Neha Kakkar: ಬ್ರೇಕ್‌ ಘೋಷಣೆ ಮಾಡಿದ ಗಾಯಕಿ ನೇಹಾ ಕಕ್ಕರ್

singer Neha Kakkar post about taking break

ಮುಂಬೈ: ಬಾಲಿವುಡ್ ಗಾಯಕಿ ನೇಹಾ ಕಕ್ಕರ್ (Neha Kakkar) ಇತ್ತೀಚೆಗೆ ಎಲ್ಲದರಿಂದ ವಿರಾಮ ತೆಗೆದುಕೊಳ್ಳುವುದಾಗಿ ಘೋಷಣೆ ಮಾಡಿದ್ದು, ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

ವದಂತಿಗಳಿಗೆ ಕಾರಣವಾದ ನೇಹಾ ಪೋಸ್ಟ್‌

ಗಾಯಕಿ ನೇಹಾ ನಿನ್ನೆ ಸೋಷಿಯಲ್‌ ಪೋಸ್ಟ್‌ ಮಾಡುವ ಮೂಲಕ ಕೆಲ ದಿನಗಳ ಕಾಲ ನಾನು ಸಂಬಂಧ, ಗಾಯನ ಹಾಗೂ ಎಲ್ಲದರಿಂದ ಬ್ರೇಕ್‌ ತೆಗೆದುಕೊಳ್ಳುತ್ತಿರುವುದಾಗಿ ಹೇಳಿದ್ದರು. ಅವರ ಈ ಹೇಳಿಕೆಯ ಕಾರಣದಿಂದ ಸೋಷಿಯಲ್‌ ಮೀಡಿಯಾದಲ್ಲಿ ಅನೇಕ ಸುದ್ದಿಗಳು ಹರಿದಾಡಿದ್ದವು. ಅವರು ತಮ್ಮ ಪತಿ ರೋಹನ್‌ಪ್ರೀತ್ ಸಿಂಗ್ ಅವರಿಂದ ವಿಚ್ಛೇದನ ಪಡೆಯುವ ಸಾಧ್ಯತೆ ಇದೆ ಎಂಬೆಲ್ಲಾ ಸುದ್ದಿಗಳು ಹರಿದಾಡಿದ್ದವು. ಇದಕ್ಕೆಲ್ಲಾ ಅವರು ಈಗ ಉತ್ತರ ನೀಡಿದ್ದಾರೆ.

ನನ್ನ ಗಂಡನನ್ನ ಎಳೆಯಬೇಡಿ ಎಂದ ಗಾಯಕಿ

ಯಾವಾಗ ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಇಲ್ಲ-ಸಲ್ಲದ ಸುದ್ದಿಗಳು ಹರಿದಾಡಲು ಆರಂಭವಾದ ನಂತರ ಈ ವಿಚಾರವಾಗಿ ನೇಹಾ ಪ್ರತಿಕ್ರಿಯೆ ನೀಡಿದ್ದು, ಈ ವಿಷಯದಲ್ಲಿ ತನ್ನ ಪತಿ ಅಥವಾ ಕುಟುಂಬವನ್ನು ಎಳೆದು ತರಬೇಡಿ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಏನಿದೆ ನೇಹಾ ಪೋಸ್ಟ್‌ನಲ್ಲಿ?

ದಯವಿಟ್ಟು ನನ್ನ ಮುಗ್ಧ ಗಂಡನನ್ನಾಗಲಿ ಅಥವಾ ನನ್ನ ಅತ್ಯಂತ ಪ್ರೀತಿಯ ಕುಟುಂಬವನ್ನಾಗಲಿ ಇಷ್ಟೆಲ್ಲಾ ವಿಷಯಕ್ಕೆ ಎಳೆದು ತರಬೇಡಿ. ಅವರು ನನಗೆ ತಿಳಿದಿರುವ ಅತ್ಯಂತ ಪರಿಶುದ್ಧ ಜನರು ಮತ್ತು ನಾನು ಇಂದು ಏನೇ ಆಗಿದ್ದರೂ, ಅದು ಅವರ ಬೆಂಬಲದಿಂದಲೇ ಎಂದು ನೇಹಾ ತಮ್ಮ ಇನ್‌ಸ್ಟಾ ಸ್ಟೋರೀಸ್‌ನಲ್ಲಿ ಬರೆದಿದ್ದಾರೆ.

“ಇತರ ಕೆಲವು ಜನರು ಮತ್ತು ವ್ಯವಸ್ಥೆಯ ಬಗ್ಗೆ ನನಗೆ ಅಸಮಾಧಾನವಿದೆ. ನೀವು ಅದನ್ನು ಅರ್ಥಮಾಡಿಕೊಳ್ಳುತ್ತೀರಿ ಮತ್ತು ನನ್ನ ಪತಿ ಮತ್ತು ನನ್ನ ಕುಟುಂಬವು ಇದೆಲ್ಲದರಿಂದ ದೂರವಿರಲಿ ಎಂದು ನಾನು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಪವನ್‌ ಕಲ್ಯಾಣ್‌, ಟಾಲಿವುಡ್‌ನಲ್ಲಿಯೇ ಯಾರೂ ಮಾಡಿಲ್ಲ ಈ ದಾಖಲೆ

Leave a Reply

Your email address will not be published. Required fields are marked *