ಶ್ರೀಲಂಕಾ: ಭಾರತ ತಂಡವು ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಅದ್ಭುತ ಆರಂಭವನ್ನು ಮಾಡಿದ್ದು, ಈ ನಡುವೆ ಪಾಕಿಸ್ತಾನ ಮತ್ತು ನೆದರ್ಲ್ಯಾಂಡ್ಸ್ ತಂಡಗಳ ನಡುವೆ ನಡೆದ ಪಂದ್ಯ ವಿವಾದಕ್ಕೆ ಕಾರಣವಾಗಿದ್ದು, ಪಾಕ್ (Pakistan) ಮೋಸ ಮಾಡಿ ಗೆದ್ದಿದೆ ಎನ್ನಲಾಗುತ್ತಿದೆ.
ಮೊದಲ ಪಂದ್ಯದಲ್ಲಿ ವಿವಾದ ಹುಟ್ಟು ಹಾಕಿದ ಪಾಕ್
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನೆದರ್ಲ್ಯಾಂಡ್ಸ್ ತಂಡ ನಿಗದಿತ 20 ಓವರ್‌ಗೆ 147 ರನ್‌ಗಳಿಗೆ ಆಲೌಟ್ ಆಗಿದೆ. ಈ ರನ್ ಬೆನ್ನಟ್ಟಿದ ಪಾಕ್ 114 ರನ್‌ಗಳಿಗೆ 7 ವಿಕೆಟ್‌ಗಳನ್ನು ಕಳೆದುಕೊಂಡು ನಂತರ 19ನೇ ಓವರ್ 5 ಎಸೆತಗಳಲ್ಲಿ 24 ರನ್ ಗಳಿಸುವ ಮೂಲಕ ಗೆದ್ದಿದೆ. ಆದರೆ ಈ ಪಂದ್ಯದಲ್ಲಿ ಪಾಕ್ ಹೊಸ ವಿವಾದವನ್ನ ಹುಟ್ಟು ಹಾಕಿದೆ.
ನಿಯಮ ಪಾಲನೆ ಮಾಡಿಲ್ವಾ ಪಾಕ್?
ಪಾಕ್ ಮೋಸ ಮಾಡಿ ಗೆದ್ದಿದೆ ಎಂದು ಹೇಳಲು ಮುಖ್ಯವಾದ ಕಾರಣ ಐಸಿಸಿಯ ನಿಯಮ ಬದಲಾವಣೆ. ಐಸಿಸಿ ಇತ್ತೀಚೆಗೆ ರಿಲೇ ಕ್ಯಾಚ್ ನಿಯಮದಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಆದರೆ ಈ ನಿಯಮದ ಉಲ್ಲಂಘನೆ ಮಾಡಲಾಗಿದೆ.

ಈ ಪಂದ್ಯದಲ್ಲಿ ಬಾಬರ್ ಬೌಂಡರಿ ಗೆರೆ ಬಳಿ ಕ್ಯಾಚ್ ಪಡೆದು ನಿಯಂತ್ರಣ ತಪ್ಪುತ್ತಿದೆ ಎಂದು ತಿಳಿದಾಗ ಅದನ್ನ ಎಸೆದು ಬೌಂಡರಿ ಗೆರೆಯೊಳಗೆ ಹೋಗಿದ್ದಾರೆ. ಬಾಬರ್ ಹಿಡಿದು ಎಸೆದ ಕ್ಯಾಚ್‌ನ್ನು ಶಾಹೀನ್ ಶಾ ಅಫ್ರಿದಿ ಪೂರ್ಣ ಮಾಡಿದ್ದಾರೆ. ಈ ಸಮಯದಲ್ಲಿ ಅಂದರೆ ಅಫ್ರಿದಿ ಕ್ಯಾಚ್ ಹಿಡಿಯುವ ವೇಳೆ ಬಾಬರ್ ಇನ್ನೂ ಬೌಂಡರಿ ಗೆರೆ ಒಳಗಿದ್ದರು. ಇದು ವಿವಾದಕ್ಕೆ ಕಾರಣವಾಗಿದೆ.
A solid relay catch!
— Star Sports (@StarSportsIndia) February 7, 2026
Babar Azam & Shaheen Afridi produce a great relay catch at the boundary!
ICC Men's #T20WorldCup | #PAKvNED | LIVE NOW 👉 https://t.co/GKcXaJHm9F pic.twitter.com/Anou9KM88n
ಐಸಿಸಿ ರಿಲೇ ಕ್ಯಾಚ್ ನಿಯಮದ ಪ್ರಕಾರ, ರಿಲೇ ಕ್ಯಾಚ್ ಹಿಡಿದಾಗ ಬೌಂಡರಿ ಲೈನ್ ದಾಟಿದ ಆಟಗಾರ ತನ್ನ ಸಹ ಆಟಗಾರ ಬಾಲ್ ಕ್ಯಾಚ್ ಹಿಡಿಯುವಷ್ಟರಲ್ಲಿ ಮೈದಾನದೊಳಗೆ ಇರಬೇಕು. ಆದರೆ ಈ ಬಾರಿ ಆ ರೀತಿ ಆಗಿಲ್ಲ. ಹಾಗಾಗಿ ವಿವಾದ ಸೃಷ್ಟಿ ಆಗಿದೆ.
ಇದನ್ನೂ ಓದಿ: U19 ಕ್ರಿಕೆಟ್ ವಿಶ್ವಕಪ್ ಗೆದ್ದ ಭಾರತ, ಶುಭಾಶಯ ತಿಳಿಸಿದ ವಿರಾಟ್, ಸಚಿನ್
