T20 World Cup: ಇದೇ ಕಾರಣಕ್ಕೆ ಭಾರತ ಜೊತೆಗೆ ಆಡಲ್ವಂತೆ ಪಾಕ್‌, ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದೇನು?

Shehbaz Sharif Reveals Reason Behind T20 World Cup Boycott

ನವದೆಹಲಿ: ಭಾರತದ ವಿರುದ್ಧದ ಟಿ20 ವಿಶ್ವಕಪ್ (T20 World Cup) 2026 ಪಂದ್ಯವನ್ನು ಬಹಿಷ್ಕರಿಸುವ ನಿರ್ಧಾರದ ಹಿಂದಿನ ಕಾರಣವನ್ನು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದಾರೆ.

ಬಾಂಗ್ಲಾಗೆ ಬೆಂಬಲ ನೀಡಲು ನಿರ್ಧಾರ

ಫೆಬ್ರವರಿ 15 ರಂದು ಭಾರತ ವಿರುದ್ಧ ನಡೆಯುವ ಪಂದ್ಯವನ್ನು ಪಾಕಿಸ್ತಾನ ತಂಡ ಆಡುವುದಿಲ್ಲ ಎಂದು ಪಾಕಿಸ್ತಾನ ಸರ್ಕಾರ ಘೋಷಿಸಿದೆ. ಅಲ್ಲದೇ, ಕ್ರೀಡೆಯಲ್ಲಿ ಯಾವುದೇ ರಾಜಕೀಯ ಇರಬಾರದು ಎಂದು ಷರೀಫ್ ಹೇಳಿದ್ದು, ಬಾಂಗ್ಲಾದೇಶವನ್ನು ಬೆಂಬಲಿಸುವ ನಿರ್ಧಾರವನ್ನು ಪಾಕಿಸ್ತಾನ ತೆಗೆದುಕೊಂಡಿದೆ ಎಂದು ತಿಳಿಸಿದ್ದಾರೆ.

ಷರೀಫ್ ಹೇಳಿದ್ದೇನು?

ಕ್ರೀಡೆಯಲ್ಲಿ ಯಾವುದೇ ರಾಜಕೀಯ ಇರಬಾರದು. ಇದು ನಮ್ಮ ಸ್ಪಷ್ಟ ನಿಲುವು. ಎಚ್ಚರಿಕೆಯಿಂದ ಚರ್ಚಿಸಿದ ನಂತರ ನಾವು ಈ ನಿಲುವನ್ನು ತೆಗೆದುಕೊಂಡಿದ್ದೇವೆ. ನಾವು ಬಾಂಗ್ಲಾದೇಶದೊಂದಿಗೆ ಇದ್ದೇವೆ ಮತ್ತು ಇದು ಸರಿಯಾದ ನಿರ್ಧಾರ ಎಂದು ನಾನು ಭಾವಿಸುತ್ತೇನೆ ಎಂದು ಷರೀಫ್‌ ಅವರು ಹೇಳಿದ್ದಾರೆ.

Shehbaz Sharif Reveals Reason Behind T20 World Cup Boycott

ಪಾಕಿಸ್ತಾನ ಸರ್ಕಾರದ ನಿರ್ಧಾರದ ನಂತರ, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಪಾಕಿಸ್ತಾನದ ಈ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಇದು ನ್ಯಾಯಯುತವಲ್ಲ ಎಂದು ಹೇಳಿದೆ. ಅಲ್ಲದೇ, ಪಾಕಿಸ್ತಾನ ತನ್ನ ನಿರ್ಧಾರದ ವಿಚಾರವಾಗಿ ಐಸಿಸಿಗೆ ಯಾವುದೇ ಅಧಿಕೃತ ಮಾಹಿತಿಯನ್ನ ನೀಡಿಲ್ಲ. ಇದು ಐಸಿಸಿ ಕೋಪಕ್ಕೆ ಸಹ ಕಾರಣವಾಗಿದೆ.

ICC T20 ವಿಶ್ವಕಪ್ 2026 ಗಾಗಿ ಪಾಕಿಸ್ತಾನ ತಂಡ: ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್ , ಬಾಬರ್ ಅಜಮ್ , ಫಹೀಮ್ ಅಶ್ರಫ್ , ಫಖರ್ ಜಮಾನ್ , ಖ್ವಾಜಾ ಮೊಹಮ್ಮದ್ ನಫಯ್ (ವಿಕೆಟ್ ಕೀಪರ್ ), ಮೊಹಮ್ಮದ್ ನವಾಜ್, ಮೊಹಮ್ಮದ್ ಸಲ್ಮಾನ್ ಮಿರ್ಜಾ , ನಸೀಮ್ ಶಾಹವ್ಕೇಟ್ , ನಸೀಮ್ ಶಾಹವ್ಕೇಟ್ ಅಯೂಬ್ , ಶಾಹೀನ್ ಶಾ ಆಫ್ರಿದಿ, ಶಾದಾಬ್ ಖಾನ್ , ಉಸ್ಮಾನ್ ಖಾನ್, ಉಸ್ಮಾನ್ ತಾರಿಕ್ .

ಇದನ್ನೂ ಓದಿ: ಪಾಕಿಸ್ತಾನಕ್ಕೆ ಕಾನೂನು ಸಂಕಷ್ಟ, ಖಡಕ್‌ ಎಚ್ಚರಿಕೆ ಕೊಟ್ಟ ಐಸಿಸಿ

Leave a Reply

Your email address will not be published. Required fields are marked *