ಬೆಂಗಳೂರು: ಕಳೆದ 3 ವರ್ಷಗಳಿಂದ ರಾಜ್ಯದಲ್ಲಿ 6 ಲಕ್ಷ 70 ಸಾವಿರದ 560 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಹಾಗೂ 2 ಲಕ್ಷ 47 ಸಾವಿರದ 571 ಉದ್ಯೋಗ ಸೃಜನೆಗಾಗಿ 117 ಹೂಡಿಕೆ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ (MB Patil) ಮೇಲ್ಮನೆಯಲ್ಲಿ ತಿಳಿಸಿದ್ದಾರೆ.
57 ಯೋಜನೆಗಳಿಗೆ ಒಪ್ಪಿಗೆ
ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಸಿಟಿ ರವಿ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಒಡಂಬಡಿಕೆ ಮಾಡಿಕೊಂಡಿರುವ ಯೋಜನೆಗಳ ಪೈಕಿ 57 ಯೋಜನೆಗಳು ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಹಾಗೂ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಗಳಲ್ಲಿ ಅನುಮೋದನೆ ಪಡೆದಿವೆ ಎಂದು ಹೇಳಿದ್ದಾರೆ.
6 ಯೋಜನೆ ಅನುಷ್ಠಾನ
ಅನುಮೋದನೆಯಾಗಿರುವ 57 ಯೋಜನೆಗಳ ಪೈಕಿ 6 ಯೋಜನೆಗಳು ಅನುಷ್ಠಾನಗೊಂಡಿದ್ದು, 6ಸಾವಿರದ 654 ಉದ್ಯೋಗ ಸೃಜನೆಯಾಗಿದೆ. ಬಾಕಿ ಯೋಜನೆಗಳು ಅನುಷ್ಠಾನ ಹಂತದಲ್ಲಿವೆ ಎಂದು ಸಚಿವ ಎಂ.ಬಿ.ಪಾಟೀಲ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ, ಕೇಂದ್ರದ ವಿರುದ್ಧ ಡಿಕೆಶಿ ಕಿಡಿ
