Raj B Shetty: ಸಾಲು ಸಾಲು ಸಿನಿಮಾಗಳಲ್ಲಿ ಶೆಟ್ರು ಬ್ಯುಸಿ, ರಾಜ್‌ ಫಿಲ್ಮ್‌ಗಳ ಲಿಸ್ಟ್‌ ಇಲ್ಲಿದೆ

sandalwood Raj B Shetty next films details

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಬಹಳ ಬೇಡಿಕೆ ಇರುವ ನಟ ಎಂದರೆ ಅದು ರಾಜ್‌ ಬಿ ಶೆಟ್ಟಿ (Raj B Shetty). ಕರ್ನಾಟಕ ಜನರ ಮನಗೆದ್ದ ಸು ಫ್ರಮ್ ಸೋ ಸಿನಿಮಾದ ನಂತರ ಅವರ ಬೇಡಿಕೆ ಇನ್ನೂ ಜಾಸ್ತಿ ಆಗಿದೆ ಎನ್ನಬಹುದು. ಇದೀಗ ಅವರ ಸಾಲು ಸಾಲು ಸಿನಿಮಾಗಳು ರಿಲೀಸ್‌ ಆಗುತ್ತಿದ್ದು, ಅವುಗಳ ಬಗ್ಗೆ ಮಾಹಿತಿ ಇಲ್ಲಿದೆ.

ಯಾವೆಲ್ಲಾ ಸಿನಿಮಾಗಳು ರಿಲೀಸ್‌ ಆಗುತ್ತಿದೆ?

ಸದ್ಯದ ಮಾಹಿತಿಗಳ ಪ್ರಕಾರ ರಾಜ್‌ ಬಿ ಶೆಟ್ಟಿ ಅವರ ಮೂರು ಸಿನಿಮಾಗಳು ಬ್ಯಾಕ್‌ ಟು ಬ್ಯಾಕ್‌ ರಿಲೀಸ್‌ ಆಗಲು ಸಜ್ಜಾಗಿವೆ. ಕೆಲ ದಿನಗಳ ಹಿಂದೆ ರಾಜ್‌ ಅಭಿನಯದ 45 ಸಿನಿಮಾ ರಿಲೀಸ್‌ ಆಗಿದೆ. ಅದರ ನಂತರ ಅವರ ಮುಂದಿನ ಸಿನಿಮಾಗಳ ಬಗ್ಗೆ ಕುತೂಹಲ ಹೆಚ್ಚಾಗಿತ್ತು. ಆದರೆ ಅದಕ್ಕೆಲ್ಲಾ ಈಗ ಉತ್ತರ ಸಿಕ್ಕಿದ್ದು, ಅವರು ಲ್ಯಾಂಡ್‌ಲಾರ್ಡ್‌ ಎನ್ನುವ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ದುನಿಯಾ ವಿಜಯ್‌ ಅವರು ನಟಿಸುತ್ತಿದ್ದು, ಅವರಿಗೆ ಜೋಡಿಯಾಗಿ ರಚಿತಾ ರಾಮ್‌ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಈ ಸಿನಿಮಾದ ವಿಲನ್‌ ಆಗಿ ರಾಜ್‌ ನಟಿಸಿದ್ದಾರೆ. ಮಾಹಿತಿಗಳ ಪ್ರಕಾರ ಈ ಸಿನಿಮಾದಲ್ಲಿ ಅವರು ಖಡಕ್‌ ವಿಲನ್‌ ಪಾತ್ರದಲ್ಲಿ ಮಿಂಚಲಿದ್ದಾರೆ ಎನ್ನಲಾಗುತ್ತಿದೆ.

ರಕ್ಕಸಪುರದೋಳ್ ಸಿನಿಮಾ

ಲ್ಯಾಂಡ್‌ಲಾರ್ಡ್‌ ಮಾತ್ರವಲ್ಲದೇ ರಕ್ಕಸಪುರದೋಳ್ ಎನ್ನುವ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಕೂಡ ಪ್ರಮುಖ ರೋಲ್ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅವರು ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  ಒಂದು ರೀತಿಯ ರಾಜ್‌ ಅವರ ಹೊಸ ಲುಕ್‌ ಇದರಲ್ಲಿ ನೋಡಬಹುದು.

ಕರಾವಳಿ

ಈ ಕರಾವಳಿ ಸಿನಿಮಾದಲ್ಲಿ ಕೂಡ ರಾಜ್‌ ಅವರು ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾದಲ್ಲಿ ಅವರು ಮಾವೀರ್‌ ಎನ್ನುವ ಪಾತ್ರವನ್ನ ಮಾಡುತ್ತಿದ್ದು, ಈ ಸಿನಿಮಾ ಪೋಸ್ಟರ್‌ ಸಖತ್‌ ವೈರಲ್‌ ಆಗಿತ್ತು.

ಇದನ್ನೂ ಓದಿ: ಬಿಗ್‌ ಮನೆಯಿಂದ ರಾಶಿಕಾ ಔಟ್?‌ ಕುತೂಹಲ ಮೂಡಿಸಿದ ಕೊನೆಯ ವಾರ

Leave a Reply

Your email address will not be published. Required fields are marked *