ಹೈದರಾಬಾದ್: ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಹಾಗೂ ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ (Pawan Kalyan) ತಾವು ಸೂಪರ್ ಸ್ಟಾರ್ ಎಂಬುದನ್ನ ಮತ್ತೆ ಸಾಬೀತು ಮಾಡಿದ್ದಾರೆ. ಹೌದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಅವರು ಮನ್ನಣೆ ಗಳಿಸಿದ್ದು, ಕೆಂಜುಟ್ಸು ಎನ್ನುವ ವಿಶೇಷ ಕಲೆಯ ಅಧಿಕೃತ ದೀಕ್ಷೆ ಪಡೆದಿದ್ದಾರೆ.
ಆಂಧ್ರದ ಮೊದಲ ಕೆಂಜುಟ್ಸು ಸಮುರಾಯ್
ಈ ಕೆಂಜುಟ್ಸು ಸಮುರಾಯ್ ದೀಕ್ಷೆ ಪಡೆಯುವ ಮೂಲಕ ನಟ ಪವನ್ ಕಲ್ಯಾಣ್ ಅವರು ಈ ದೀಕ್ಷೆ ಪಡೆದ ಮೊದಲ ಆಂಧ್ರಪ್ರದೇಶದ ವ್ಯಕ್ತಿ ಎನ್ನುವ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಸಿನಿಮಾ ಹಾಗೂ ರಾಜಕೀಯದಲ್ಲಿ ಬಹಳ ಬ್ಯುಸಿ ಇರುವ ಪವನ್ ಕಲ್ಯಾಣ್ ಈಗ ಮತ್ತೊಂದು ಸಾಧನೆ ಮಾಡಿದ್ದಾರೆ. ಪವನ್ ಕಲ್ಯಾಣ್ ಅವರು ಈಗ ಜಪಾನಿನ ಪ್ರಾಚೀನ ಕತ್ತಿವರಸೆ ‘ಕೆಂಜುಟ್ಸು’ ಕಲೆಯಲ್ಲಿ ಪರಿಣಿತಿ ಪಡೆದುಕೊಂಡಿದ್ದು, ಇದು ನಿಜಕ್ಕೂ ಹೆಮ್ಮೆಯ ವಿಚಾರವಾಗಿದೆ.
3 ದಶಕಗಳ ಪರಿಶ್ರಮದ ಫಲ
ನಟ ಪವನ್ ಕಲ್ಯಾಣ್ ಅವರು ಈ ಸಮರ ಕಲೆಗಳನ್ನ ಕಲಿಯಲು ಬಹಳ ವರ್ಷಗಳಿಂದಲೇ ಆರಂಭ ಮಾಡಿದ್ದರು. ಮಾಹಿತಿಗಳ ಪ್ರಕಾರ, ಅವರು ಸಿನಿಮಾ ರಂಗಕ್ಕೆ ಪ್ರವೇಶ ಮಾಡುವ ಮೊದಲೇ ಈ ಕಲೆಯನ್ನ ಕಲಿಯಲು ಆರಂಭ ಮಾಡಿದ್ದರು. ಹೌದು, ಮೊದಲು ಚೆನ್ನೈನಲ್ಲಿ ಕರಾಟೆ ಕಲಿಯಲು ಆರಂಭ ಮಾಡಿದ್ದರು. ಅದರ ನಂತರ ಸಾಲು ಸಾಲು ಅನೇಕ ಸಮರ ಕಲೆಗಳನ್ನ ಅವರು ಅಭ್ಯಾಸ ಮಾಡಿದ್ದಾರೆ. ಅವರು ಕೇವಲ ದೈಹಿಕ ಸದೃಢತೆಗಾಗಿ ಮಾತ್ರವಲ್ಲದೆ ಸಮರ ಕಲೆಗಳ ತತ್ವಶಾಸ್ತ್ರವನ್ನು ಕೂಡ ಆಳವಾಗಿ ಅಧ್ಯಯನ ಮಾಡಿದ್ದಾರೆ. ಕಳೆದ 30 ವರ್ಷಗಳಲ್ಲಿ ಈ ಕಲೆಗಳ ವಿಚಾರವಾಗಿ ಅವರ ಬದ್ಧತೆಗೆ ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಗೌರವ ಸಿಕ್ಕಿದೆ.
ಪವನ್ ಕಲ್ಯಾಣ್ ಅವರಿಗೆ ಯಾವೆಲ್ಲಾ ಪ್ರಶಸ್ತಿಗಳು ಸಿಕ್ಕಿದೆ
ಐದನೇ ಡಾನ್ ಗೌರವ: ಜಪಾನಿನ ಸಾಂಪ್ರದಾಯಿಕ ಸಮರ ಕಲೆಗಳ ಸಂಸ್ಥೆ ‘ಸೊಗೊ ಬುಡೊ ಕನ್ರಿ ಕೈ’ ಪವನ್ ಕಲ್ಯಾಣ್ ಅವರಿಗೆ ಐದನೇ ಡಾನ್ ಎನ್ನುವ ಗೌರವವನ್ನ ನೀಡಿದೆ.
ಟಕೆಡಾ ಶಿಂಗೆನ್ ಕುಲ: ಇದರ ಜೊತೆಗೆ ಪವನ್ ಕಲ್ಯಾಣ್ ಅವರಿಗೆ ಟಕೆಡಾ ಶಿಂಗೆನ್ ಕುಲ ಎನ್ನುವ ಗೌರವ ಸಹ ಲಬಿಸಿದೆ. ಟಕೆಡಾ ಶಿಂಗೆನ್ ಕುಲ ಎಂದರೆ ಈ ವಿಶೇಷ ಕಲೆಯಲ್ಲಿ ಪರಿಣಿತಿ ಪಡೆದ ಜಪಾನ್ ಹೊರಗಿನ ಮೊದಲ ವ್ಯಕ್ತಿ ಎಂದು.
ಟೈಗರ್ ಆಫ್ ಮಾರ್ಷಲ್ ಆರ್ಟ್ಸ್: ಇದರ ಜೊತೆಗೆ ಗೋಲ್ಡನ್ ಡ್ರಾಗನ್ಸ್ ಸಂಸ್ಥೆಯು ಪವನ್ ಕ್ಯಾಣ್ ಅವರಿಗೆ ಟೈಗರ್ ಆಫ್ ಮಾರ್ಷಲ್ ಎನ್ನುವ ವಿಶಿಷ್ಟ ಬಿರುದನ್ನು ನೀಡಿದೆ.
ಕೆಂಡೋ ತರಬೇತಿ: ಪವನ್ ಅವರು ‘ಕೆಂಡೋ’ದಲ್ಲಿ ಖ್ಯಾತ ಬುಡೋ ತಜ್ಞ ಹನ್ಶಿ ಪ್ರಾಧ್ಯಾಪಕ ಡಾ. ಸಿದ್ದಿಕ್ ಮಹಮುದಿ ಅವರಿಂದ ಈ ಕಲೆಯ ಸಂಪೂರ್ಣ ತರಬೇತಿಯನ್ನ ಪಡೆದುಕೊಂಡಿದ್ದಾರೆ. ಈ ಎಲ್ಲಾ ಸತತ ಪರಿಶ್ರಮದ ಫಲವಾಗಿ ಈಗ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಸಾಲು ಸಾಲು ಸಿನಿಮಾಗಳಲ್ಲಿ ಶೆಟ್ರು ಬ್ಯುಸಿ, ರಾಜ್ ಫಿಲ್ಮ್‌ಗಳ ಲಿಸ್ಟ್ ಇಲ್ಲಿದೆ
