ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ನಾಲ್ಕನೇ ಟಿ20ಐ ಪಂದ್ಯದಿಂದ ಭಾರತ ಟಿ20 ತಂಡದ ಉಪನಾಯಕ ಶುಭ್ಮನ್ ಗಿಲ್ (Shubman Gill) ಅವರನ್ನು ಹೊರಗೆ ಇಟ್ಟಿರುವುದು ಅವರ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದ್ದು, ಅನೇಕ ಅನುಮಾನಗಳನ್ನ ಸೃಷ್ಟಿ ಮಾಡಿದೆ.
ಗಿಲ್ಗೆ ಕಾಲ್ಬೆರಳಿನ ಗಾಯ
ಮಾಹಿತಿಗಳ ಪ್ರಕಾರ, ಗಿಲ್ ಅವರಿಗೆ ಕಾಲ್ಬೆರಳಿನ ಗಾಯದಿಂದಾಗಿ ಗಿಲ್ ಅವರನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಎರಡು ಪಂದ್ಯಗಳಿಂದ ಹೊರಕ್ಕೆ ಇಡಲಾಗಿದೆ ಎನ್ನಲಾಗುತ್ತಿದೆ. ಈ ಪಂದ್ಯಗಳಿಗೆ ತರಬೇತಿ ಪಡೆಯುತ್ತಿರುವಾಗ ಅವರಿಗೆ ಗಾಯವಾಗಿದೆ ಎನ್ನಲಾಗುತ್ತಿದೆ. ಆದರೆ ಈ ವಿಚಾರವಾಗಿ ಅವರ ಅಭಿಮಾನಿಗಳಲ್ಲಿ ಅನೇಕ ಅನುಮಾನ ಮೂಡಿದ್ದು, ಅವರನ್ನ ಈ ಪಂದ್ಯಗಳಿಂದ ದೂರ ಇಡಲು ಕಾರಣ ಅವರ ಫಾರ್ಮ್ ಎನ್ನಲಾಗುತ್ತಿದೆ.
ಸಾಮಾಜಿಕ ಮಾಧ್ಯಮದಲ್ಲಿ ಹುಟ್ಟಿಕೊಂಡ ಚರ್ಚೆ
ಈ ವಿಚಾರವಾಗಿ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಕೊಂಡಿದ್ದು, ಅವರ ಅಭಿಮಾನಿಗಳು ನಿಜಕ್ಕೂ ಗಿಲ್ ಅವರಿಗೆ ಗಾಯವಾಗಿದೆಯಾ ಅಥವಾ ಅವರನ್ನ ಪಂದ್ಯಗಳಿಂದ ಹೊರಗೆ ಇಡಲಾಗಿದೆಯಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಶುಭ್ಮನ್ ಗಿಲ್ ಕಳಪೆ ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಕಾರಣದಿಂದ ಅವರನ್ನ ಎರಡು ಪಂದ್ಯಗಳಿಂದ ಹೊರಗೆ ಇಡಲಾಗುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಈಗಾಗಲೇ ನಡೆದ ಮೂರು ಪಂದ್ಯಗಳಲ್ಲಿ ಅವರು ಆಡಿದ್ದಾರೆ. ಆದರೆ ಯಾವುದೇ ರೀತಿಯ ಉತ್ತಮ ಪ್ರದರ್ಶನ ತೋರಿಸಿಲ್ಲ. ಅಲ್ಲದೇ, ಈ ಮೂರು ಪಂದ್ಯಗಳಲ್ಲಿ ಅವರು ಕೇವಲ 32 ರನ್ ಗಳಿಸಿದ್ದಾರೆ. ಹಾಗಾಗಿ ಈ ಸರಣಿಯಲ್ಲಿ ಅವರ ಸರಾಸರಿ 10.66 ಆಗಿದ್ದರೆ, ಸ್ಟ್ರೈಕ್ ರೇಟ್ 103.22 ಇದೆ. ಈ ಕಾರಣದಿಂದಲೇ ಅವರನ್ನ ಹೊರಗೆ ಇಡಲಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಇದನ್ನೂ ಓದಿ: ಬ್ಯಾಟರ್ ಯಶಸ್ವಿ ಜೈಸ್ವಾಲ್ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು
