Smriti Mandhana: ಪಲಾಶ್‌ ಮುಚ್ಚಲ್‌ ಜೊತೆ ಮದುವೆ ಮುರಿದ ಸ್ಮೃತಿ, ಗೌಪ್ಯತೆ ಕಾಪಾಡಲು ಮನವಿ

Smriti Mandhana called of wedding with palash

ನವದೆಹಲಿ: ಭಾರತೀಯ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ (Smriti Mandhana) ಅವರು ಸಂಗೀತ ಸಂಯೋಜಕ ಮತ್ತು ಗಾಯಕ ಪಲಾಶ್ ಮುಚ್ಚಲ್ ಅವರ ಜೊತೆಗಿನ ಮದುವೆಯನ್ನ ರದ್ದು ಮಾಡಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ ಆಟಗಾರ್ತಿ

ಈ ವಿಚಾರವಾಗಿ ಸೋಷಿಯಲ್‌ ಮೀಡಿಯಾದಲ್ಲಿ ಅವರು ಅಧಿಕೃತವಾಗಿ ಅವರು ಮಾಹಿತಿ ನೀಡಿದ್ದಾರೆ. ಅಲ್ಲದೇ, ತಮ್‌ ಪ್ರೈವಸಿ ಕಾಪಾಡುವಂತೆ ಸಹ ಮನವಿ ಮಾಡಿಕೊಂಡಿದ್ದಾರೆ.

ಪೋಸ್ಟ್‌ನಲ್ಲಿ ಏನಿದೆ?

“ಕಳೆದ ಕೆಲವು ವಾರಗಳಿಂದ ನನ್ನ ಜೀವನದ ಸುತ್ತ ಸಾಕಷ್ಟು ಊಹಾಪೋಹಗಳು ಹಬ್ಬಿವೆ ಮತ್ತು ಈ ಸಮಯದಲ್ಲಿ ನಾನು ಮಾತನಾಡುವುದು ಮುಖ್ಯ. ನಾನು ತುಂಬಾ ಖಾಸಗಿ ವ್ಯಕ್ತಿ ಮತ್ತು ನಾನು ಅದನ್ನು ಹಾಗೆಯೇ ಇಡಲು ಬಯಸುತ್ತೇನೆ ಆದರೆ ಮದುವೆಯನ್ನು ರದ್ದು ಮಾಡಲಾಗಿದೆ ಎಂದು ನಾನು ಸ್ಪಷ್ಟಪಡಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ನಾನು ಈ ವಿಷಯವನ್ನು ಇಲ್ಲಿಗೆ ಮುಗಿಸಲು ಬಯಸುತ್ತೇನೆ ಮತ್ತು ನೀವೆಲ್ಲರೂ ಅದೇ ರೀತಿ ಮಾಡಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ.  ಈ ಸಮಯದಲ್ಲಿ ದಯವಿಟ್ಟು ಎರಡೂ ಕುಟುಂಬಗಳ ಗೌಪ್ಯತೆಯನ್ನು ಗೌರವಿಸಿ ಮತ್ತು ನಮಗೆ ಸ್ವಲ್ಪ ಸಮಯವನ್ನ ಕೊಟ್ಟು ಮುಂದುವರೆಯಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ, ಭಾರತಕ್ಕಾಗಿ ಆಟವಾಡುವುದು ಮತ್ತು ಟ್ರೋಫಿಗಳನ್ನು ಗೆಲ್ಲುವುದರ ಕಡೆ ತನ್ನ ಶಾಶ್ವತ ಗಮನ ಇರುತ್ತದೆ ಎಂದು ಮಂಧಾನ (Smriti) ಹೇಳಿದ್ದಾರೆ.

ಹಿಂದಿನ ತಿಂಗಳು ಪಲಾಶ್‌ ಹಾಗೂ ಸ್ಮೃತಿ ಅವರ ಮದುವೆ ನಿಶ್ಚಯವಾಗಿತ್ತು. ಆದರೆ ಮದುವೆ ದಿನ ಬೆಳಗ್ಗೆ ಸ್ಮೃತಿ ಅವರ ತಂದೆಗೆ ಹೃದಯಾಘಾತವಾದ ಹಿನ್ನೆಲೆಯಲ್ಲಿ ಮದುವೆಯನ್ನ ಮುಂದಕ್ಕೆ ಹಾಕಲಾಗಿದೆ ಎಂದು ತಿಳಿಸಲಾಗಿತ್ತು. ಆದರೆ ಅದರ ನಂತರ ಪಲಾಶ್‌ ಅವರು ನೃತ್ಯ ಸಣಯೋಜಕಿಯ ಜೊತೆ ಚೀಟಿಂಗ್‌ ಮಾಡಿದ್ದು, ಆ ವಿಚಾರ ತಿಳಿದು ಮದುವೆಯನ್ನ ನಿಲ್ಲಿಸಲಾಗಿದೆ ಎಂದು ಸುದ್ದಿಗಳು ಹರಿದಾಡಿದ್ದವು, ಆದರೆ ಈ ವಿಚಾರವಾಗಿ ಎರಡೂ ಕುಟುಂಬದವರು ಯಾವುದೇ ಅಧಿಕೃತ ಮಾಹಿತಿಯನ್ನ ನೀಡಿರಲಿಲ್ಲ. ಆದರೆ ಇದೀಗ ಮದುವೆ ರದ್ದಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಗೌತಮ್‌  ಗಂಭೀರ್  ನಿರ್ಧಾರಗಳಿಂದ ಟೀಂ ಇಂಡಿಯಾಗೆ ಸೋಲಾಗುತ್ತಿದೆಯಾ? ಆರ್‌ ಅಶ್ವಿನ್‌ ಹೇಳಿದ್ದೇನು?

Leave a Reply

Your email address will not be published. Required fields are marked *