ಆರೋಗ್ಯಕರ ದೇಹವನ್ನು ಕಾಪಾಡಿಕೊಳ್ಳಲು ಮತ್ತು ಅನೇಕ ಕಾಯಿಲೆಗಳನ್ನು ತಡೆಗಟ್ಟಲು ತೂಕ ಇಳಿಸಿಕೊಳ್ಳುವುದು ಅತ್ಯಗತ್ಯವೆಂದು ಪರಿಗಣಿಸಲಾಗಿದೆ. ತೂಕ ಹೆಚ್ಚಾಗುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಅನೇಕ ಜನರು ಈ ತೂಕದ ಸಮಸ್ಯೆಯಿಂದ ಪರದಾಡುತ್ತಿದ್ದಾರೆ. ತೂಕ ಇಳಿಸಲು ಅನೇಕ ಪ್ರಯತ್ನಗಳನ್ನ ಮಾಡುತ್ತಾರೆ. ಆದರೆ ಅನೇಕ ಬಾರಿ ಗೊತ್ತಿಲ್ಲದೇ ಸೇವನೆ ಮಾಡುವ ಕೆಲವೊಂದು ಹಣ್ಣು -ತರಕಾರಿಗಳು ತೂಕ ಹೆಚ್ಚಿಸಲು (Weight Loss) ಕಾರಣವಾಗುತ್ತದೆ. ಹಾಗಾದ್ರೆ ತೂಕ ಇಳಿಸಲು ಯಾವ ಆಹಾರಗಳು ತಡೆ ಸೃಷ್ಟಿ ಮಾಡುತ್ತದೆ ಎಂಬುದು ಇಲ್ಲಿದೆ.
ಕೆಲವು ಹಣ್ಣುಗಳು ತೂಕ ಹೆಚ್ಚಾಗಲು ಕಾರಣವಾಗಬಹುದು. ಹಾಗಾಗಿ ಆ ಹಣ್ಣುಗಳನ್ನ ಯಾವುದೇ ಕಾರಣಕ್ಕೂ ಸೇವನೆ ಮಾಡಬಾರದು. ಆ ಹಣ್ಣುಗಳು ಯಾವುವು ಎಂಬುದು ಇಲ್ಲಿದೆ.
ಮಾವಿನ ಹಣ್ಣು: ಮಾವು ವಿಟಮಿನ್ ಸಿ ಮತ್ತು ಫೈಬರ್ನ ಉತ್ತಮ ಮೂಲವೆಂದು ಪರಿಗಣಿಸಲಾಗಿದೆ ಮತ್ತು ನಿಯಮಿತ ಸೇವನೆಯು ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಆದರೆ ಇದು ತೂಕ ಜಾಸ್ತಿ ಮಾಡುವ ಸಾಧ್ಯತೆ ಇರುತ್ತದೆ. ಮಾವಿನಹಣ್ಣುಗಳು ಅನೇಕ ಅಗತ್ಯ ಪೋಷಕಾಂಶಗಳನ್ನು ಹೊಂದಿದ್ದರೂ, ಅವು ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುತ್ತವೆ ಎನ್ನಲಾಗುತ್ತದೆ.
ಬಾಳೆಹಣ್ಣು: ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಜನರು ಬಾಳೆಹಣ್ಣಿನ ಸೇವನೆಯನ್ನು ಮಿತಿಗೊಳಿಸ ಬEಕು ಎನ್ನಲಾಗುತ್ತದೆ. ಈ ಹಣ್ಣಿನಿಂದ ಅನೇಕ ಪ್ರಯೋಜನಗಳು ಸಿಗುತ್ತದೆ. ಆದರೆ ಅತಿಯಾಗಿ ತಿನ್ನುವುದರಿಂದ ತೂಕ ಕೂಡ ಹೆಚ್ಚಾಗುತ್ತದೆ, ಇದು ಹೆಚ್ಚು ಕ್ಯಾಲೋರಿ ಹೊಂದಿರುವುದರಿಂದ ತೂಕ ಹೆಚ್ಚು ಮಾಡುತ್ತದೆ.
ಅವಕಾಡೋ: ಅವಕಾಡೋ ಅಥವಾ ಬೆಣ್ಣೆ ಹಣ್ಣು ಅನೇಕ ಜನರಿಗೆ ಇಷ್ಟ, ಆದರೆ ಇದು ಎಷ್ಟು ಆರೋಗ್ಯಕರವೋ ಅಷ್ಟೇ ತೂಕ ಇಳಿಸುವವರಿಗೆ ಅಪಾಯಕಾರಿ ಎನ್ನಬಹುದು. ಇದು ಅನೇಕ ಪೋಷಕಾಂಶಗಳನ್ನ ಹೊಂದಿದ್ದರೂ ಸಹ ಇದರ ಸೇವನೆಯನ್ನ ಮಿತಿಗೊಳಿಸುವುದು ತುಂಬಾ ಅಗತ್ಯ.
