ನವದೆಹಲಿ: ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ (Jaishankar) ದೆಹಲಿಯಲ್ಲಿಂದು ಮೊದಲ ಯೂರೋಪಿಯನ್ ಲೀಗಲ್ ಗೇಟ್ ವೇ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಇಡೀ ವಿಶ್ವಕ್ಕೆ ಭಾರತ ಪ್ರತಿಭಾನ್ವಿತರನ್ನ ನೀಡಿದೆ
ಇದೇ ಸಂದರ್ಭದಲ್ಲಿ ಯೂರೋಪಿಯನ್ ಕಮಿಷನ್ ನ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು. ಸಚಿವ ಡಾ. ಎಸ್. ಜೈಶಂಕರ್, ವಿಶ್ವದ ಅತ್ಯಂತ ಹೆಚ್ಚು ಯುವ ಜನಸಂಖ್ಯೆಯನ್ನು ಹೊಂದಿರುವ ದೇಶ ಭಾರತವಾಗಿದೆ. ಉದ್ಯಮಶೀಲತೆಗೆ ಸರಿ ಹೊಂದುವಂತೆ ಯುವ ಜನರನ್ನು ಕೌಶಲ್ಯ ಭರಿತರನ್ನಾಗಿಸಲು ಕ್ರಮ ಕೈಗೊಳ್ಳಲಾಗಿದೆ. ವಿಜ್ಞಾನ ಹಾಗೂ ಉದಯೋನ್ಮುಖ ತಂತ್ರಜ್ಞಾನ ವಲಯದಲ್ಲಿ ಸಾಮರ್ಥ್ಯವಿರುವ ಯುವ ಜನತೆಯನ್ನು ದೇಶ ಹೊಂದಿದ್ದು, ಇಡೀ ವಿಶ್ವಕ್ಕೆ ಪ್ರತಿಭಾನ್ವಿತರನ್ನು ನೀಡುವಲ್ಲಿ ಮುಂಚೂಣಿಯಲ್ಲಿದೆ ಎಂದರು.
ಭದ್ರತೆ ಹಾಗೂ ರಕ್ಷಣಾ ವಲಯ ಸೇರಿದಂತೆ ಮಹತ್ವದ ಕ್ಷೇತ್ರಗಳಲ್ಲಿ ಭಾರತ ಹಾಗೂ ಯೂರೋಪಿಯನ್ ಒಕ್ಕೂಟದ ಸಹಭಾಗಿತ್ವ ಮತ್ತಷ್ಟು ಬಲಗೊಳ್ಳಲಿದೆ. ಭಾರತ ಹಾಗೂ ಯೂರೋಪಿಯನ್ ಒಕ್ಕೂಟದ ರಚನಾತ್ಮಕ ಸಹಭಾಗಿತ್ವವನ್ನು ಇನ್ನಷ್ಟು ಬಲಪಡಿಸುವಲ್ಲಿ ಈ ಕಚೇರಿಯ ಆರಂಭ ಪೂರಕವಾಗಲಿದೆ ಎಂದು ಹೇಳಿದರು
ಇದನ್ನೂ ಓದಿ: ಭಾರತ – ಫ್ರಾನ್ಸ್ ನಡುವೆ ಹೊಸ ಯುಗ ಆರಂಭ: ನರೇಂದ್ರ ಮೋದಿ
