ನವದೆಹಲಿ: ಭಾರತ ಎಐ ಇಂಪ್ಯಾಕ್ಟ್ ಶೃಂಗಸಭೆಯ ಹಿನ್ನೆಲೆಯಲ್ಲಿ, ಕೇಂದ್ರ ಆರೋಗ್ಯ ಸಚಿವ ಜೆ ಪಿ ನಡ್ಡಾ (JP Nadda) ಇಂದು ದೆಹಲಿಯಲ್ಲಿ ಬ್ರೆಜಿಲ್ನ ಆರೋಗ್ಯ ಸಚಿವ ಅಲೆಕ್ಸಾಂಡ್ರೆ ಪಡಿಲ್ಹಾ ಅವರನ್ನು ಭೇಟಿಯಾದರು.
ಅನೇಕ ವಿಚಾರಗಳ ಬಗ್ಗೆ ಚರ್ಚೆ
ಈ ಕುರಿತು ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ಸಚಿವರು, ಪ್ರತಿಯೊಬ್ಬರಿಗೂ ಕೈಗೆಟುಕುವ ಆರೋಗ್ಯ ಸೇವೆ ಲಭ್ಯವಾಗಿಸುವ ಕ್ರಮಗಳ ಕುರಿತು ಫಲಪ್ರದ ಚರ್ಚೆ ನಡೆಸಲಾಯಿತು ಎಂದಿದ್ದಾರೆ.
ಆರೋಗ್ಯ ಮತ್ತು ಔಷಧ ಕ್ಷೇತ್ರದಲ್ಲಿ ಉಭಯ ದೇಶಗಳ ನಡುವೆ ಆಳ ಮತ್ತು ಬಲವಾದ ಸಹಕಾರದ ಅಗತ್ಯದ ಕುರಿತು ಒಪ್ಪಿಗೆ ಸೂಚಿಸಲಾಗಿದೆ ಎಂದ ಸಚಿವರು, ಬ್ರೆಜಿಲ್ನೊಂದಿಗೆ ನಿರಂತರ ಸಹಯೋಗವನ್ನು ಎದುರು ನೋಡುತ್ತಿರುವುದಾಗಿ ಹಾಗೂ ಮುಂಬರುವ ಬ್ರಿಕ್ಸ್ ಆರೋಗ್ಯ ಸಚಿವರ ಸಭೆಗೆ ಪಡಿಲ್ಹಾ ಅವರನ್ನು ಭಾರತಕ್ಕೆ ಸ್ವಾಗತಿಸುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಯೂರೋಪಿಯನ್ ಲೀಗಲ್ ಗೇಟ್ ವೇ ಕಚೇರಿ ಉದ್ಘಾಟನೆ ಮಾಡಿದ ಜೈಶಂಕರ್
