ಆರೋಗ್ಯಕರ ಹಾಗೂ ರುಚಿಕರವಾಗಿ ಏನಾದರು ತಿನ್ನಬೇಕು ಎಂದು ಮನಸು ಆಗ್ತಿದ್ಯಾ, ಹಾಗಾದ್ರೆ ಸುಲಭವಾಗಿ ಈ ರಾಗಿ ಸೂಪ್ ಟ್ರೈ ಮಾಡಬಹುದು. ರಾಗಿಯಲ್ಲಿ ಕ್ಯಾಲ್ಸಿಯಂ, ಕಬ್ಬಿಣಾಂಶ ಮತ್ತು ನಾರಿನಂಶ ಸಮೃದ್ಧವಾಗಿ ಇರುತ್ತದೆ. ಅದರ ಜೊತೆಗೆ ತೂಕ ಇಳಿಕೆಗೆ ಸಹಾಯ ಮಾಡುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಹಾಗಾದ್ರೆ ಬಹಳ ಸುಲಭವಾಗಿ ಮನೆಯಲ್ಲಿ ರಾಗಿ ಸೂಪ್ (Ragi Soup) ಮಾಡೋದು ಹೇಗೆ? ಇಲ್ಲಿದೆ ರೆಸಿಪಿ.
ರಾಗಿ ಸೂಪ್ ಮಾಡಲು ಬೇಕಾಗುವ ಪದಾರ್ಥಗಳು..
ಎಣ್ಣೆ: 1 ಚಮಚ
ಈರುಳ್ಳಿ: ಅರ್ಧ
ಶುಂಠಿ ಬೆಳ್ಳುಳ್ಳಿ ಪೇಸ್ಟ್: ½ ಚಮಚ
ಮಿಕ್ಸ್ ತರಕಾರಿ:, ಸ್ವಲ್ಪ
ರಾಗಿ ಹಿಟ್ಟು: 2-3 ಚಮಚ
ಕಾರ್ನ್ ಫ್ಲೋರ್: 2-3 ಚಮಚ
ಮೊಟ್ಟೆ: 1
ಕಾಳು ಮೆಣಸಿನ ಪುಡಿ: 1 ಚಮಚ
ಉಪ್ಪಿನ ಪುಡಿ: ರುಚಿಗೆ ತಕಷ್ಟು
ಕೊತ್ತಂಬರಿ ಸೊಪ್ಪು
ನಿಂಬೆ ಹಣ್ಣಿನ ರಸ
ರಾಗಿ ಸೂಪ್ ಮಾಡುವ ವಿಧಾನ..
ಒಂದು ಪ್ಯಾನ್ ಗೆ ಸ್ವಲ್ಪ ಎಣ್ಣೆ ಹಾಕಿ ಈರುಳ್ಳಿ ಹಾಕಿ ಹುರಿದುಕೊಳ್ಳಿ, ನಂತರ ಮಿಕ್ಸ್ ತರಕಾರಿಯನ್ನು ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಿ. ಕಾರ್ನ್ ಫ್ಲೋರ್ ಹಾಗೂ ರಾಗಿ ಹಿಟ್ಟನ್ನ ಒಂದು ಬೌಲ್ ಗೆ ಹಾಕಿಕೊಂಡು ಸ್ವಲ್ಪ ನೀರು ಹಾಕಿ ಗಂಟಿಲ್ಲದ ಹಾಗೆ ಮಿಕ್ಸ್ ಮಾಡಿಕೊಂಡು ಪ್ಯಾನ್ ಗೆ ಹಾಕಿಕೊಳ್ಳಿ, ನಂತರ ಎರಡು ಲೋಟ ನೀರು ಬೆರೆಸಿ ರುಚಿಗೆ ತಕ್ಕಷ್ಟು ಉಪ್ಪು, ಕಾಳು ಮೆಣಸಿನ ಪುಡಿ ಹಾಕಿ ಮೊಟ್ಟೆ ಸೇರಿಸಿಕೊಳ್ಳಿ. ಕೊನೆಗೆ ಕೊತ್ತಂಬರಿ ಸೊಪ್ಪು ಹಾಗೂ ನಿಂಬೆರಸ ಸೇರಿಸಿಕೊಂಡರೆ ರುಚಿಯಾದ ಆರೋಗ್ಯಕರ ರಾಗಿ ಸೂಪ್ ಸವಿಯಾಲು ಸಿದ್ದ.
ಇದನ್ನೂ ಓದಿ: 10 ನಿಮಿಷದಲ್ಲಿ ಮಾಡಿ ಪನೀರ್ ಪಾಪಡ್ ಕಬಾಬ್, ಇಲ್ಲಿದೆ ರೆಸಿಪಿ
