ಗುಜರಾತ್: ಪ್ರಧಾನಿ ನರೇಂದ್ರ ಮೋದಿ (Narendra Modi) ನಿನ್ನೆಯಿಂದ ಗುಜರಾತ್‌ಗೆ ಮೂರು ದಿನಗಳ ಪ್ರವಾಸ ಆರಂಭಿಸಿದ್ದಾರೆ. ನಿನ್ನೆ ಸಂಜೆ ಸೋಮನಾಥ ತಲುಪಿದ ಪ್ರಧಾನಿಯವರಿಗೆ ಭವ್ಯ ಸ್ವಾಗತ ಕೋರಲಾಗಿದೆ.
ಓಂಕಾರ ಮಂತ್ರ ಪಠಣದಲ್ಲಿ ಮೋದಿ
ಸೋಮನಾಥ ದೇವಾಲಯದಲ್ಲಿ ನಡೆಯುವ ಓಂಕಾರ ಮಂತ್ರ ಪಠಣದಲ್ಲಿ ಅವರು ಭಾಗವಹಿಸಿದ್ದು, ಅಲ್ಲಿ ನಡೆಯುವ ಡ್ರೋನ್ ಪ್ರದರ್ಶನ ವೀಕ್ಷಿಸಿದ್ದಾರೆ. ಸೋಮನಾಥ ದೇವಾಲಯದ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ ಅಸಂಖ್ಯಾತ ಯೋಧರನ್ನು ಗೌರವಿಸಲು ಆಯೋಜಿಸಲಾದ ಶೌರ್ಯ ಯಾತ್ರೆಯಲ್ಲಿ ಪ್ರಧಾನಿ ಭಾನುವಾರ ಭಾಗವಹಿಸಿದ್ದಾರೆ.
ಯಾವೆಲ್ಲಾ ಕಾರ್ಯಕ್ರಮದಲ್ಲಿ ಮೋದಿ ಭಾಗಿ?
ಇದರ ಬಳಿಕ ಸೋಮನಾಥ ಸ್ವಾಭಿಮಾನ ಪರ್ವವನ್ನು ಗುರುತಿಸುವ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ನಂತರ ಪ್ರಧಾನಿ ಮೋದಿ ಅವರು, ಮಾರ್ವಾಡಿ ವಿಶ್ವವಿದ್ಯಾಲಯದಲ್ಲಿ ಕಚ್ ಮತ್ತು ಸೌರಾಷ್ಟ್ರ ಪ್ರದೇಶಕ್ಕಾಗಿ ವೈಬ್ರಂಟ್ ಗುಜರಾತ್ ಪ್ರಾದೇಶಿಕ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಬಳಿಕ, ಪ್ರಧಾನಿ ಅಹಮದಾಬಾದ್‌ಗೆ ತೆರಳಲಿದ್ದು, ಮಹಾತ್ಮ ಮಂದಿರದವರೆಗಿನ ಅಹಮದಾಬಾದ್ ಮೆಟ್ರೋನ 2ನೇ ಹಂತದ ಯೋಜನೆ ಉದ್ಘಾಟಿಸಲಿದ್ದಾರೆ.
ಇದನ್ನೂ ಓದಿ: ರಾಷ್ಟ್ರದ ಭವಿಷ್ಯ ರೂಪಿಸುವಲ್ಲಿ ಯುವಜನರ ಪಾತ್ರ ಮುಖ್ಯ: ಮನ್ಸುಖ್ ಮಾಂಡವೀಯ
