ಹೈದರಾಬಾದ್: ದಕ್ಷಿಣ ಭಾರತದ ಪ್ರಸಿದ್ದ ನಟಿ (Actress) ಸಮಂತಾ ರುತ್ ಪ್ರಭು, ಯಾವಾಗಲೂ ಸುದ್ದಿಯಲ್ಲಿ ಇರುತ್ತಾರೆ. ಅವರ ಸಿನಿಮಾ ಜೀವನ ಆಗಲಿ, ವೈಯಕ್ತಿಕ ಜೀವನ ಅನೇಕ ಬಾರಿ ಜನರ ಚರ್ಚೆಗೆ ಕಾರಣವಾಗಿದೆ. ಕಳೆದ ಕೆಲ ಸಮಯದಿಂದ ಮದುವೆ ಆಗುತ್ತಾರೆ ಎನ್ನುವ ಸುದ್ದಿ ಇತ್ತು. ಇದೀಗ ಅಭಿಮಾನಿಗಳಿಗೆ ಸಮಂತಾ (Samantha Ruth Prabhu) ದೊಡ್ಡ ಗುಡ್‌ನ್ಯೂಸ್ (Good News) ಕೊಟ್ಟಿದ್ದು, ರಾಜ್‌ನಿಧಿಮೋರು ಜೊತೆ ಸಡನ್ ಆಗಿ ಮದುವೆ ಆಗಿದ್ದಾರೆ
ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿದ ನಟಿ
ಹೌದು, ಡಿಸೆಂಬರ್ 1 ರಂದು ಈ ಜೋಡಿ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಮದುವೆಯ ಫೋಟೋಗಳನ್ನ ಹಂಚಿಕೊಂಡು ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರುಗಳ ಇಶಾ ಫೌಂಡೇಶನ್‌ನ ಲಿಂಗ್ ಭೈರವಿ ದೇವಸ್ಥಾನದಲ್ಲಿ ನಡೆದ ಈ ಮದುವೆಯಲ್ಲಿ ಜೋಡಿ ಉಂಗುರ ಬದಲಾಯಿಸಿಕೊಂಡಿದ್ದು, ಬಹಳ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಮಂತಾ ಸಹ ತಮ್ಮ ವಿಶೇಷ ದಿನಕ್ಕಾಗಿ ಸಮಂತಾ ಸರಳವಾದ ಆದರೆ ಸೊಗಸಾದ ಸೀರೆಯನ್ನು ಉಟ್ಟಿದ್ದರು.
ಸಮಂತಾ ರುತ್ ಪ್ರಭು ಅವರು ಅರ್ಪಿತಾ ಮೆಹ್ತಾ ಅವರು ಡಿಸೈನ್ ಮಾಡಿದ್ದ ಚಿನ್ನದ ಜರಿ ಕೆಲಸ ಹೊಂದಿರುವ ಸಾಂಪ್ರದಾಯಿಕ ಕೆಂಪು ರೇಷ್ಮೆ ಸೀರೆಯನ್ನು ಧರಿಸಿದ್ದು, ಅದಕ್ಕೆ ಧರಿಸಿದ್ದ ಆಭರಣಗಳು ಸಹ ಅವರ ಅಂದವನ್ನ ಹೆಚ್ಚು ಮಾಡಿದೆ. ರಾಜ್ ಕ್ರೀಮ್ ಬಣ್ಣದ ಕುರ್ತಾ-ಪೈಜಾಮ ಸೆಟ್ ಆಯ್ಕೆ ಮಾಡಿಕೊಂಡಿದ್ದು, ಬೀಜ್ ಬಣ್ಣದ ನೆಹರೂ ಜಾಕೆಟ್ ಅವರ ಲುಕ್ ಅನ್ನು ಇನ್ನಷ್ಟು ಹೆಚ್ಚಿಸಿತ್ತು ಎನ್ನಬಹುದು.
ಕೆಲ ಸಮಯದಿಂದ ಡೇಟಿಂಗ್ ಮಾಡುತ್ತಿದ್ದ ಜೋಡಿ
ಈ ವರ್ಷದ ಆರಂಭದಲ್ಲಿ ಸಮಂತಾ ರುತ್ ಪ್ರಭು ಮತ್ತು ರಾಜ್ ನಿಧಿಮೋರು ಡೇಟಿಂಗ್ ಮಾಡುತ್ತಿರುವ ಬಗ್ಗೆ ವದಂತಿಗಳನ್ನು ಹುಟ್ಟುಕೊಂಡಿದ್ದವು. ಇಬ್ಬರು ಅನೇಕ ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಬಹಳಷ್ಟು ಕಾರ್ಯಕ್ರಮದಲ್ಲಿ ಕೈ ಕೈ ಹಿಡಿದು ಈ ಜೋಡಿ ಓಡಾಡಿತ್ತು. ಅಲ್ಲದೇ, ಪಾಪರಾಜಿಗಳ ಕಟ್ಟಿಣ್ಣಿಗೆ ಅನೇಕ ಬಾರಿ ಸಿಕ್ಕಿಬಿದ್ದದ್ದರು. ಆದರೆ ಈ ವಿಚಾರವಾಗಿ ಇಬ್ಬರೂ ಅಧಿಕೃತವಾಗಿ ಎಲ್ಲಿಯೂ ಹೇಳಿರಲಿಲ್ಲ ಆದರೆ ಕೆಲ ತಿಂಗಳ ಹಿಂದಿನಿಂದ ಇಬ್ಬರು ಶೀಘ್ರದಲ್ಲಿ ಮದುವೆ ಆಗುತ್ತಾರೆ ಎನ್ನುವ ಮಾತು ಸಹ ಕೇಳಿ ಬಂತಿತ್ತು. ಅಭಿಮಾನಿಗಳು ನಟಿಯ ಮದುವೆ ವಿಚಾರವಾಗಿ ಕಾತುರದಿಂದ ಕಾಯುತ್ತಿದ್ದರು. ಆದರೆ ಸಮಂತಾ ಮಾತ್ರ ಸದ್ದಿಲ್ಲದೇ, ಮದುವೆಯಾಗಿದ್ದಾರೆ.
ಸಮಂತಾ ರುತ್ ಪ್ರಭು ಅವರು ರಾಜ್ ನಿಧಿಮೋರು ಅವರ ಥ್ರಿಲ್ಲರ್ ವೆಬ್ ಸರಣಿ ದಿ ಫ್ಯಾಮಿಲಿ ಮ್ಯಾನ್ ಸೀಸನ್ 2 ರಲ್ಲಿ ಕೆಲಸ ಮಾಡಿದ್ದರು. ಅದರಲ್ಲಿ ಅವರು ರಾಜಿ ಎನ್ನುವ ಪಾತ್ರವನ್ನು ನಿರ್ವಹಿಸಿದರು. ಅದರ ನಂತರ ಅವರು ಪ್ರೈಮ್ ವಿಡಿಯೋದ ಆಕ್ಷನ್-ಥ್ರಿಲ್ಲರ್ ಸರಣಿ ಸಿಟಾಡೆಲ್: ಹನಿ ಬನ್ನಿ ಸಿರೀಸ್‌ನಲ್ಲಿ ಸಹ ಕಾಣಿಸಿಕೊಂಡಿದ್ದರು, ಇದನ್ನು ಕೂಡ ರಾಜ್ ನಿಧಿಮೋರು ಮತ್ತು ಕೃಷ್ಣ ಡಿಕೆ ನಿರ್ದೇಶಿಸಿದ್ದಾರೆ.
