T20 World Cup: ಯೂ ಟರ್ನ್‌ ಹೊಡೆಯುತ್ತಾ ಪಾಕ್‌? ಐಸಿಸಿ ಮುಂದೆ ಪಿಸಿಬಿ ಇಟ್ಟ ಬೇಡಿಕೆಗಳೇನು?

T20 World Cup Pakistan likely to take U turn

ಲಾಹೋರ್‌: ಭಾರತದ ವಿರುದ್ಧದ ಟಿ20 ವಿಶ್ವಕಪ್ (T20 World Cup) ಪಂದ್ಯವನ್ನು ಬಹಿಷ್ಕರಿಸುವ ತನ್ನ ನಿಲುವಿನಿಂದ ಪಾಕಿಸ್ತಾನ ಯೂಟರ್ನ್ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಬಿಕ್ಕಟ್ಟು ನಿವಾರಣೆ?

ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷರು ಭಾನುವಾರ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಉಪಾಧ್ಯಕ್ಷ ಇಮ್ರಾನ್ ಖವಾಜಾ ಅವರನ್ನು ಭೇಟಿಯಾಗಿ ಜಾಗತಿಕ ಸಂಸ್ಥೆಯೊಂದಿಗಿನ ಬಿಕ್ಕಟ್ಟಿನ ಬಗ್ಗೆ ಬಿಕ್ಕಟ್ಟನ್ನು ನಿವಾರಣೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಫೆಬ್ರವರಿ 15 ರಂದು ಕೊಲಂಬೊದಲ್ಲಿ ನಡೆಯಲಿರುವ ಭಾರತದ ವಿರುದ್ಧದ ಪಂದ್ಯವನ್ನು ಆಡಲು ಕೆಲವು ಪಿಸಿಬಿ ಅಧಿಕಾರಿಗಳು ಮುಕ್ತರಾಗಿದ್ದರೂ, ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ ಈ ವಿಷಯದಲ್ಲಿ ಸಹಕರಿಸುತ್ತಿಲ್ಲ ಎಂದೂ ಸಹ ಹೇಳಲಾಗುತ್ತಿದೆ. ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು ನಖ್ವಿ ಸೋಮವಾರ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಮತ್ತೊಮ್ಮೆ ಭೇಟಿ ಮಾಡಿ ಸಮಾಲೋಚಿಸಲಿದ್ದಾರೆ ಎನ್ನಲಾಗಿದೆ.

3 ಬೇಡಿಕೆ ಇಟ್ಟಿತ್ತಾ ಪಾಕ್‌ ಕ್ರಿಕೆಟ್‌ ಮಂಡಳಿ?

ಈ ನಡುವೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್  ಅಧ್ಯಕ್ಷ ಮೊಹ್ಸಿನ್ ನಖ್ವಿ  ನೇತೃತ್ವದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ಗೆ ಮೂರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ ಎನ್ನುವ ಮಾಹಿತಿ ಸಹ ತಿಳಿದುಬಂದಿದೆ. ಫೆಬ್ರವರಿ 8ರಂದು ಲಾಹೋರ್‌ನ ಗಡ್ಡಾಫಿ ಸ್ಟೇಡಿಯಂನಲ್ಲಿ ನಡೆದ ಸಭೆಯಲ್ಲಿ ಐಸಿಸಿ ಉಪಾಧ್ಯಕ್ಷ ಇಮ್ರಾನ್ ಖ್ವಾಜಾ ಮತ್ತು ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ ಅಧ್ಯಕ್ಷ ಅಮಿನುಲ್ ಇಸ್ಲಾಂ ಭಾಗವಹಿಸಿದ್ದರು, ಈ ಸಭೆಯಲ್ಲಿ ಐಸಿಸಿ ಮುಂದೆ ಬೇಡಿಕೆ ಇಡಲಾಗಿದೆ ಎನ್ನಲಾಗುತ್ತಿದೆ.

ಇನ್ನು ಐಸಿಸಿ ಮುಂದೆ ಪಾಕಿಸ್ತಾನವು ಬಾಂಗ್ಲಾ ಪರವಾಗಿ 3 ಬೇಡಿಕೆಗಳನ್ನ ಇಟ್ಟಿದೆ. ಮೊದಲನೆಯದು ವಿಶ್ವಕಪ್​ನಿಂದ ಹೊರಗೆ ಬಿದ್ದ ಬಾಂಗ್ಲಾದೇಶಕ್ಕೆ ಹೆಚ್ಚಿನ ಆರ್ಥಿಕ ಪರಿಹಾರ, ಎರಡನೇಯದು ಟಿ20 ವಿಶ್ವಕಪ್‌ನಲ್ಲಿ ಆರಂಭಿಕ ಹಂತದಲ್ಲೇ ಹೊರಬಿದ್ದರೂ ಭಾಗವಹಿಸುವ ಶುಲ್ಕ ಹಾಗೂ ಐಸಿಸಿ ಈವೆಂಟ್ ಆಯೋಜನೆ ಹಕ್ಕು ಕೊಡುವಂತೆ ಮನವಿ ಮಾಡಿದೆ.

ಇನ್ನು ತನ್ನ ಪರವಾಗಿ ಸಹ ಪಾಕ್‌ ಬೇಡಿಕೆಗಳನ್ನ ಇಟ್ಟಿದ್ದು, ಐಸಿಸಿ ರೆವೆನ್ಯೂನಲ್ಲಿ ಹೆಚ್ಚಿನ ಪಾಲು ಕೇಳಿದೆ ಎನ್ನಲಾಗಿದೆ. ಅದರ ಜೊತೆಗೆ ಭಾರತದೊಂದಿಗೆ ದ್ವಿಪಕ್ಷೀಯ ಸರಣಿಗಳ ಪುನರಾರಂಭ ಹಾಗೂ  ಆಟಗಾರರ ನಡುವೆ ಹ್ಯಾಂಡ್‌ಶೇಕ್ ನಿಯಮಗಳನ್ನು ಕಡ್ಡಾಯಗೊಳಿಸಬೇಕು ಎಂದು ಬೇಡಿಕೆ ಇಟ್ಟಿದೆ. ಈ ವಿಚಾರವಾಗಿ ಐಸಿಸಿ ಪ್ರತಿನಿಧಿಗಳು ಇದನ್ನ ಐಸಿಸಿ ಬೋರ್ಡ್‌ಗೆ ಮಂಡಿಸುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಮೊದಲ ಪಂದ್ಯದಲ್ಲಿ ಮೋಸ ಮಾಡ್ತಾ ಪಾಕ್‌, ಐಸಿಸಿ ನಿಯಮ ಉಲ್ಲಂಘನೆ

Leave a Reply

Your email address will not be published. Required fields are marked *