Annabhagya Scheme: ಮೇ ತಿಂಗಳಲ್ಲಿ ‘ಅನ್ನಭಾಗ್ಯ’ ಗ್ಯಾರಂಟಿಗೆ ಬ್ರೇಕ್: ಪಡಿತರ ಕೇಂದ್ರಗಳಲ್ಲಿ ರಾಜ್ಯದ ಪಾಲಿನ ಅಕ್ಕಿ ವಿತರಣೆ ಸ್ಥಗಿತ
ಬೆಂಗಳೂರು: ರಾಜ್ಯ ಸರ್ಕಾರದ ಅತ್ಯಂತ ಪ್ರಮುಖ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಅನ್ನಭಾಗ್ಯ’ (Annabhagya Scheme) ಯೋಜನೆಗೆ ಮೇ ತಿಂಗಳಿನಲ್ಲಿ ದಿಢೀರ್ ಹಿನ್ನಡೆಯಾಗಿದೆ. ಈ ತಿಂಗಳು ಅರ್ಹ ಫಲಾನುಭವಿಗಳಿಗೆ ಸಿಗಬೇಕಾಗಿದ್ದ ರಾಜ್ಯ ಸರ್ಕಾರದ ಪಾಲಿನ ಉಚಿತ ಹೆಚ್ಚುವರಿ ಅಕ್ಕಿ ವಿತರಣೆಯಾಗಿಲ್ಲ ಎಂಬ ಮಾಹಿತಿ ಬೆಳಕಿಗೆ ಬಂದಿದ್ದು, ಇದು ರಾಜ್ಯದ ಲಕ್ಷಾಂತರ ಬಡ ಪಡಿತರ ಚೀಟಿದಾರರಿಗೆ ಭಾರಿ ನಿರಾಶೆ ಮೂಡಿಸಿದೆ. ಪ್ರಸ್ತುತ ರಾಜ್ಯದ ನ್ಯಾಯಬೆಲೆ ಅಂಗಡಿಗಳಲ್ಲಿ ಕೇವಲ ಕೇಂದ್ರ ಸರ್ಕಾರದ ಕೋಟಾದ ಧಾನ್ಯವನ್ನು ಮಾತ್ರ ಸಾರ್ವಜನಿಕರಿಗೆ ನೀಡಲಾಗುತ್ತಿದೆ. ಕೇಂದ್ರದ…
