ನವದೆಹಲಿ: ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ ಅಂಗವಾಗಿ ದೆಹಲಿಯಲ್ಲಿ ಆಯೋಜಿಸಲಾದ ಅಂತಾರಾಷ್ಟ್ರೀಯ ಸೌರ ಒಕ್ಕೂಟ ಪೆವಿಲಿಯನ್ ಗೆ ಕೇಂದ್ರ ಹೊಸ ಹಾಗೂ ನವೀಕರಿಸಬಹುದಾದ ಇಂಧನ ಖಾತೆ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಭೇಟಿ ನೀಡಿದರು.
ಡಿಜಿಟಲ್ ಮೂಲಸೌಕರ್ಯ ಅಭಿವೃದ್ಧಿ ಆಗಬೇಕು
ಇದೇ ಸಂದರ್ಭದಲ್ಲಿ ಇಂಧನಕ್ಕಾಗಿ ಎಐ ಆಧರಿತ ಜಾಗತಿಕ ಮಿಷನ್ ಅನ್ನು ಮುನ್ನೆಡೆಸುವ, ತಂತ್ರಜ್ಞಾನ ನೇತೃತ್ವದ ನಾವೀನ್ಯತಾ ಸರಣಿಯನ್ನು ಸಚಿವರು ಪರಿಶೀಲಿಸಿದರು. ಬಳಿಕ ಪ್ರಲ್ಹಾದ್ ಜೋಶಿ, ಇಂಧನ ಪರಿವರ್ತನೆ , ಗ್ರಿಡ್ ಪರಿವರ್ತನೆಯೊಂದಿಗೆ ಹೊಂದಿಕೆಯಾಗಬೇಕು. ಅಲ್ಲದೆ, ನೈಜ ಸಮಯದಲ್ಲಿ ಗ್ರಿಡ್ ನ ಕಾರ್ಯ ಕ್ಷಮತೆಯನ್ನು ಬುದ್ಧಿಮತ್ತೆ ಮತ್ತು ದತ್ತಾಂಶದೊಂದಿಗೆ ಜೋಡಿಸುವಂತಾಗಬೇಕು. ಹೊಂದಾಣಿಕೆಯಾಗುವ ಮತ್ತು ಡಿಜಿಟಲ್ ಮೂಲಸೌಕರ್ಯಗಳನ್ನು ಅಭಿವೃದ್ಧಿಗೊಳಿಸುವ ಅಗತ್ಯವಿದೆ ಎಂದರು.
ಎಐ ತಂತ್ರಜ್ಞಾನಗಳನ್ನು ಅನಾವರಣ ಆಗಿದೆ
ಭಾರತೀಯ ಸೌರ ಒಕ್ಕೂಟ ಪೆವಿಲಿಯನ್ ನಲ್ಲಿ ಕೃತಕ ಬುದ್ಧಿಮತ್ತೆ ಆಧರಿತ ಡಿಜಿಟಲ್ ವೇದಿಕೆಗಳು ಹಾಗೂ ನವೀಕರಿಸಬಹುದಾದ ಇಂಧನ ವಲಯದ ಬಲವರ್ಧನೆಗೆ ಪೂರಕವಾಗುವ ಎಐ ತಂತ್ರಜ್ಞಾನಗಳನ್ನು ಅನಾವರಣಗೊಳಿಸಲಾಗಿದೆ. ಪಿಎಂ-ಕುಸುಮ್ ಹಾಗೂ ಪಿಎಂ-ಸೂರ್ಯಘರ್ ಯೋಜನೆಯ ಅನುಷ್ಠಾನದಲ್ಲಿ ದೇಶದ ಸಾಧನೆಯನ್ನು ಬಿಂಬಿಸುವ ಚಿಂತ್ರಣವೂ ಪೆವಿಲಿಯನ್ ನಲ್ಲಿದೆ.
ಇದನ್ನೂ ಓದಿ: ಬ್ರೆಜಿಲ್‌ನ ಆರೋಗ್ಯ ಸಚಿವರನ್ನ ಭೇಟಿ ಮಾಡಿದ ಜೆಪಿ ನಡ್ಡಾ
