ನವದೆಹಲಿ: ಭಾರತ ಮತ್ತು ರಷ್ಯಾ, (India – Russia) ಭಯೋತ್ಪಾದನೆಯ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳ ವಿರುದ್ಧ ಜಂಟಿಯಾಗಿ ಹೋರಾಡುವ ಸಂಕಲ್ಪ ಮಾಡಿವೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ದೆಹಲಿಯಲ್ಲಿಂದು ಹೇಳಿದ್ದಾರೆ.
ಭಯೋತ್ಪಾದನೆ ಬಗ್ಗೆ ಶೂನ್ಯ ಸಹಿಷ್ಣುತೆ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಯೋತ್ಪಾದನೆಯ ಬಗ್ಗೆ ಭಾರತದ ಶೂನ್ಯ ಸಹಿಷ್ಣುತೆಯ ನಿಲುವನ್ನು ಪ್ರಧಾನಿ ಪುನರುಚ್ಚರಿಸಿದ್ದಾರೆ ಮತ್ತು ಈ ಪ್ರಯತ್ನದಲ್ಲಿ ಭಾರತಕ್ಕೆ ರಷ್ಯಾ ಬೆಂಬಲವನ್ನು ನೀಡುವುದಾಗಿ ಅಧ್ಯಕ್ಷ ಪುಟಿನ್ ಹೇಳಿರುವುದಾಗಿ ಅವರು ತಿಳಿಸಿದ್ದಾರೆ.
ಉಕ್ರೇನ್ನಲ್ಲಿನ ಸಂಘರ್ಷದ ಕುರಿತು ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಅಧ್ಯಕ್ಷ ಪುಟಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಪೂರ್ಣವಾಗಿ ವಿವರಿಸಿದ್ದಾರೆ. ಈ ಸಂಘರ್ಷದ ಕುರಿತು ಭಾರತದ ದೀರ್ಘಕಾಲದ ನಿಲುವನ್ನು ಪ್ರಧಾನಿ ಪುನರುಚ್ಚರಿಸಿದ್ದಾರೆ ಜೊತೆಗೆ, ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಯುದ್ಧವನ್ನು ಆದಷ್ಟು ಬೇಗ ನಿಲ್ಲಿಸುವುದು ಮತ್ತು ಸಂಘರ್ಷದ ಸುಸ್ಥಿರ ಪರಿಹಾರವನ್ನು ನೋಡುವ ಭಾರತದ ಆಸಕ್ತಿಯನ್ನು ಒತ್ತಿ ಹೇಳಿರುವುದಾಗಿ ವಿಕ್ರಮ್ ಮಿಸ್ರಿ ತಿಳಿಸಿದ್ದಾರೆ.
ರಷ್ಯಾದ ಕಜನ್ ಮತ್ತು ಯೆಕಟೆರಿನ್ಬರ್ಗ್ನಲ್ಲಿ ಎರಡು ಹೊಸ ಭಾರತೀಯ ದೂತಾವಾಸ ಕಚೇರಿಗಳನ್ನು ಉದ್ಘಾಟಿಸುವುದಾಗಿ ರಷ್ಯಾ ಅಧ್ಯಕ್ಷರು ತಿಳಿಸಿದ್ದು, ಅದಕ್ಕೆ ಪ್ರಧಾನಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ದೂತಾವಾಸಗಳು ರಷ್ಯಾದಲ್ಲಿ ನಮ್ಮ ಪ್ರಾದೇಶಿಕ ಸಂಪರ್ಕವನ್ನು ಮತ್ತಷ್ಟು ಗಾಢಗೊಳಿಸುತ್ತವೆ. ಇದರ ಜೊತೆಗೆ ಸಂಸ್ಕೃತಿ ಮತ್ತು ಜನರಿಂದ ಜನರಿಗೆ ಸಂಬಂಧಗಳು ಸೇರಿದಂತೆ ಇತರ ರೀತಿಯ ಸಹಯೋಗವನ್ನು ವ್ಯಾಪಾರ, ಶೈಕ್ಷಣಿಕ ವಿನಿಮಯವನ್ನು ಹೆಚ್ಚಿಸುತ್ತವೆ ಎಂದರು.
ಇದನ್ನೂ ಓದಿ: ಗುರಿ ಸಾಧಿಸಿದ ನಂತರವೇ ಯುದ್ದಕ್ಕೆ ಫುಲ್ಸ್ಟಾಪ್, ಉಕ್ರೇನ್ ಯುದ್ದದ ಬಗ್ಗೆ ಪುಟಿನ್ ಮಾತು
