World Cup: U19 ಕ್ರಿಕೆಟ್ ವಿಶ್ವಕಪ್ ಗೆದ್ದ ಭಾರತ, ಶುಭಾಶಯ ತಿಳಿಸಿದ ವಿರಾಟ್‌, ಸಚಿನ್

India Greats Laud U19 Team Historic World Cup Win

ನವದೆಹಲಿ: ಆಯುಷ್ ಮ್ಹಾತ್ರೆ ನೇತೃತ್ವದ ಭಾರತೀಯ ಕ್ರಿಕೆಟ್ ತಂಡವು ಹರಾರೆಯಲ್ಲಿ ನಡೆದ U19 ಕ್ರಿಕೆಟ್ ವಿಶ್ವಕಪ್ (World Cup) ಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸುವ ಮೂಲಕ ಇತಿಹಾಸ ನಿರ್ಮಾಣ ಮಾಡಿದೆ.

ಆರನೇ ವಿಶ್ವಕಪ್‌ ಗಳಿಸಿದ ಕೀತಿ

ಭಾರತೀಯ ತಂಡವು ಈ ಕಪ್‌ ಗೆಲ್ಲುವ ಮೂಲಕ ತನ್ನ ಆರನೇ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ ಆರಂಭಿಕ ಪಂದ್ಯದಲ್ಲಿ ಪ್ರಾಬಲ್ಯ ಮೆರೆದಿತು, ವೈಭವ್ ಸೂರ್ಯವಂಶಿ ಕೇವಲ 80 ಎಸೆತಗಳಲ್ಲಿ 175 ರನ್ ಗಳಿಸಿ ಪಂದ್ಯಕ್ಕೆ ಬುನಾದಿ ಹಾಕಿದ್ದಾರೆ.

ಭಾರತದ ಯುವ ಬೌಲರ್‌ಗಳು ಸಮಯಕ್ಕೆ ಸರಿಯಾಗಿ ವಿಕೆಟ್‌ಗಳನ್ನು ಪಡೆಯುವ ಮೂಲಕ ಗುರಿ ತಲುಪುವ ಮೊದಲೇ ಇಂಗ್ಲಿಷ್ ಬ್ಯಾಟ್ಸ್‌ಮನ್‌ಗಳನ್ನು ನಿರ್ಬಂಧಿಸಿದ್ದು, ಅದ್ಭುತವಾದ ಪ್ರದರ್ಶನ ತೋರಿಸಿದ್ದಾರೆ.

U19 ಕ್ರಿಕೆಟ್ ವಿಶ್ವಕಪ್ ಪಂದ್ಯದಲ್ಲಿ ಭಾರತ ಜಯಗಳಿಸಿದ ನಂತರ, ದೇಶದಾದ್ಯಂತ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿದ್ದು, ಅನೇಕ ಜನರು ಹೆಮ್ಮೆಯ ಆಟಗಾರರಿಗೆ ಅಭಿನಂದನೆ ತಿಳಿಸಿದ್ದಾರೆ.

ಬಹುಮಾನ ಘೋಷಣೆ

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಕಾರ್ಯದರ್ಶಿ ದೇವಜಿತ್ ಸೈಕಿಯಾ, ವಿಜಯಶಾಲಿ ಭಾರತ U19 ತಂಡ, ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿ ಮತ್ತು ಜೂನಿಯರ್ ಕ್ರಿಕೆಟ್ ಸಮಿತಿಗೆ 7.5 ಕೋಟಿ ರೂಪಾಯಿಗಳ ಬಹುಮಾನವನ್ನು ಘೋಷಿಸಿದರು. ಇನ್ನು ವಿರಾಟ್ ಕೊಹ್ಲಿ ಹಾಗೂ ಸಚಿನ್ ತೆಂಡೂಲ್ಕರ್ ಸಹ ಆಟಗಾರರಿಗೆ ಶುಭಾಶಯ ತಿಳಿಸಿದ್ದಾರೆ.

ಇದನ್ನೂ ಓದಿ: ಇದೇ ಕಾರಣಕ್ಕೆ ಭಾರತ ಜೊತೆಗೆ ಆಡಲ್ವಂತೆ ಪಾಕ್‌, ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದೇನು?

Leave a Reply

Your email address will not be published. Required fields are marked *