ಈಗ ಉಚಿತ ಅಕ್ಕಿ ನೀಡುವ ‘ಅನ್ನಭಾಗ್ಯ’ ಯೋಜನೆಗೂ ಫಲಾನುಭವಿಗಳ ಸಂಖ್ಯೆ ಕಡಿತಗೊಳ್ಳುವ ಭೀತಿ ಎದುರಾಗಿದೆ. ಈ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ (KH Muniyappa) ಅವರು ಇಲಾಖೆಯಲ್ಲಿ ಶೀಘ್ರದಲ್ಲೇ ಜಾರಿಗೆ ಬರಲಿರುವ ಭಾರಿ ಬದಲಾವಣೆಗಳ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಉಚಿತ ರೇಷನ್ ಸೌಲಭ್ಯವು ಕೇವಲ ನೈಜ…

Read More