BESCOM: ಗ್ರಾಹಕರೇ ಎಚ್ಚರ: ಮುಂದಿನ 48 ಗಂಟೆ ಈ ಬೆಸ್ಕಾಂ ಆನ್‌ಲೈನ್ ಸೇವೆಗಳು ಸಿಗಲ್ಲ
ಬೆಂಗಳೂರು: ಬೆಸ್ಕಾಂ (BESCOM) ವ್ಯಾಪ್ತಿಯ ಗ್ರಾಹಕರಿಗೆ ಪ್ರಮುಖ ಸೂಚನೆಯೊಂದನ್ನು ನೀಡಲಾಗಿದ್ದು, ತಾಂತ್ರಿಕ ವ್ಯವಸ್ಥೆಯ ನವೀಕರಣ ಹಾಗೂ ಸಾಫ್ಟ್‌ವೇರ್ ಅಪ್‌ಗ್ರೇಡೇಶನ್ ಕಾರ್ಯಗಳ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ವಿವಿಧ ಆನ್‌ಲೈನ್ ಸೇವೆಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳಲಿವೆ. ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆಯ (ಐಪಿಡಿಎಸ್) ಎರಡನೇ ಹಂತದ ಭಾಗವಾಗಿ ಪ್ರಸ್ತುತ ಚಾಲ್ತಿಯಲ್ಲಿರುವ ಐಟಿ ಅಪ್ಲಿಕೇಶನ್ ಅನ್ನು ಹೊಸದಾಗಿ 20 ಪಟ್ಟಣ ಪ್ರದೇಶಗಳಿಗೆ ವಿಸ್ತರಿಸಲು ಬೆಸ್ಕಾಂ ಆಡಳಿತ ಮಂಡಳಿ ತೀರ್ಮಾನಿಸಿದೆ. ಈ ಬೃಹತ್ ತಾಂತ್ರಿಕ ಬದಲಾವಣೆಯ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 15, 2026 ರ…
