Narendra Modi: ವಿಶೇಷ ವೆಬಿನಾರ್‌ನಲ್ಲಿ ಪ್ರಧಾನಿ ಮೋದಿ ಭಾಷಣ

Narendra Modi speech in webinar in march 9

ನವದೆಹಲಿ: ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಉನ್ನತ ಶಿಕ್ಷಣ ಇಲಾಖೆ ಸಹಯೋಗದಲ್ಲಿ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್ – ಜನರ ಆಕಾಂಕ್ಷೆಗಳನ್ನು ಈಡೇರಿಸುವುದು,  ಶಿಕ್ಷಣ, ಕೌಶಲ್ಯ ಮತ್ತು ವಿಶ್ವವಿದ್ಯಾಲಯಗಳು, ಪಟ್ಟಣಗಳು’  ವಿಷಯದ ಕುರಿತು ಬಜೆಟ್ ನಂತರದ ವೆಬಿನಾರ್ ಉದ್ದೇಶಿಸಿ ಇದೇ  9ರಂದು  ಪ್ರಧಾನಿ ನರೇಂದ್ರ ಮೋದಿ  (Narendra Modi) ಭಾಷಣ ಮಾಡಲಿದ್ದಾರೆ.

ವಿದ್ಯಾರ್ಥಿಗಳಿಗಾಗಿ ವೆಬಿನಾರ್‌

2026-27ನೇ  ಕೇಂದ್ರ ಮುಂಗಡ ಪತ್ರದಲ್ಲಿ ಘೋಷಿಸಲಾದ ಪ್ರಮುಖ ಉಪಕ್ರಮಗಳ ಕುರಿತು  ಚರ್ಚಿಸಲು  ನೀತಿ- ನಿರೂಪಕರು, ಉದ್ಯಮ ಪ್ರಮುಖರು , ಶೈಕ್ಷಣಿಕ ಸಂಸ್ಧೆಗಳು, ನವೋದ್ಯಮಗಳು ಮತ್ತು ವಿದ್ಯಾರ್ಥಿಗಳಿಗೆ ಈ ವೆಬಿನಾರ್ ಉತ್ತಮ ವೇದಿಕೆಯಾಗಿದೆ. ಶಾಲಾ-ಕಾಲೇಜುಗಳಲ್ಲಿ ವಿಷಯ ರಚನೆಕಾರರ ಪ್ರಯೋಗಾಲಯ – AVGC ಕುರಿತ  ಅಧಿವೇಶನ ಆಯೋಜಿಸಿದ್ದು, ದೇಶಾದ್ಯಂತ 15 ಸಾವಿರ ಶಾಲೆಗಳು ಹಾಗೂ 500 ಉನ್ನತ ಸಂಸ್ಥೆಗಳಲ್ಲಿ  ವಿಷಯ ರಚನೆಕಾರರ  ಪ್ರಯೋಗಾಲಯಗಳನ್ನು ಸ್ಥಾಪಿಸಲು ಕೇಂದ್ರ ಬಜೆಟ್ ನಲ್ಲಿ   ಘೋಷಿಸಲಾಗಿದೆ.   ಇದು ಸೃಜನಶೀಲ ಪ್ರತಿಭೆಯನ್ನು ಪೋಷಿಸುವುದು,  ಅನಿಮೇಷನ್, ವಿಶುಯಲ್ಸ್ ಎಫೆಕ್ಸ್, ಗೇಮಿಂಗ್ ಮತ್ತು ಕಾಮಿಕ್ಸ್, ಪರಿಸರ ವ್ಯವಸ್ಥೆ ಬಲಪಡಿಸುವುದು ಮತ್ತು ದೇಶ ವೇಗವಾಗಿ ವಿಸ್ತರಿಸುವ  ಆರ್ಥಿಕತೆಗಾಗಿ ಕೌಶಲ್ಯಪೂರ್ಣ ಸೃಷ್ಟಿಕರ್ತರ ದೃಢವಾದ ವ್ಯವಸ್ಥೆಯ ಗುರಿ ಹೊಂದಿದೆ.

ಕೊನೆಯ ದಿನ ಅಶ್ವಿನಿ ವೈಷ್ಣವ್ ಭಾಷಣ  

ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ವಿಶೇಷ ಭಾಷಣ ಮಾಡಲಿದ್ದಾರೆ.  ವಿಷಯ ರಚನೆಕಾರರ  ಪ್ರಯೋಗಾಲಯಗಳನ್ನು ಶಾಲಾ ಕಾಲೇಜುಗಳಲ್ಲಿ ಆರಂಭಿಸುವ ಕುರಿತು  QR ಕೋಡ್ ಮೂಲಕ ಸಲಹೆ ಹಾಗೂ ಅಭಿಪ್ರಾಯಗಳನ್ನು ಪಡೆಯಲಾಗಿದೆ.

ಇದನ್ನೂ ಓದಿ: ಉಪರಾಷ್ಟ್ರಪತಿ ಭೇಟಿ ಮಾಡಿದ ಕೇಂದ್ರ ಮಂತ್ರಿಗಳ ನಿಯೋಗ

Leave a Reply

Your email address will not be published. Required fields are marked *